ರಾಜ್ಯದಲ್ಲಿ 14-15 ಸ್ಥಾನ ನಿರೀಕ್ಷೆ ಮಾಡಿದ್ದೆವು ಆದರೆ ಒಂಬತ್ತು ಸ್ಥಾನಗಳು ಬಂದಿತ್ತು ಒಂದು ಸ್ಥಾನದಿಂದ ಒಂಬತ್ತು ಸ್ಥಾನಕ್ಕೆ ಬಂದೆವು ಎಲ್ಲಿ ಎಡವಟ್ಟಾಗಿದೆ ಏನು ಆಗಿದೆ ಎಂಬುದನ್ನ ತಿಳಿಸುತ್ತೇವೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ನಾನು ಹಾಗೂ ಸಿಎಂ ಮಾತನ್ನಾಡಿಕೊಂಡಿದ್ದೇವೆ ನಾಯಕರನ್ನ ಕರೆದು ವಿಚಾರ ವಿನಿಮಯ ಮಾಡುತ್ತೇವೆ ನಾವು ಕೂಡ ರಾಜ್ಯದಲ್ಲಿ ಪ್ರತ್ಯೇಕವಾಗಿ ವರದಿ ಪಡೆಯುತ್ತೇವೆ..ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಿದ್ದೆವು
ಇಡಿ ದಾಳಿ ಬಗ್ಗೆ ಡಿಸಿಎಂ ಡಿ.ಕೆ ಶಿವಕುಮಾರ್ ಅಸಮಾಧಾನ ಈಗ ಇಡಿ ದಾಳಿಯ ಅವಶ್ಯಕತೆ ಇರಲಿಲ್ಲ ಈಗಾಗಲೇ ಎಸ್ಐಟಿ ತನಿಖೆ ನಡೆಯುತ್ತಿದೆ.ಪ್ರಕರಣ ಸಂಬಂಧ ನೋಟಿಸ್ ನ್ನ ಕೊಟ್ಟು ತನಿಖೆ ನಡೆಸುತ್ತಿದೆ ಸಿಬಿಐ ತನಿಖೆ ನಡೆಸಲು ಅವರಿಗೆ ಅವಕಾಶ ಇತ್ತು ಆದರೆ ಇಡಿ ತನಿಖೆ ನಡೆಸಲು ಅವಕಾಶ ಇರಲಿಲ್ಲ ಆದರೂ ತನಿಖೆ ನಡೆಸುತ್ತಿದ್ದಾರೆ