ಖ್ಯಾತ ನಿರೂಪಕಿ ಹಾಗೂ ನಟಿ ಅಪರ್ಣ ನಿಧನ ಪ್ರತಿಯೊಬ್ಬರಿಗೂ ಆಘಾತ ನೀಡಿದೆ. ತಮ್ಮ ಸ್ಪಚ್ಚ ಕನ್ನಡದ ನಿರೂಪಣೆಯಲ್ಲಿ ಕೋಟ್ಯಾಂತರ ಅಭಿಮಾನಿಗಳ ಮನ ಗೆದ್ದಿದ್ದ ನಟಿಯನ್ನು ಕ್ಯಾನ್ಸರ್ ಎಂಬ ಮಾಹಾ ಮಾರಿ ಬಲಿ ತೆಗೆದುಕೊಂಡು ಬಿಟ್ಟಿದೆ. ಪತ್ನಿ ಅಪರ್ಣ ನಿಧನ ಕುರಿತು ಪತಿ ನಾಗರಾಜ್ ರಾಮಸ್ವಾಮಿ ವತ್ಸರೆ ಸಂದೇಶ ನೀಡಿದ್ದಾರೆ. ವೈಯಕ್ತಿಕವಾಗಿ ನಾನು ಅಪರ್ಣಾ ತುಂಬಾ ಖಾಸಗಿಯಾಗಿ ಬದುಕಿದವರು.ಅಷ್ಟೇ ಖಾಸಗಿಯಾಗಿ ನಾನು ಅವಳನ್ನ ಬೀಳ್ಕೊಡುತ್ತಿದೀನಿ ಎಂದು ಹೇಳಿದ್ದಾರೆ.
ಎರಡು ವರ್ಷದ ಹಿಂದೆ ಜುಲೈನಲ್ಲಿ ಶಾಸ್ವಕೋಶ ಕ್ಯಾನ್ಸರ್ ಅಂತಾ ಗೊತ್ತಾಯ್ತು. ಮೊದಲು ನೋಡಿದಾಗ ಅಪರ್ಣ ಆರು ತಿಂಗಳು ಬದುಕೋದೆ ಡೌಟ್ ಅಂತಾ ವೈದ್ಯರು ಹೇಳಿದ್ದರು. ಆದರೆ ಅಪರ್ಣ ಛಲಗಾತಿ. ಆಕೆ ಪ್ರತಿ ಬಾರಿ ನಾನು ಬದುಕ್ತೀನಿ ಅಂತಾ ಹೇಳುತ್ತಿದ್ದಳು. ಅಲ್ಲಿಂದ ಪೆಬ್ರವರಿ ವರೆಗೆ ಅವಳು ಸೋತಿದ್ಳು. ಕಳೆದ ಒಂದೂವರೇ ವರ್ಷದಿಂದ ಛಲದಿಂದ ಬದುಕಿದ್ದಳು. ಅವಳು ಧೀರೆ.. ಇಷ್ಟು ದಿನಾ ಬದುಕಿದ್ದಾಳೆ ಎಂದು ನಾಗರಾಜ್ ಹೇಳಿದ್ದಾರೆ.
ವೈದ್ಯರ ವರದಿ, ಕ್ಯಾನ್ಸರ್ ಸ್ಟೇಜ್ ಎಲ್ಲವೂ ವಿರುದ್ಧವಾಗಿತ್ತು. ಆದರೆ ಛಲಗಾತಿ ಅಪರ್ಣ ಪ್ರತಿ ದಿನ ಹೋರಾಡುತ್ತಿದ್ದಳು. ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಇದೀಗ ನಾವಿಬ್ಬರು ಜಂಟಿಯಾಗಿ ಸೋತಿದ್ದೇವೆ. ಮುಂಬರುವ ಅಕ್ಟೋಬರ್ ತಿಂಗಳಿಗೆ ಅಪರ್ಣಗೆ 58 ವರ್ಷ ತುಂಬುತಿತ್ತು. ಅವಳ ನಿಜವಾದ ವಯಸ್ಸು ಯಾವತ್ತೂ ತೋರಿಸಲಿಲ್ಲ ಎಂದು ಪತಿ ಹೇಳಿದ್ದಾರೆ. ಇವತ್ತು ಒಂದು ದಿನ ನಾನು ನನ್ನ ಕುಟುಂಬದ ಜೊತೆ ಇರುತ್ತೇನೆ ಎಂದು ಮಾಧ್ಯಮಕ್ಕೆ ನಾಗರಾಜ್ ಪ್ರತಿಕ್ರಿಯೆ ನೀಡಿದ್ದಾರೆ. ಕುಟುಂಬದ ಖಾಸಗೀತನಕ್ಕೆ ಗೌರವ ನೀಡಲು ಪತಿ ನಾಗರಾಜ್ ಮನವಿ ಮಾಡಿದ್ದಾರೆ. ಈ ಶಿಥಿಲ ಸಂದರ್ಭದಲ್ಲಿ ಕುಟುಂಬ ಖಾಸಗಿ ದುಃಖ ಅನ್ನೋದು ಇರುತ್ತೆ ಎಂದು ನಾಗರಾಜ್ ಹೇಳಿದ್ದಾರೆ.
ಅಪರ್ಣಾ ಅಚ್ಚ ಹಾಗೂ ಸ್ಪಷ್ಟ ಕನ್ನಡದ ನಿರೂಪಣೆಯಿಂದ ಮನೆಮಾತಾಗಿದ್ದಾರೆ. ಸಿನಿಮಾ, ಧಾರವಾಹಿ, ರಿಯಾಲಿಟಿ ಶೋ, ಆಕಾಶವಾಣಿ, ಚಂದನ ವಾಹಿನಿಗಳಲ್ಲೂ ಕಾರ್ಯಕ್ರಮ ನೀಡಿದ ಹೆಗ್ಗಳಿಗೆ ಅಪರ್ಣಾ ಪಾತ್ರರಾಗಿದ್ದಾರೆ. ಮೆಟ್ರೋ ಸೇರಿದಂತೆ ಹಲವು ಕಡೆಗಳಲ್ಲಿ ಹಿನ್ನಲೆ ಧ್ವನಿ ನೀಡಿ ಚಿರಪರಿತರಾಗಿದ್ದಾರೆ. ಇದೀಗ ಈಕೆಯ ಸಾವು ಕೋಟ್ಯಾಂತರ ಕನ್ನಡಿಗರಿಗೆ ನುಂಗುಲಾರದ ತುತ್ತಾಗಿದೆ. ಅಪರ್ಣ ಮತ್ತೊಮ್ಮೆ ಕನ್ನಡದ ನೆಲದಲ್ಲಿ ಹುಟ್ಟಿ ಬರಲಿ ಎಂದು ಕೋಟ್ಯಾಂತರ ಮಂದಿಯ ಆಶಯವಾಗಿದೆ.