ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ ಸೇರಿ ಒಟ್ಟು 17 ಮಂದಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ದರ್ಶನ್ ಬಂಧನವಾಗಿ ತಿಂಗಳು ಕಳೆದಿದ್ದು ದರ್ಶನ್ ರನ್ನು ನೋಡಲು ಕುಟುಂಬಸ್ಥರು ಹಾಗೂ ಸ್ಯಾಂಡಲ್ ವುಡ್ ನಟ,ನಟಿಯರು ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡುತ್ತಿದ್ದಾರೆ. ಇದೀಗ ದರ್ಶನ್ ಬಂಧನವಾಗಿ ಒಂದು ತಿಂಗಳು ಕಳೆದ ಬಳಿಕ ನಟ ವಿಜಯ್ ರಾಘವೇಂದ್ರ ಮಾತನಾಡಿದ್ದಾರೆ.
ನಟ ದರ್ಶನ್ ಜೈಲು ಸೇರಿದ ಬಳಿಕ ಇದೇ ಮೊದಲ ಬಾರಿಗೆ ವಿಜಯ್ ರಾಘವೇಂದ್ರ ಪ್ರತಿಕ್ರಿಯಿಸಿದ್ದಾರೆ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಭಾಗಿ ಆಗಿರೋದು ನೋವು ತರಿಸಿದೆ. ದರ್ಶನ್ ನಮ್ಮ ಕುಟುಂಬದವ್ರು. ನಮ್ಮ ಸೀನಿಯರ್. ದಯವಿಟ್ಟು ಈ ವಿಚಾರದಿಂದ ಎಲ್ಲರೂ ಹೊರಗೆ ಬರಬೇಕು. ಇದನ್ನು ನಾನು ಬೆಳವಣಿಗೆ ಅಂತಾ ಕರಿಯೋಕೆ ಇಷ್ಟ ಪಡಲ್ಲ. ಎಲ್ಲಿ ನೋಡಿದ್ರೂ ಬರೀ ರೇಣುಕಾಸ್ವಾಮಿ ಪ್ರಕರಣ ಸುದ್ದಿಯೇ ಓಡಾಡ್ತಿದೆ. ಡೆವಿಲ್ ಸಿನಿಮಾದ ಶೂಟಿಂಗ್ ನಿಂತಿರೋದು ಮಿಲನಾ ಪ್ರಕಾಶ್ ಅವರಿಗೂ ನೋವು ತಂದಿದೆ ಎಂದಿದ್ದಾರೆ.
ಈ ಪ್ರಕರಣದ ಬಗ್ಗೆ ನಿಜಕ್ಕೂ ಬೇಸರ ಇದೆ. ಈ ಕಹಿ ಘಟನೆ ಬಗ್ಗೆ ಬೇಸರ ಇದೆ. ಪರಿಸ್ಥಿತಿಯೇ ಗೊಂದಲದಲ್ಲಿದೆ. ಇಲ್ಲಿ ಸರಿ-ತಪ್ಪಿನ ಬಗ್ಗೆ ನಾವು ಏನು ಹೇಳಲು ಆಗಲ್ಲ. ಕಾನೂನಿದೆ, ಕಾನೂನು ಏನು ಹೇಳುತ್ತೆ ಕಾದು ನೋಡೋಣ ಎಂದು ವಿಜಯ್ ರಾಘವೇಂದ್ರ ಹೇಳಿದ್ದಾರೆ.