ಮಾಜಿ ಆರಂಭಿಕ ಬ್ಯಾಟರ್ ಗೌತಮ್ ಗಂಭೀರ್, ಇದೀಗ ಟೀಮ್ ಇಂಡಿಯಾದಲ್ಲಿ ಮುಖ್ಯ ಕೋಚ್ ಆಗಿ ಜವಾಬ್ದಾರಿ ಹೊತ್ತಿದ್ದಾರೆ. ಟೀಮ್ ಇಂಡಿಯಾ ಜುಲೈ ಕೊನೇ ವಾರದಲ್ಲಿ ದ್ವಿಪಕ್ಷೀಯ ಸರಣಿಗಳನ್ನಾಡಲು ಶ್ರೀಲಂಕಾಕ್ಕೆ ತೆರಳಲಿದ್ದು, ಈ ಪ್ರವಾಸದೊಂದಿಗೆ ತಮ್ಮ ಕೋಚಿಂಗ್ ಅಭಿಯಾನವನ್ನು ಗಂಭೀರ್ ಆರಂಭಿಸಲಿದ್ದಾರೆ.
ಕೋಚ್ ನೇಮಕಾತಿ ಖಾತ್ರಿಯಾದ ಬಳಿಕ ಮೊದಲ ಬಾರಿ ಮಾತನಾಡಿರುವ ಗೌತಮ್ ಗಂಭೀರ್, ತಮಗೆ ಸಿಕ್ಕಂತಹ ಅತ್ಯಂತ ದೊಡ್ಡ ಗೌರವ ಇದು ಎಂದು ನುಡಿದಿದ್ದಾರೆ.
ಈ ಬಾರಿ ಕೋಚ್ ಕ್ಯಾಪ್ ಧರಿಸಿರುತ್ತೇನೆ ಅಷ್ಟೆ. ಕ್ಯಾಪ್ ಯಾವುದೇ ಆಗಿರಲಿ ಗುರಿ ಒಂದೇ. ದೆಶಕ್ಕೆ ಕೀರ್ತಿ ತರಬೇಕು. 1.4 ಬಿಲಿಯನ್ ಭಾರತೀಯರ ಕನಸು ನನಸಾಗಿಸುವ ಜವಾಬ್ದಾರಿ ಈಗ ನಮ್ಮ ಮೇಲಿದೆ. ಇದನ್ನು ಸಾಧಿಸಲು ನನ್ನಿಂದ ಸಾಧ್ಯವಾದ ಎಲ್ಲ ಪ್ರಯತ್ನ ಮಾಡಲಿದ್ದೇನೆ,” ಎಂದರು.
2009ರಲ್ಲಿ ಐಸಿಸಿ ಟೆಸ್ಟ್ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದ ಗೌತಮ್ ಗಂಭೀರ್, ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲೂ ಕೋಲ್ಕತಾ ನೈಟ್ ರೈಡರ್ಸ್ ತಂಡದ ಕ್ಯಾಪ್ಟನ್ ಆಗಿ 2012 ಮತ್ತು 2024ರಲ್ಲಿ ಟ್ರೋಫಿ ಗೆದ್ದ ಸಾಧನೆ ಮಾಡಿದ್ದರು. 2016ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ ಗೌತಮ್ ಗಂಭೀರ್, ಎಲ್ಲಾ ಮಾದರಿಯ ಕ್ರಿಕೆಟ್ನಲ್ಲಿ 10,324 ರನ್ಗಳನ್ನು ಬಾರಿಸಿದ್ದಾರೆ. ಬಳಿಕ ಐಪಿಎಲ್ ಸೇರಿದಂತೆ ಎಲ್ಲಾ ಮಾದರಿಯ ಕ್ರಿಕೆಟ್ನಿಂದ 2018ರಲ್ಲಿ ಎಳ್ಳು ನೀರು ಬಿಟ್ಟರು.