ಪದವಿ ವಿದ್ಯಾರ್ಥಿಗಳಿಗೆ ಬಿಗ್ ಶಾಕ್ ನೀಡಲಾಗಿದ್ದು, ಜ್ಞಾನಭಾರತಿ, ಬೆಂಗಳೂರು ನಗರ ವಿವಿ ಶುಲ್ಕ ಏರಿಕೆ ಮಾಡಲು ಮುಂದಾಗಿದೆ.
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪದವಿ ಕೋರ್ಸ್ಗಳ ಶುಲ್ಕ ಶೇ 10 ರಷ್ಟು ಏರಿಕೆ ಮಾಡಲು ನಿರ್ಧರಿಸಿವೆ. ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಬೆಂಗಳೂರು ನಗರ ಹಾಗೂ ಜ್ಞಾನಭಾರತಿ ಎರಡು ವಿಶ್ವವಿದ್ಯಾಲಯಗಳ ಶುಲ್ಕ ಹೆಚ್ಚಳ ಮಾಡಿ ಶಾಕ್ ನೀಡಿವೆ. ಬೆಂಗಳೂರಿನ ಎರಡು ಪ್ರತಿಷ್ಠಿತ ವಿಶ್ವವಿದ್ಯಾಲಯಗಳಿಂದ ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಪದವಿ ಹಾಗೂ ಸ್ನಾತಕೋತ್ತರ ಪದವಿ ಕೊರ್ಸ್ಗಳ ಶುಲ್ಕ ಶೇ 10 ಏರಿಕೆಮಾಡಿವೆ.
ಇಂಜನಿಯರಿಂಗ್ ಹಾಗು ಮೆಡಿಕಲ್ ಶುಲ್ಕ ಏರಿಕೆ ಬಳಿಕ ಈಗ ವಿಶ್ವವಿದ್ಯಾಲಯಗಳಲ್ಲಿ ಪದವಿ ಶುಲ್ಕ ಏರಿಕೆಗೆ ಮುಂದಾಗಿವೆ. ಬಿಎ, ಬಿಕಾಂ, ಬಿಎಸ್ಸಿ ಸೇರಿದಂತೆ ಅನೇಕ ಪದವಿ ಪ್ರವೇಶಕ್ಕೆ ಕಳೆದ ವರ್ಷ ಇದ್ದ ಶುಲ್ಕಕ್ಕೆ ಶೇ 10ರಷ್ಟು ಏರಿಕೆ ಮಾಡಲಾಗಿದೆ. 2024-25 ನೇ ಶೈಕ್ಷಣಿಕ ಸಾಲಿನಲ್ಲಿ ಕಾಲೇಜು ಹಾಗೂ ಯೂನಿವರ್ಸಿಟಿಗಳಲ್ಲಿ ಕನಿಷ್ಠ ಶೇ 10 ರಷ್ಟು ಶುಲ್ಕ ಏರಿಕೆಗೆ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ. ಪಿಯುಸಿ ಮುಗಿಸಿ ಉನ್ನತ್ತ ಶಿಕ್ಷಣ ಪಡೆಯುವ ಕನಸು ಹೊತ್ತು ಪದವಿಗೆ ಬರುವ ವಿದ್ಯಾರ್ಥಿಗಳಿಗೆ ಈಗ ಆರ್ಥಿಕ ಹೊರೆ ಬೀಳಲಿದೆ. ಬಿಎ, ಬಿಕಾಂ, ಬಿಎಸ್ಸಿ
ಸೇರಿದಂತೆ ಅನೇಕ ಪದವಿ ಪ್ರವೇಶಕ್ಕೆ ಕಳೆದ ವರ್ಷ ಇದ್ದ ಶುಲ್ಕಕ್ಕೆ ಶೇ 10ರಷ್ಟು ಏರಿಕೆಗೆ ಅವಕಾಶ ನೀಡಿದೆ.
ವಿಶ್ವವಿದ್ಯಾಲಯಗಳ ಆದಾಯ ಕೊರತೆಯ ಕಾರಣ ನೀಡಿ ಪ್ರಸಕ್ತ ವರ್ಷದಲ್ಲಿ ಶೇ 10ರಷ್ಟು ಶುಲ್ಕ ಏರಿಕೆ ಮಾಡಲು ಉನ್ನತ ಶಿಕ್ಷಣ ಇಲಾಖೆ ಅವಕಾಶ ನೀಡಿದೆ. ಹೀಗಾಗಿ
ವಿವಿಗಳು ಶುಲ್ಕ ಏರಿಕೆ ಮಾಡಿಕೊಂಡಿವೆ ಎಂದು ಬೆಂಗಳೂರು ನಗರ ವಿಶ್ವವಿದ್ಯಾಲಯ ಕುಲಪತಿ ಲಿಂಗರಾಜ್ ಗಾಂಧಿ ತಿಳಿಸಿದ್ದಾರೆ.
ಈಗಾಗಲೇ ವಿದ್ಯಾರ್ಥಿಗಳು ದಾಖಲಾತಿಗೆ ಮುಂದಾಗುತ್ತಿದ್ದಾರೆ. ಆದರೆ, ಶುಲ್ಕ ಏರಿಕೆ ನೋಡಿ ಪೋಷಕರು ಹಾಗೂ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ಯುವನಿಧಿ ಹಣವನ್ನು ಶುಲ್ಕದ ಮೂಲಕ ವಸೂಲಿ ಮಾಡುತ್ತಿದೆಯೇ ಗ್ಯಾರಂಟಿ ಸರ್ಕಾರ ಎಂದು ಪೋಷಕರು ಬೇಸರ ವ್ಯಕ್ತಪಡಿಸಿದ್ದಾರೆ.