ಭಾರತ ಕ್ರಿಕೆಟ್ ತಂಡಕ್ಕೆ ಹೆಡ್ ಕೋಚ್ ಆದ ಬಳಿಕ ಗೌತಮ್ ಗಂಭೀರ್ ಮಾಜಿ ಕೋಚ್ ಹಾಗೂ ದಿಗ್ಗಜ ರಾಹುಲ್ ದ್ರಾವಿಡ್ಗೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ. ಅಲ್ಲದೆ ಟೀಮ್ ಇಂಡಿಯಾಗೆ ಹೆಡ್ ಕೋಚ್ ಆಗುವುದು ಅತ್ಯಂತ ಗೌರವದ ಸಂಗತಿಯಾಗಿದೆ.
2021ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡಕ್ಕೆ ಹೆಡ್ ಕೋಚ್ ಆಗಿ ನೇಮಕಗೊಂಡಿದ್ದ ರಾಹುಲ್ ದ್ರಾವಿಡ್ ಅವರು, 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ತಮ್ಮ ಮಾರ್ಗದರ್ಶನದಲ್ಲಿ ತಂಡವನ್ನು ಚಾಂಪಿಯನ್ ಮಾಡಿದ ಬಳಿಕ ತಮ್ಮ ಹುದ್ದೆಯನ್ನು ತೊರೆದಿದ್ದಾರೆ.
ಅಂದ ಹಾಗೆ ಅವರ ಹೆಡ್ ಕೋಚ್ ಅವಧಿ ಅಂತ್ಯವಾಗಿದೆ.
2023ರ ಐಸಿಸಿ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಹಾಗೂ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ನಲ್ಲಿ ಸೋತು ರನ್ನರ್ ಅಪ್ ಆಗಿತ್ತು. ಇದೀಗ ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಜಂಟಿ ಆತಿಥ್ಯದಲ್ಲಿ ನಡೆದಿದ್ದ ಟಿ20 ವಿಶ್ವಕಪ್ನಲ್ಲಿ ಭಾರತ ತಂಡ ಚಾಂಪಿಯನ್ ಆಗಿದೆ.
“ನನ್ನ ತ್ರಿವರ್ಣ, ನನ್ನ ಜನರು, ನನ್ನ ದೇಶಕ್ಕೆ ಸೇವೆ ಸಲ್ಲಿಸುವುದು ಸಂಪೂರ್ಣ ಗೌರವವಾಗಿದೆ. ರಾಹುಲ್ ದ್ರಾವಿಡ್ ಮತ್ತು ಅವರ ತಂಡದೊಂದಿಗೆ ಅನುಕರಣೀಯವಾಗಿ ಸಾಗಿದ್ದಕ್ಕಾಗಿ ಅವರ ಸಹಾಯಕ ಸಿಬ್ಬಂದಿಯ ವಿಭಾಗವನ್ನು ಅಭಿನಂದಿಸಲು ನಾನು ಈ ಅವಕಾಶವನ್ನು ಬಳಸಿಕೊಳ್ಳಲು ಬಯಸುತ್ತೇನೆ. ಟೀಮ್ ಇಂಡಿಯಾದ ಮುಖ್ಯ ಕೋಚ್ ಪಾತ್ರವನ್ನು ವಹಿಸಿಕೊಳ್ಳಲು ನಾನು ಗೌರವ ಮತ್ತು ಉತ್ಸುಕನಾಗಿದ್ದೇನೆ, ” ಎಂದು ಭಾರತ ತಂಡದ ನೂತನ ಹೆಡ್ ಕೋಚ್ ಗಂಭೀರ್ ಹೇಳಿದ್ದಾರೆ.