ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಿಎಂ ಸ್ಥಾನದ ವಿಷಯವಾಗಿ ದಿನಕ್ಕೊಂದು ಸಂಚಲನ ಸೃಷ್ಟಿಯಾಗುತ್ತಿದ್ದು ಡಿಕೆಶಿ ಹಾಗೂ ಸಿಎಂ ಬಣದವರಿಂದಲೇ ದಿನಕ್ಕೊಂದು ಸ್ಫೋಟಕ ಮಾಹಿತಿಗಳು ಹೊರಬೀಳುತ್ತಿವೆ.
ಇದರ ನಡುವೆ ಇಂದು ದೆಹಲಿಯಲ್ಲಿ ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದಂತೆ ರೋಚಕ ಬೆಳವಣಿಗೆಯೊಂದು ನಡೆದಿದ್ದು ಆ ಇಬ್ಬರ ನಾಯಕರ ಭೇಟಿ ಮತ್ತಷ್ಟು ಕುತೂಹಲವನ್ನು ಮೂಡಿಸಿದೆ.
ರಾಜ್ಯ ಸರ್ಕಾರದ ಪ್ರಭಾವಿ ಮಂತ್ರಿ ಹಾಗೂ ಸಿಎಂ ಸಿದ್ದರಾಮಯ್ಯ ಆಪ್ತರಾದ ಸತೀಶ್ ಜಾರಕಿಹೊಳಿ ಅವರು ಇಂದು ಸಂಸದರಾದ ಎಚ್.ಡಿ.ಕುಮಾರಸ್ವಾಮಿ ಅವರನ್ನ ಭೇಟಿಯಾಗಿದ್ದು ಇಬ್ಬರು ರಹಸ್ಯವಾಗಿ ಮಾತನಾಡಿಕೊಂಡಿದ್ದಾರೆ .ಈ ವೇಳೆ ತಮ್ಮ ಅಧಿಕಾರಿಗಳನ್ನೆಲ್ಲಾ ಹೊರಗಿಟ್ಟು ಇಬ್ಬರೇ ರಹಸ್ಯ ಚರ್ಚೆ ನಡೆಸಿದ್ದಾರೆ.
ಈ ಇಬ್ಬರು ಮಾತುಕತೆ ನಡೆಸುತ್ತಿರುವುದು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದು ಮುಂದಿನ ಬೆಳವಣಿಗೆಗಳ ಕುರಿತು ಮಾತಾಗಿರಬಹುದೆಂಬ ಸಂಶಯಗಳು ಹಲವರಲ್ಲಿ ಉಂಟಾಗಿದ್ದು ಏನಾಗುತ್ತೆ ಎಂಬುದನ್ನ ಕಾದು ನೋಡಬೇಕಿದೆ.