ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ ಅಂಡ್ ಗ್ಯಾಂಗ್ ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾರೆ,ದರ್ಶನ್ ಜೈಲು ಸೇರಿದ ದಿನದಿಂದ ಪ್ರತಿ ವಾರ ಅವರ ಕುಟುಂಬದವರು ಬಂದು ಭೇಟಿ ಮಾಡುತ್ತಲೆ ಇದ್ದಾರೆ,ಇಂದು ಕೂಡ ನಟ ದರ್ಶನ್ ಪತ್ನಿ, ಮಗ ಸೇರಿದಂತೆ ಕುಟುಂಬಸ್ಥರು ಜೈಲಿಗೆ ಭೇಟಿ ನೀಡಿ ಬಟ್ಟೆ, ಕೆಲ ವಸ್ತುಗಳನ್ನ ನೀಡಿದ್ದಾರೆ.
ದರ್ಶನ್ ಸ್ಥಿತಿ ಕಂಡು ಕಣ್ಣೀರು ಹಾಕಿದ ಮಗನನ್ನು ಅಪ್ಪಿಕೊಂಡು ದರ್ಶನ್ ಕೂಡ ಕಣ್ಣೀರು ಹಾಕಿ ಭಾವುಕರಾಗಿದ್ದಾರೆ. ಇದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ..
ಹೌದು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿ ಇಂದಿಗೆ 18 ದಿನ ಕಳೆದಿದೆ. ಸರಿಯಾದ ಊಟ, ನಿದ್ದೆ ಇಲ್ಲದೆ ಬಳಲಿ ಬೆಂಡಾಗಿ ಹೋಗಿರುವ ದಚ್ಚು ಮಾನಸಿಕ ಹಾಗೂ ದೈಹಿಕವಾಗಿ ಕುಗ್ಗಿ ಹೋಗಿದ್ದಾರೆ. ಇದರಿಂದಾಗಿ ಇಂದು ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ, ಮಗ ಮತ್ತು ದರ್ಶನ್ ಅಕ್ಕನ ಮಗ ಸೇರಿದಂತೆ ಕುಟುಂಬ ಜೈಲಿಗೆ ಭೇಟಿ ನೀಡಿದ್ರು. ಎಂಡವರ್ ಕಾರಿನಲ್ಲಿ ಆಗಮಿಸಿದ ನಟ ದರ್ಶನ್ಕುಟುಂಬದವರು ಕಾರಿನಲ್ಲಿಯೇ ನೇರವಾಗಿ ಜೈಲಿನ ಆವರಣಕ್ಕೆ ಎಂಟ್ರಿ ಕೊಟ್ಟರು. ದರ್ಶನ್ ಗಾಗಿ ಬ್ಯಾಗ್ ನಲ್ಲಿ ಬಟ್ಟೆಗಳು, ಹಣ್ಣುಗಳು ಸೇರಿದಂತೆ ದೊಡ್ಡದಾದ ಕ್ರೇಟ್ ನಲ್ಲಿ ಕೆಲ ಸ್ನ್ಯಾಕ್ಸ್ ಫುಡ್ ತರಲಾಗಿತ್ತು. ಆದ್ರೆ ಜೈಲಿನ ಒಳಗೆ ಸ್ನ್ಯಾಕ್ಸ್ ಫುಡ್ಗೆ ಅವಕಾಶ ಇಲ್ಲದ ಹಿನ್ನೆಲೆ ಚೆಕ್ ಪೋಸ್ಟ್ ನಲ್ಲಿಯೇ ಪೊಲೀಸರು ತಡೆದು ವಾಪಸ್ ಕಳುಹಿಸಿದ್ರು. ಬಟ್ಟೆಯ ಬ್ಯಾಗ್ ಮತ್ತು ಹಣ್ಣುಗಳನ್ನ ಮಾತ್ರ ದರ್ಶನ್ ಅಕ್ಕನ ಮಗ ಜೈಲಿನ ಒಳಗೆ ಕೊಂಡೊಯ್ದರು. ಭದ್ರತಾ ವಿಭಾಗದ ಬ್ಯಾರಕ್ ಕೊಠಡಿಯಲ್ಲಿದ್ದ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಮತ್ತು ಮಗ ನೋಡುತ್ತಿದ್ದಂತೆ ಮಂದಹಾಸದಿಂದಲೇ ಮಗನನ್ನು ಅಪ್ಪಿಕೊಂಡರು. ಆದ್ರೆ ತಂದೆಯ ಈವೊಂದು ಸ್ಥಿತಿಯನ್ನ ಕಂಡ ದರ್ಶನ್ ಪುತ್ರ ತಂದೆಯನ್ನ ಅಪ್ಪಿಕೊಂಡು ಕಣ್ಣೀರು ಹಾಕಿದ್ದು, ಈ ವೇಳೆ ದರ್ಶನದ ಬಾವುಕರಾಗಿ ಮೌನವಾಗಿ ಕುಳಿತಿದ್ರು ಎನ್ನಲಾಗಿದೆ.
ಇನ್ನು ಪ್ರತಿ ದಿನ ದೇಹವನ್ನ ದಂಡಿಸುತ್ತ ಪೌಷ್ಠಿಕ ಆಹಾರವನ್ನು ಸೇವಿಸುತ್ತಿದ್ದ ದರ್ಶನ್ ಜೈಲು ಸೇರಿದ ದಿನದಿಂದ ಜೈಲಿನ ಊಟಕ್ಕೆ ಒಗ್ಗದೆ ಮನೆಯ ಊಟಕ್ಕೆ ಕೋರ್ಟ್ ಮೊರೆ ಹೋಗಿದ್ದಾರೆ,ನನಗೆ ಜೈಲಿನಲ್ಲಿ ಕೊಡುತ್ತಿರುವ ಊಟ ನನಗೆ ಅಡ್ಜಸ್ಟ್ ಆಗುತ್ತಿಲ್ಲ ಮನೆಯ ಊಟಕ್ಕೆ ಅನುಮತಿ ನೀಡುವಂತೆ ಹೈಕೋರ್ಟಿಗೆ ತಮ್ಮ ವಕೀಲರ ಮೂಲಕ ರಿಟ್ನಅರ್ಜಿ ಸಲ್ಲಿಸಿದ್ದು ಹೈಕೋರ್ಟ್ ಅರ್ಜಿಯ ವಿಚಾರಣೆಯನ್ನು 18 ತಾರಿಕಿಗೆ ಮುಂದೂಡಿದೆ.
ಇನ್ನೂ ರೇಣುಕಾಸ್ವಾಮಿ ಕೊಲೆ ಕೇಸ್ನ A1 ಆರೋಪಿ ಪವಿತ್ರಾ ಗೌಡ ಭೇಟಿಗೆ ತಾಯಿ ಮತ್ತು ತಂಗಿಯ ಮಗ ಬೆಳಿಗ್ಗೆ 10 ಗಂಟೆ ಸುಮಾರಿಗೆ ಜೈಲು ಅವರಣಕ್ಕೆ ಆಗಮಿಸಿದ್ದರು. ಜೈಲಿನ ಮಹಿಳಾ ಬ್ಯಾರಕ್ ನಲ್ಲಿದ್ದ ಪವಿತ್ರಾ ಗೌಡ ತಾಯಿಯನ್ನ ಕಾಣುತ್ತಿದ್ದಂತೆ ಕಣ್ಣೀರು ಹಾಕಿದ್ದಾರೆ. ನಟ ದರ್ಶನ್ ಅಂತರ ಕಾಯ್ದುಕೊಳ್ಳುತ್ತಿರುವ ಬಗ್ಗೆ ಗೋಳಾಡಿರುವ ಪವಿತ್ರಾ
ತಾನು ಏನು ತಪ್ಪು ಮಾಡಿದೆ ಎಂದು ನನಗೆ ಈ ಶಿಕ್ಷೆ ರೇಣುಕಾಸ್ವಾಮಿ ಕೆಟ್ಟದಾಗಿ ಮ್ಯಾಸೇಜ್ ಮಾಡಿದ್ದನ್ನು ನಾನು ತಿಳಿಸಿದ್ದು ನನ್ನ ತಪ್ಪಾ…? ನನ್ನಿಂದಲೇ ತಪ್ಪಾಯಿತು ಎಂಬಂತೆ ನಟ ದರ್ಶನ್ ವರ್ತಿಸುತ್ತಿದ್ದಾರೆ. ನನ್ನ ಬಾಳಿನ ಜೊತೆ ಆಟವಾಡುತ್ತಿದ್ದಾರೆ ಎಂದು ಕಣ್ಣೀರು ಹಾಕಿದ್ದಾರೆ.
ಜೊತೆಗೆ ಜೈಲುವಾಸದಿಂದ ಐರಾಣಾಗಿರುವ ಪವಿತ್ರಾ ಜೈಲಿನ ಊಟ ಸೇರಿದಂತೆ ಅಲ್ಲಿನ ಪರಿಸ್ಥಿತಿ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು, ಮನೆ ಊಟ, ಮನೆಯ ವಸ್ತುಗಳ ಬಳಕೆಗೆ ವಕೀಲರ ಮೂಲಕ ಕೋರ್ಟ್ ಅನುಮತಿ ಕೇಳುವಂತೆ ತಾಯಿಗೆ ತಿಳಿಸಿದ್ದಾರೆ. ಈ ವೇಳೆ ಪವಿತ್ರಾಗೌಡಗೆ ತಾಯಿ ಕೆಲ ಸಾಂತ್ವನದ ಮಾತುಗಳನ್ನ ಹೇಳಿ ಧೈರ್ಯ ತುಂಬಿ ಬಂದಿದ್ದಾರೆ ಎನ್ನಲಾಗಿದೆ. ಇನ್ನೂ ತಾಯಿ ಭೇಟಿ ಬೆನ್ನಲೇ ಪವಿತ್ರಾ ಭೇಟಿಗೆ ವಕೀಲ ನಾರಾಯಣಸ್ವಾಮಿ ಆಗಮಿಸಿದ್ದು, ಮನೆ ಊಟ, ಬಟ್ಟೆ, ಇತರೆ ವಸ್ತುಗಳಿಗಾಗಿ ವಕೀಲರ ಮೂಲಕ ಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೇ ಎನ್ನಲಾಗುತ್ತಿದೆ.
ಒಟ್ಟಿನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪವಿತ್ರಾ ಗೌಡ ಮತ್ತು ದರ್ಶನ್ ನಡುವಿನ ಸಂಬಂಧ ಜೈಲಿನಲ್ಲಿಯೇ ಅಂತ್ಯ ಕಾಣುವ ಸ್ಥಿತಿ ತಲುಪಿದಂತೆ ಕಾಣುತ್ತಿದೆ. ಜೈಲಿನಲ್ಲಿ ಮಾಡಿದ ತಪ್ಪಿನ ಪ್ರಾಯಶ್ಚಿತವನ್ನ ದರ್ಶನ್ ಅನುಭವಿಸುತ್ತಿದ್ರೆ, ಇತ್ತ ದರ್ಶನ್ ತನ್ನನ್ನ ದೂರ ಮಾಡುತ್ತಿದ್ದಾನೆ ಎಂದು ಪವಿತ್ರಾ ಕೊರಗುವಂತಾಗಿದೆ.