ನಟಿ ಪವಿತ್ರಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಎನ್ನುವ ಕಾರಣಕ್ಕೆ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್, ನಟಿ ಪವಿತ್ರ ಗೌಡ ಸೇರಿ ಪಟ್ಟು 17 ಜನರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ದರ್ಶನ್ ಬಂಧನವಾಗಿ ತಿಂಗಳು ಕಳೆದಿದೆ. ಸದ್ಯ ದರ್ಶನ್ ರನ್ನು ಭೇಟಿ ಮಾಡಲು ಕುಟುಂಬಸ್ಥರು ಜೈಲಿಗೆ ಬರುತ್ತಿದ್ದಾರೆ. ನಟನ ಆಪ್ತ ಸ್ನೇಹಿತರೂ ಸಹ ಜೈಲಿಗೆ ಭೇಟಿ ನೀಡಿದ ರ್ಶನ್ ಅವರನ್ನು ಮಾತನಾಡಿಸಿಕೊಂಡು ಬಂದಿದ್ದಾರೆ. ಅಂತೆಯೇ ದರ್ಶನ್ ಆಪ್ತ ನಟ ಧನ್ವೀರ್ ಗೌಡ ದರ್ಶನ್ ಅವರನ್ನು ಭೇಟಿ ಮಾಡಿ ಸುಮಾರು 20 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ.
ಈ ವೇಳೆ ದರ್ಶನ್ ಯಾವ ಸಿನಿಮಾ ರಿಲೀಸ್ ಆಗುತ್ತಿದೆ..? ಇಂಡಸ್ಟ್ರಿಯಲ್ಲಿ ಏನಾಗುತ್ತಿದೆ..? ಎಂದು ಪ್ರಶ್ನಿಸಿದ್ದಾರಂತೆ. ಇನ್ನು ಧನ್ವಿರ್ಗೆ ಹೆಚ್ಚು ಹೆಚ್ಚು ಸಿನಿಮಾ ಮಾಡುವಂತೆ ದರ್ಶನ್ ಹೇಳಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೆ ಜೈಲಿನಿಂದ ಹೊರಬಂದ ಬಳಿಕ ರೇಣುಕಾಸ್ವಾಮಿ ಕುಟುಂಬಕ್ಕೆ ಸಹಾಯ ಮಾಡೋ ಚಿಂತನೆಯಲ್ಲಿ ದರ್ಶನ್ ಇದ್ದಾರೆ ಎನ್ನಲಾಗಿದೆ. ನಡೆದ ಘಟನೆ ಬಗ್ಗೆ ದರ್ಶನ್ ಸಂಕಟದಲ್ಲೇ ಮಾತನಾಡಿದ್ದಾರೆ ಎನ್ನಲಾಗಿದೆ. ಅಲ್ಲದೆ ನೋವಿನಲ್ಲಿಯೂ ಸಹ ಅಭಿಮಾನಿಗಳಿಗೆ ಸೈಲೆಂಟ್ ಆಗಿರುವಂತೆ ದರ್ಶನ್ ಮನವಿ ಮಾಡಿದ್ದಾರೆ. ಅಲ್ಲದೆ ದರ್ಶನ್ ಗೆ ಜೈಲೂಟ ಸೇರದೆ ಸಾಕಷ್ಟು ಸೊರಗಿದ್ದಾರೆ ಎಂದು ಧನ್ವೀರ್ ಹೇಳಿದ್ದಾರೆ.