ಹಿಂದೂ ಧರ್ಮದಲ್ಲಿ, ಪ್ರತಿ ದಿನವೂ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ ಮತ್ತು ಪ್ರತಿ ದಿನವು ಒಂದು ಅಥವಾ ಇನ್ನೊಂದು ದೇವರಿಗೆ ಸಮರ್ಪಿತವಾಗಿದೆ. ಅಂತೆಯೇ, ಗುರುವಾರವನ್ನು ಭಗವಾನ್ ವಿಷ್ಣುವಿಗೆ ಸಮರ್ಪಿಸಲಾಗಿದೆ. ಈ ದಿನವು ಸಂಪತ್ತು, ಸಂತೋಷ ಮತ್ತು ಸಮೃದ್ಧಿ, ಉದ್ಯೋಗ, ಮದುವೆ, ಕೆಲಸ ಇತ್ಯಾದಿ ಕೆಲಸಗಳಲ್ಲಿ ಬರುವ ಸಮಸ್ಯೆಗಳಿಗೆ ಪರಿಹಾರವನ್ನು ನೀಡುವ ದಿನವೆಂದು ಹೇಳಲಾಗುವುದು.
ಗುರುವಾರವನ್ನ ಕೇವಲ ವಿಷ್ಣುವಿಗೆ ಮಾತ್ರವಲ್ಲದೇ ಗುರುವಿಗೆ ಸಹ ಮೀಸಲಿಡಲಾಗಿದೆ.
ಈ ದಿನ ನಾವು ದೇವರ ಪೂಜೆ ಹಾಗೂ ವಿಶೇಷ ಕಾರ್ಯಗಳನ್ನ ಮಾಡಿದರೆ ಅದರಿಂದ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಇದೆ. ಹಾಗೆಯೇ, ಮುಖ್ಯವಾಗಿ ಈ ದಿನ ನಾವು ಕೆಲವೊಂದು ತಪ್ಪುಗಳನ್ನ ಮಾಡಬಾರದು. ಮುಖ್ಯವಾಗಿ ಈ ದಿನ ಮಾಡುವ ತಪ್ಪು ಕೆಲಸಗಳು ದುರದೃಷ್ಟವನ್ನು ಹೊತ್ತು ತರುತ್ತದೆ. ಹಾಗಾದ್ರೆ ಗುರುವಾರ ಯಾವ ಕೆಲಸಗಳನ್ನ ಮಾಡಬಾರದು ಎಂಬುದು ಇಲ್ಲಿದೆ.
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗುರುವಾರದಂದು ಕೆಲವು ಕೆಲಸಗಳನ್ನು ಮಾಡುವುದು ಅಥವಾ ಮಾಡದಿರುವುದು ಜೀವನದ ಮೇಲೆ ಪರಿಣಾಮ ಬೀರುತ್ತದೆ. ಅವರ ಪ್ರಕಾರ, ಗುರುವಾರ ಒಬ್ಬ ವ್ಯಕ್ತಿಯು ಕೂದಲು ತೊಳೆಯಬಾರದು, ಕೂದಲು ಅಥವಾ ಉಗುರುಗಳನ್ನು ಕತ್ತರಿಸಬಾರದು, ಬಟ್ಟೆಗಳನ್ನು ತೊಳೆಯುವುದು ಮತ್ತು ದೇಹದ ಮೇಲೆ ಸೋಪ್ ಅನ್ನು ಅನ್ವಯಿಸುವುದನ್ನು ನಿಷೇಧಿಸಲಾಗಿದೆ.
ಬಟ್ಟೆ ತೊಳೆಯಬಾರದು: ಯಾವುದೇ ಕಾರಣಕ್ಕೂ ಗುರುವಾರ ನೀವು ಬಟ್ಟೆ ತೊಳೆಯಬಾರದು ಎನ್ನಲಾಗುತ್ತದೆ. ಬಟ್ಟೆ ತೊಳೆಯುವುದರಿಂದ ವಿಷ್ಣುವಿಗೆ ಕೋಪ ಬರುತ್ತದೆ. ಹಾಗಾಗಿ ನೀವು ಅನಿವಾರ್ಯತೆ ಇಲ್ಲದಿದ್ದರೆ ಬಟ್ಟೆ ತೊಳೆಯಲೇಬಾರದು. ಹಾಗೆಯೇ, ನೀವು ಮನೆಯ ಬಟ್ಟೆ ಒಗೆಯುವವನಿಗೆ ಸಹ ಬಟ್ಟೆಯನ್ನ ಕೊಡಬಾರದು. ಹೀಗೆ
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗುರುವಾರದಂದು ಕೆಲವು ಕೆಲಸಗಳನ್ನು ಮಾಡುವುದು ಅಥವಾ ಮಾಡದಿರುವುದು ಜೀವನದ ಮೇಲೆ ಪರಿಣಾಮ ಬೀರುತ್ತದೆ. ಅವರ ಪ್ರಕಾರ, ಗುರುವಾರ ಒಬ್ಬ ವ್ಯಕ್ತಿಯು ಕೂದಲು ತೊಳೆಯಬಾರದು, ಕೂದಲು ಅಥವಾ ಉಗುರುಗಳನ್ನು ಕತ್ತರಿಸಬಾರದು, ಬಟ್ಟೆಗಳನ್ನು ತೊಳೆಯುವುದು ಮತ್ತು ದೇಹದ ಮೇಲೆ ಸೋಪ್ ಅನ್ನು ಅನ್ವಯಿಸುವುದನ್ನು ನಿಷೇಧಿಸಲಾಗಿದೆ.
ಬಟ್ಟೆ ತೊಳೆಯಬಾರದು: ಯಾವುದೇ ಕಾರಣಕ್ಕೂ ಗುರುವಾರ ನೀವು ಬಟ್ಟೆ ತೊಳೆಯಬಾರದು ಎನ್ನಲಾಗುತ್ತದೆ. ಬಟ್ಟೆ ತೊಳೆಯುವುದರಿಂದ ವಿಷ್ಣುವಿಗೆ ಕೋಪ ಬರುತ್ತದೆ. ಹಾಗಾಗಿ ನೀವು ಅನಿವಾರ್ಯತೆ ಇಲ್ಲದಿದ್ದರೆ ಬಟ್ಟೆ ತೊಳೆಯಲೇಬಾರದು. ಹಾಗೆಯೇ, ನೀವು ಮನೆಯ ಬಟ್ಟೆ ಒಗೆಯುವವನಿಗೆ ಸಹ ಬಟ್ಟೆಯನ್ನ ಕೊಡಬಾರದು. ಹೀಗೆ ಮಾಡುವುದರಿಂದ ವಿಷ್ಣು ಕೋಪಗೊಳ್ಳುತ್ತಾನೆ ಹಾಗೂ ನಮಗೆ ಆರ್ಥಿಕ ಸಮಸ್ಯೆಗಳು ಸಹ ಕಾಡಬಹುದು.
ನೆಲ ಒರೆಸಬಾರದು: ಗುರುವಾರ ನಾವು ಮನೆಯನ್ನ ಯಾವುದೇ ಕಾರಣಕ್ಕೂ ಒರೆಸಬಾರದು. ನಾವು ಕಸ ಗುಡಿಸಿ ಬಿಡಬಹುದು. ನೀವು ಗುರುವಾರ ನೆಲ ಒರೆಸುವುದರಿಂದ ಜಾತಕದಲ್ಲಿ ಗುರುವಿನ ಸ್ಥಾನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನೀವು ಗುರು ದೋಷಕ್ಕೆ ಸಹ ಗುರಿಯಾಗುವ ಸಾಧ್ಯತೆ ಇದೆ. ಇದರಿಂದ ಲಕ್ಷ್ಮಿಗೆ ಸಹ ಕೋಪ ಬರುವ ಸಾಧ್ಯತೆ ಇದೆ. ಹಾಗಾಗಿ ಗುರುವಾರ ನೆಲ ಒರೆಸಬಹುದು.
ತಲೆ ಸ್ನಾನ ಮಾಡಬಾರದು: ಯಾವುದೇ ಕಾರಣಕ್ಕೂ ಮಹಿಳೆಯರು ತಲೆಸ್ನಾನ ಮಾಡಬಾರದು. ನಿಮಗೆ ಅನಿವಾರ್ಯ ಇದ್ದರೆ ಮಾತ್ರ ಮಾಡುವುದು ಬೆಸ್ಟ್. ಗುರುವಾರ ತಲೆಸ್ನಾನ ಮಾಡಿದರೆ ಅದರಿಂದ ಗುರುದೋಷಕ್ಕೆ ತುತ್ತಾಗುವ ಸಾಧ್ಯತೆ ಸಹ ಇದೆ. ಅಲಲ್ದೇ, ಇದು ಗಂಡನ ಆರೋಗ್ಯದ ಮೇಲೆ ಸಹ ಪರಿಣಾಮ ಬೀರುತ್ತದೆ ಎನ್ನಲಾಗುತ್ತದೆ.
ಉಗುರು ಕಟ್ ಮಾಡಬಾರದು: ಗುರುವಾರ ಮಾಡಬಾರದ ಕೆಲಸಗಳಲ್ಲಿ ಕೈ ಮತ್ತು ಕಾಲುಗಳ ಉಗುರುಗಳನ್ನು ಕತ್ತರಿಸುವುದು ಸಹ ಇದೆ. ನಾವು ಗುರುವಾರ ಉಗುರು ಕಟ್ ಮಾಡಿದರೆ ಬಹಳಷ್ಟು ತೊಂದರೆಗಳಾಗುತ್ತದೆ. ಅಲ್ಲದೇ, ಈ ದಿನ ಕೂದಲು ಕಟ್ ಮಾಡುವುದು ಸಹ ಒಳ್ಳೆಯದಲ್ಲ ಎನ್ನಲಾಗುತ್ತದೆ. ಇದರಿಂದ ನಿಮಗೆ ಆರೋಗ್ಯ ಸಮಸ್ಯೆಗಳು ಕಾಣಿಸುವ ಸಾಧ್ಯತೆ ಇರುತ್ತದೆ.
ಗುರುವಾರ ಬಾಳೆಹಣ್ಣು ತಿನ್ನಬಾರದು. ವಿಷ್ಣು ಬಾಳೆ ಮರದಲ್ಲಿ ಇರುತ್ತಾನೆ ಎನ್ನಲಾಗುತ್ತದೆ, ಹಾಗಅಗಿ ಈ ದಿನ ಬಾಳೆ ಮರವನ್ನ ಪೂಜೆ ಮಾಡಬೇಕು. ಆದರೆ ಯಾವುದೇ ಕಾರಣಕ್ಕೂ ಬಾಳೆಹಣ್ಣನ್ನ ತಿನ್ನಬಾರದು ಎನ್ನಲಾಗುತ್ತದೆ. ಈ ದಿನ ಬಾಳೆಹಣ್ಣು ತಿಂದರೆ ಮಕ್ಕಳ ಸಂತೋಷಕ್ಕೆ ಅಡ್ಡಿಯಾಗುತ್ತದೆ ಎಂದು ಹೇಳಲಾಗುತ್ತದೆ. ಅಲ್ಲದೇ, ಹಣದ ಕೊರತೆಯೂ ಆಗುತ್ತದೆ ಎನ್ನುವ ನಂಬಿಕೆ ಇದೆ. ಹಾಗಾಗಿ ಬಾಳೆಹಣ್ಣನ್ನ ಯಾವುದೇ ಕಾರಣಕ್ಕೂ ತಿನ್ನಬೇಡಿ. ಇದರಿಂದ ನಿಮಗೂ ಒಳ್ಳೆಯ ಫಲಗಳು ಸಿಗುತ್ತದೆ.
ಲಾಂಡ್ರಿ ಸರ್ಫ್ ಮತ್ತು ಸೋಪ್ ಅನ್ನು ಗುರುವಾರ ಖರೀದಿಸಬಾರದು. ಈ ವಸ್ತುಗಳನ್ನು ಖರೀದಿಸುವುದು ನಕಾರಾತ್ಮಕ ಶಕ್ತಿಯನ್ನು ತರುತ್ತದೆ ಮತ್ತು ಇದರಿಂದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಗುರುವಾರ ಕಣ್ಣುಗಳಿಗೆ ಸಂಬಂಧಿಸಿದ ಯಾವುದನ್ನೂ ಖರೀದಿಸಬಾರದು. ಈ ದಿನ ಚೂಪಾದ ವಸ್ತುಗಳನ್ನು ಖರೀದಿಸಬೇಡಿ.ಗುರುವಾರವೂ ಮದ್ಯ-ಮಾಂಸ,