ಈ ಬಾರಿಯ ಹಿಂದಿ ಬಿಗ್ ಬಾಸ್ ಒಟಿಟಿ ಶೋ ವಿವಾದದ ಮೂಲಕವೇ ಹೆಚ್ಚು ಹೆಚ್ಚು ಸುದ್ದಿಯಾಗುತ್ತಿದೆ. ಇಬ್ಬರು ಹೆಂಡತಿಯ ಜೊತೆ ಬಿಗ್ ಬಾಸ್ ಮನೆಗೆ ಕಾಲಿಟ್ಟಿರುವ ಅರ್ಮಾನ್ ಮಲ್ಲಿಕ್ ಸಹ ಸ್ಪರ್ಧಿಗೆ ಹಲ್ಲೆ ಮಾಡುವ ಮೂಲಕ ಸುದ್ದಿಯಾಗಿದ್ದಾರೆ. ಆದರೆ ಈತನ ಮೇಲೆ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ವೀಕ್ಷಕರ ಆಕ್ರೋಶಕ್ಕೆ ಕಾರಣವಾಗಿದೆ.
ಅರ್ಮಾನ್ ಮಲ್ಲಿಕ್ ಸಹಸ್ಪರ್ಧಿ ವಿಶಾಲ್ ಅವರ ಕೆನ್ನೆಗೆ ಭಾರಿಸಿದ್ದಾರೆ. ವಿಶಾಲ್ ಅವರು ಅರ್ಮಾನ್ ಮಲಿಕ್ ಪತ್ನಿ ಸುಂದರವಾಗಿದ್ದಾರೆ ಎಂದಿದ್ದಾರೆ. ಇದಕ್ಕೆ ಸಿಟ್ಟಾದ ಅರ್ಮಾನ್ ಅವರು ವಿಶಾಲ್ ಮೇಲೆ ಕಿಡಿಕಾರಿದರು. ಆಗ ವಿಶಾಲ್ ‘ಅತ್ತಿಗೆ ಚೆನ್ನಾಗಿದ್ದಾಳೆ’ ಎಂದರು. ಆಗ ಶುರುವಾಯಿತು ಜಗಳ. ನಂತರ ಇದು ಮಿತಿ ಮೀರಿದೆ. ಈ ವೇಳೆ ಅರ್ಮಾನ್ ಅವರು ವಿಶಾಲ್ ಕೆನ್ನೆಗೆ ಬಾರಿಸಿದ್ದಾರೆ. ಇದನ್ನು ಬಿಗ್ ಬಾಸ್ ಮಂದಿ ಸಮರ್ಥಿಸಿಕೊಂಡಿದ್ದಾರೆ. ‘ನಾನು ಆ ಅರ್ಥದಲ್ಲಿ ಹೇಳಿಲ್ಲ’ ಎಂದಿದ್ದಾರೆ ವಿಶಾಲ್ ಹೇಳಿದ್ದಾರೆ.
ಘಟನೆಯ ಕುರಿತು ವಿಶಾಲ್ ಸಹೋದರಿ ನೇಹಾ ಪ್ರತಿಕ್ರಿಯಿಸಿದ್ದು, ‘ಅರ್ಮಾನ್ ಅವರನ್ನು ಎಲಿಮಿನೇಟ್ ಮಾಡಬೇಕು. ಇಲ್ಲದಿದ್ದರೆ ತಪ್ಪು ಸಂದೇಶ ರವಾನೆ ಆಗುತ್ತದೆ. ಮುಂದಿನ ಸೀಸನ್ಗಳಲ್ಲಿ ಸ್ಪರ್ಧಿಗಳು ಹಿಂಸೆ ಮಾಡಲು ಬಯಸುತ್ತಾರೆ. ವಿಶಾಲ್ ಅವರು ಸ್ಟ್ರಾಂಗ್ ಆಗಿದ್ದು ಶೋ ಗೆಲ್ಲಲಿ’ ಎಂದಿದ್ದಾರೆ.