ಬೆಂಗಳೂರಿನಲ್ಲಿ ಇರುವ ಹೈ ಫೈ ಜೀವನ ಪ್ರತಿಯೊಬ್ಬರ ಕನಸಾಗಿರುತ್ತೆ.. ಆದರೆ ಇಲ್ಲಿ ಬಂದಾಗ ಬೆಂಗಳೂರಿನ ಅಸಲಿ ಜಗತ್ತು ಅನಾವರಣ ಗೊಳ್ಳುತ್ತೆ.. ಬೆಂಗಳೂರಿನ ಹದಗೆಟ್ಟಿರುವ ರಸ್ತೆ.. ವಾಸನೆಯ ಫುಟ್ ಪಾತ್ ಜೊತೆಗೆ ಅಲ್ಲಲ್ಲಿ ಮರದ ಮೇಲೆ ನೇತಾಡುವ ಕೇಬಲ್ ಇದೆಲ್ಲಾ ದೇವರಿಗೆ ಚನ್ನ.
ಕೇಬಲ್ ಗಳನ್ನು ತೆರವು ಮಾಡಕ್ಕೆ ಬೆಸ್ಕಾಂ ಯಿಂದ ಪ್ರತಿ ಬಾರಿ ಪ್ರಯತ್ನ ಮಾಡ್ತಾನೇ ಇದ್ದಾರೆ ಆದ್ರೆ ಯಾವ ಪ್ರಯೋಜನವೂ ಇಲ್ಲ.. ಅದಕ್ಕ ಇದೀಗ ಡೆಡ್ ಲೈನ್ ನೀಡಿದ್ದಾರೆ..
ನಗರದಲ್ಲಿ ಯಾವ ರಸ್ತೆ ಅಥವಾ ಫುಟ್ ಪಾತ್ ನಲ್ಲಿ ಕಾಲ್ ಇಟ್ರೂ ಕೇಬಲ್ ಹಾವಳಿ ಮಾತ್ರ ತಪ್ಪಿಲ್ಲ. ಅಧಿಕಾರಿಗಳು ಕೇಬಲ್ ತೆರವು ಮಾಡಿದ್ರೂ ಕೂಡ ಮತ್ತೆ ಅದೇ ಜಾಗದಲ್ಲಿ ಕೇಬಲ್ ಪ್ರತ್ಯಕ್ಷ ಆಗಿರುತ್ತೆ…
ಇದಕ್ಕೆ ಫುಲ್ ಸ್ಟಾಪ್ ಇಡಲು ಬೆಸ್ಕಾಂ ಮುಂದಾಗಿದೆ..
ತನ್ನ ವ್ಯಾಪ್ತಿಯೊಳಗೆ ಬುರುವ ವಿದ್ಯುತ್ ಕಂಬಗಳಲ್ಲಿ ಅಳವಡಿಸಿರುವ ಅನಧಿಕೃತ ಎಲ್ಲಾ OFC , ಡಾಟ ಹಾಗೂ ಡಿಶ್ ಕೇಬಲ್ ಗಳನ್ನು ಸೋಮವಾರದೊಳಗೆ ತೆರವು ಮಾಡಬೇಕು ಎಂದು ಬೆಸ್ಕಾಂ ಆದೇಶ ಹೊರಡಿಸಿದೆ.ಈ ಸಂಬಂಧ ಗಂಭಿರವಾಗಿ ಪರಿಗಣಿಸಬೇಕು ಎಂದು ಸಂಬಂಧಿಸಿದ ಇಂಟರ್ ನೆಟ್ ಸೇವಾ ಕಂಪನಿಗಳು, ಟಿವಿ ಕೇಬಲ್ ಆಪರೇಟರ್ಗಳಿಗೆ ಬೆಸ್ಕಾಂ ಎಚ್ಚರಿಕೆ ನೀಡಿ ಗಡವು ಕೊಟ್ಟಿದೆ.
ಒಂದೇ ವೇಳೆ ಸೂಚಿಸಿರುವ ಡೆಡ್ಲೈನ್ ಒಳಗೆ ಈ ಕೆಲಸ ಮಾಡದಿದ್ದರೆ, ಖುದ್ದು ಬೆಸ್ಕಾಂ ಅವುಗಳನ್ನು ಯಾವುದೇ ಸೂಚನೆ ನೀಡದೆ ತೆರವುಗೊಳಿಸಲಿದೆ. ಅಲ್ಲದೇ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಿದೆ ಎಂದೂ ಬೆಸ್ಕಾಂ ತನ್ನ ಪ್ರಕಟಣೆ ಮೂಕಲ ಎಚ್ಚರಿಕೆ ನೀಡಿದೆ.ಈ ಹಿಂದೆ ಅನಧಿಕೃತ ಕೇಬಲ್ ಗಳನ್ನು ಬೆಸ್ಕಾಂ ತೆರವೂ ಮಾಡಿದ್ದರೂ ಮತ್ತೇ ಇಂತಹ ಪ್ರಕರಣಗಳು ಹೆಚ್ಚಾಗಿವೆ. ಹೀಗಾಗಿ ಮತ್ತೊಮ್ಮೆ ಬೆಸ್ಕಾಂ ವಿಶೇಷ ಕಾರ್ಯಾಚರಣೆ ನಡೆಸಲಿದೆ
.ಒಟ್ಟಾರೆ ಪ್ರತಿ ಬಾರಿಯಂತೆ ಈ ಬಾರಿ ಕೂಡ ಬೆಸ್ಕಾಂ ಅದೇ ರಾಗ ಅದೇ ಹಾಡು ಹೇಳ್ತಿದೆ.. ಇದನ್ನ ಯಾವಾಗ ಸರಿ ಮಾಡುತ್ತದೆ ಎಂದು ಕಾದು ನೋಡಬೇಕಿದೆ.