ಅವರಿಬ್ಬರು ಬದುಕಿನ ಬಂಡಿಯನ್ನು ಸಾಗಿಸಲು ಸಾರಥಿಯಾಗಿ ಕೆಲಸ ಮಾಡುತ್ತಿದ್ದರು ಅದಲ್ಲದೆ ಇಬ್ಬರು ಕೂಡ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತಿದ್ದ ಸ್ನೇಹಿತರು ಕೂಡ ಆಗಿದ್ದರು ಆದರೆ ಹಣ ಕಾಸಿನ ವಿಚಾರಕ್ಕೆ ಇಬ್ಬರ ಸ್ನೇಹ ಕೂಡ ಕೊಲೆಯಲ್ಲಿ ಅಂತ್ಯವಾಗಿದೆ ಹಾಗಾದರೆ ಯಾರು ಆ ಸಾರಥಿಗಳು ಯಾಕೆ ಹೀಗಾಯ್ತು ಅಂತಿರಾ ಈ ಸ್ಟೋರಿ ನೋಡಿ…..
ಇದು ಪ್ರತಿಷ್ಠಿತ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಈ ವಿಮಾನ ನಿಲ್ದಾಣದ ಪಾರ್ಕಿಂಗ್ ನಲ್ಲಿ ಗ್ರಾಹಕರಿಗಾಗಿ ಕಾಯುತ್ತಿರುವ ಟ್ಯಾಕ್ಸಿ ಚಾಲಕರು ಇದರ ಮದ್ಯೆ ಮದ್ಯರಾತ್ರಿ ಸದ್ದು ಮಾಡಿಕೊಂಡು ಬರುತ್ತಿರುವ ಆಯಂಬುಲೇನ್ಸ್ ಈ ಎಲ್ಲಾ ದ್ಯಶ್ಯಗಳು ಕಂಡು ಬಂದಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಸಮೀಪದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪಾರ್ಕಿಂಗ್ ಏಳರಲ್ಲಿ ಅಂದಹಾಗೆ ಚಿಕ್ಕಬಳ್ಳಾಪುರ ಮೂಲದ ಲೋಕೇಶ್ ಮತ್ತು ಮುತ್ತುರಾಜ್ ಇಬ್ಬರು ಕೂಡ ಸ್ನೇಹಿತರು ಒಂದೆ ಕಂಪನಿಯ ಕೆ ಎಸ್ ಟಿ ಡಿಸಿ ಟ್ಯಾಕ್ಸಿಗಳನ್ನು ಚಾಲನೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು ಜೊತೆಗೆ ಕಷ್ಟ ಸುಖಕ್ಕಾಗಿ ಹಣ ಕಾಸಿನ ವ್ಯವಹಾರ ಕೂಡ ಇಟ್ಟುಕೊಂಡಿದ್ದರು ಲೋಕೇಶನ ಬಳಿ ದಿನೆ ದಿನೆ ಪಡೆದ ಸಾಲ ಆರು ಲಕ್ಷ ರೂಪಾಯಿಗಳಾಗಿದ್ದವು ನಿನ್ನೆ ರಾತ್ರಿ ಕೂಡ
ಮುತ್ತುರಾಜನನ್ನ ಹಣ ವಾಪಸ್ ಕೇಳಿದಾಗ ಮಾತಿಗೆ ಮಾತು ಬೆಳೆದು ಜಗಳ ಆಗಿದೆ ಜಗಳ ವಿಕೋಪಕ್ಕೆ ಹೋಗಿ ತಡರಾತ್ರಿ ಆಪಲ್ ಕಟ್ ಮಾಡುವ ಚಾಕುವಿನಿಂದ ಮುತ್ತುರಾಜ ಲೋಕೇಶನ ಎದೆಗೆ ಚುಚ್ಚಿದ್ದಾನೆ ಇನ್ನೂ ತೀವ್ರ ರಕ್ತಸ್ರಾವವಾದ ಹಿನ್ನೆಲೆ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮದ್ಯೆಯೆ ಲೋಕೇಶ್ ಸಾವನ್ನಪ್ಪಿದ್ದಾನೆ
ಇನ್ನೂ ತುತ್ತಿನ ಚೀಲ ತುಂಬಿಸಿಕೊಳ್ಳಲು ಹೆಂಡತಿ, ಮಕ್ಕಳು ಕುಟುಂಬಸ್ಥರನ್ನು ಬಿಟ್ಟು ರಾತ್ರಿಯಿಡೀ ದುಡಿದು, ಕೆಲವೊಮ್ಮೆ ವಾರ ಆದರೂ ಕುಟುಂಬದ ಮುಖ ನೋಡಲೂ ಆಗದ ಸ್ಥಿತಿಯಲ್ಲಿ ದುಡಿಮೆ ಮಾಡಿ ಇವರು ಹಣ ಕಾಸಿನ ವಿಚಾರಕ್ಕೆ ಕೊಲೆಯಾಗಿದ್ದು ದುರಂತ ಸಂಗತಿ ಈಗ ಇಬ್ಬರು ಚಾಲಕರ ಕುಟುಂಬಗಳು ಬೀದಿಗೆ ಬಂದಿವೆ. ನಮ್ಮ ತಂದೆ ಇವತ್ತು ನಾಳೆ ಮನೆಗೆ ಬರುತ್ತಾರೆ ಎಂದು ಕಾಯುತ್ತಿದ್ದ ಮಕ್ಕಳಿಗೆ ಓರ್ವ ಹೆಣವಾಗಿ ಮನೆ ಸೇರಿದರೆ, ಇನ್ನೊಬ್ಬ ಮಕ್ಕಳನ್ನೂ ನೋಡಲು ಆಗದೆ ಜೈಲು ಪಾಲಾಗಿದ್ದಾನೆ. ರಾತ್ರಿ ಪಾರ್ಕಿಂಗ್ ಸ್ಥಳದಲ್ಲಿ ಜೊತೆಯಾದ ಸ್ನೇಹಿತನ ಎದೆಗೆ ಹಣ್ಣು ಕಟ್ ಮಾಡುವ ಚಾಕುವಿನಿಂದ ಹಿರಿದು ಕೊಲೆ ಮಾಡಲಾಗಿದೆ. ಇನ್ನೂ ಸ್ಥಳಕ್ಕೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ
ನಿಲ್ದಾಣದ ಪೋಲೀಸರು ಭೇಟಿ ನೀಡಿದ್ದು, ಕೊಲೆ ಆರೋಪಿಯ ಮುತ್ತರಾಜನನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಹಣದಿಂದ ನಂಟು, ಹಣದಿಂದ ಕಂಟು ಎಂಬ ಗಾದೆ ಮಾತಿನಂತೆ ಹಣದಿಂದಲೇ ಸ್ನೇಹಿತನ ಕೊಲೆಯಾಗಿದೆ. ಇಬ್ಬರು ಕುಡ ಕೂತು ಮಾತು ಕತೆಯಲ್ಲಿ ಬಗೆಹರಿಕೊಳ್ಳಬಹುದಾದ ಸಮಸ್ಯೆಯನ್ನಾ ಎಂದೂ ಬಗೆಹರಿಯದ ರೀತಿ ಮಾಡಿಕೊಂಡಿದ್ದು ಮಾತ್ರ ನಿಜಕ್ಕೂ ದುರಂತ