ಬಿಗ್ ಬಾಸ್ ಒಟಿಟಿ 1ರ ಮನೆಗೆ ಪ್ರೇಮಿಗಳಾಗಿದ್ದ ಜಶ್ವಂತ್ ಬೋಪಣ್ಣ ಹಾಗೂ ನಂದಿನಿ ಎಂಟ್ರಿಕೊಟ್ಟಿದ್ದರು. ಇದ್ದಷ್ಟು ದಿನವೂ ಖುಷಿ ಖುಷಿಯಾಗಿದ್ದ ಜೋಡಿಗಳ ಮಧ್ಯೆ ಕೊನೆ ಕೊನೆಗೆ ಮನಸ್ತಾಪ ಶುರುವಾಗಿತ್ತು. ಬಿಗ್ ಬಾಸ್ ನಿಂದ ಹೊರಬಂದ ಬಳಿಕ ಇಬ್ಬರು ಬ್ರೇಕಪ್ ಮಾಡಿಕೊಂಡಿದ್ದರು. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ನಟಿ ತಿಳಿಸಿದ್ದರು. ಆದರೆ ಕಾರಣ ಏನು ಎಂಬುದು ರಿವೀಲ್ ಆಗಿರಲಿಲ್ಲ. ಇದೀಗ ಜಶ್ವಂತ್ ಹಾಗೂ ನಂದಿನಿ ಬ್ರೇಕ್ ಅಪ್ ಗೆ ಆ ವ್ಯಕ್ತಿಯೇ ಕಾರಣ ಎಂದು ಹೇಳಿದ್ದಾರೆ.
ಪ್ರೇಮಿಗಳಾಗಿದ್ದ ನಂದು ಮತ್ತು ಜಶ್ವಂತ್ ‘ರೋಡೀಸ್ 18’ ಶೋನಲ್ಲಿ ಭಾಗವಿಹಿಸಿದ್ದರು. ಈ ಶೋನಲ್ಲಿ ನಂದು ವಿನ್ನರ್ ಆಗಿದ್ರೆ, ಜಶ್ವಂತ್ ಮೊದಲ ರನ್ನರ್ ಅಪ್ ಆಗಿದ್ರು. ನಂತರ ಕನ್ನಡದ ಒಟಿಟಿ ಬಿಗ್ ಬಾಸ್ಗೆ ಜೊತೆಯಾಗಿ ಬಂದರು.ಆದರೆ ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ಇಬ್ಬರು ದೂರ ದೂರವಾದರು. ಇದೀಗ ಬ್ರೇಕಪ್ ಕುರಿತು ನಟಿ ರಿಯಾಕ್ಟ್ ಮಾಡಿದ್ದಾರೆ.
ನಾವಿಬ್ಬರೂ ಬಿಗ್ ಬಾಸ್ ಕನ್ನಡ ಓಟಿಟಿ 1 ಶೋನಲ್ಲಿ ಭಾಗವಹಿಸಿದ್ವಿ. ಅದರಲ್ಲಿ ಜಶ್ವಂತ್ ಇನ್ನೋರ್ವ ಹುಡುಗಿಯ ಜೊತೆ ಕ್ಲೋಸ್ ಆಗಿದ್ದ. ನನಗೆ ಅದನ್ನು ನೋಡಲು ಆಗಲಿಲ್ಲ. ನಿಮ್ಮ ಹುಡುಗ ಬೇರೆ ಹುಡುಗಿಯ ಜೊತೆ ಇರೋದನ್ನ ಹೇಗೆ ಸಹಿಸಿಕೊಳ್ಳುತ್ತೀರಾ ಅಲ್ವಾ ಶೋನಲ್ಲೇ ಇದು ನನಗೆ ಬಹಳ ಕಷ್ಟವಾಯಿತು. ಆ ಎಮೋಷನ್ಗಳು ನನ್ನೋಳಗೆ ಇತ್ತು. ಹೊರಗೆ ಬರಲಿಲ್ಲ ಎಂದಿದ್ದಾರೆ ನಂದಿನಿ.
ಬಿಗ್ ಬಾಸ್ನಲ್ಲಿ ಅವನು ನನ್ನನ್ನ ಇಗ್ನೋರ್ ಮಾಡ್ತಾ ಇದ್ದದ್ದು, ಗೌರವ ಕೊಡದೇ ಇದ್ದಿದ್ದು ನನಗೆ ಹರ್ಟ್ ಆಯಿತು. ಗೌರವ ಇಲ್ಲ ಅಂದ್ಮೇಲೆ ಕಂಟಿನ್ಯೂ ಮಾಡಬಾರದು ಎನಿಸಿತು. ಹೀಗಾಗಿ ಗೌರವದಿಂದಲೇ ನಾವು ಬ್ರೇಕಪ್ ಮಾಡಿಕೊಳ್ಳೋಣ ಎಂದೆ ಎಂದು ‘ಸ್ಪ್ಲಿಟ್ಸ್ವಿಲ್ಲಾ 15’ ಶೋ ರಿಯಾಕ್ಷನ್ ವಿಡಿಯೋದಲ್ಲಿ ನಂದಿನಿ ಹೇಳಿದ್ದಾರೆ. ಆದರೆ ಜಶ್ವಂತ್ ಜೊತೆ ಕ್ಲೋಸ್ ಇದ್ದ ಆ ಮಹಿಳಾ ಸ್ಪರ್ಧಿ ಯಾರು? ಯಾವ ಹುಡುಗಿಯಿಂದ ಬ್ರೇಕಪ್ ಆಯಿತು ಎಂದು ನಂದಿನಿ ರಿವೀಲ್ ಮಾಡಿಲ್ಲ.