ಬೆಂಗಳೂರು: ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ ಕೆಪಿಟಿಸಿಎಲ್, ಎಸ್ಕಾಂ ನೌಕರರಿಗೆ ಶೇ.20, ವೇತನ ಹೆಚ್ಚಿಸಿ ಇಂಧನ ಇಲಾಖೆ ಅಪರ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಬೊಮ್ಮಾಯಿ ಅವರು ಇಂದೇ ವೇತನ ಪರಿಷ್ಕರಣೆ ಸಂಬಂಧ ಆದೇಶ ಹೊರಡಿಸಲಾಗುವುದು ಎಂದಿದ್ದರು. ಇದೀಗ ಇಂಧನ ಇಲಾಖೆ ನೌಕರರ ವೇತನ ಹೆಚ್ಚಿಸಿ ಆದೇಶಿಸಿದೆ.
ಏಪ್ರಿಲ್ 1, 2022ರಿಂದ ಜಾರಿಗೆ ಬರುವಂತೆ ಕವಿಪ್ರನಿನಿ ಮತ್ತು ಎಸ್ಕಾಂ ಸಿಬ್ಬಂದಿಯ ವೇತನ 20% ಹೆಚ್ಚಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಕವಿಪ್ರನಿನಿ ಹಾಗೂ ಇತರ ಎಸ್ಕಾಂಗಳ ನೌಕರರ ವೇತನ ಪರಿಷ್ಕರಣೆಯ ಕುರಿತು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿತ್ತು. ಪ್ರಸ್ತಾವನೆಯನ್ನು ಸರ್ಕಾರದಲ್ಲಿ ಪರಿಶೀಲಿಸಿದ ನಂತರ, ಕವಿಪ್ರನಿನಿ ಹಾಗೂ ಎಸ್ಕಾಂಗಳಲ್ಲಿ ಈಗಿರುವ ಅಧಿಕಾರಿ/ನೌಕರರ ವೇತನದ ಮೇಲೆ ಏಪ್ರಿಲ್ 2022 ರಿಂದ ಜಾರಿಗೆ ಬರುವಂತೆ ಶೇ. 20ರಷ್ಟನ್ನು ಹೆಚ್ಚಿಸಿ ಪರಿಷ್ಕರಿಸಲು ಅನುಮೋದಿಸಲಾಗಿದೆ.