ಬೆಂಗಳೂರು: ಗಾರ್ಡನ್ ಸಿಟಿ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರು, ಧೂಮಪಾನ-ಮುಕ್ತ ಕಾನೂನುಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿದ ಉದ್ದೇಶದಿಂದ ಜಾಗತಿಕ ಮಟ್ಟದಲ್ಲಿ ನೀಡಲ್ಪಡುವ “ಆರೋಗ್ಯಕರ ನಗರಗಳ ಪಾಲುದಾರಿಕೆ ಪ್ರಶಸ್ತಿ” 2023 ಪಡೆದುಕೊಂಡಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಶ್ರೀ ತುಷಾರ್ ಗಿರಿ ನಾಥ್ ಇಂದು ತಿಳಿಸಿದರು.
ಸಾಂಕ್ರಾಮಿಕವಲ್ಲದ ರೋಗಗಳು (NCDs) ಮತ್ತು ಗಾಯಗಳನ್ನು ತಡೆಗಟ್ಟುವ ಮೂಲಕ ಜೀವ ಉಳಿಸಲು ಬದ್ಧವಾಗಿರುವ ವಿಶ್ವದ ಪ್ರಮುಖ 70 ನಗರಗಳ ಜಾಗತಿಕ ಪಾಲುದಾರಿಕೆಯ ಸಹಭಾಗಿತ್ವದಲ್ಲಿ, ಮಾರ್ಚ್ 15, 2023 ರಂದು ಲಂಡನ್ನಲ್ಲಿ ನಡೆದ “ಆರೋಗ್ಯಕರ ನಗರಗಳ ಶೃಂಗಸಭೆ”ಯಲ್ಲಿ ಬೆಂಗಳೂರು ನಿಯೋಗಕ್ಕೆ ಪ್ರಶಸ್ತಿ ಲಭಿಸಿದೆ. ಈ ಶೃಂಗಸಭೆಯಲ್ಲಿ ವಿಶ್ವದಾದ್ಯಂತ 50 ಕ್ಕೂ ಹೆಚ್ಚು ನಗರಗಳ ಮೇಯರ್ಗಳು ಮತ್ತು ಅಧಿಕಾರಿಗಳು ಪಾಲ್ಗೊಂಡು ವಿಶ್ವಾದ್ಯಂತ ತುರ್ತು ಸಾರ್ವಜನಿಕ ಆರೋಗ್ಯ ಕಾಳಜಿ ಮತ್ತು ಆರೋಗ್ಯಕರ ನಗರಗಳನ್ನು ರೂಪಿಸುವ ಕುರಿತು ಚರ್ಚಿಸಿದರು,
ಲಂಡನ್ನಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ಡಾ. ತ್ರಿಲೋಕ್ ಚಂದ್ರ ಕೆ.ವಿ, “ಧೂಮಪಾನ ಮುಕ್ತ ಕಾನೂನು ಜಾರಿಗೊಳಿಸಲು ಮತ್ತು ಧೂಮಪಾನಿಗಳಲ್ಲದವರನ್ನು (ಸೆಕೆಂಡ್ ಹ್ಯಾಂಡ್ ಸ್ಮೋಕರ್ಸ್) ಹೊಗೆಯಿಂದಾಗುವ ಹಾನಿಯಿಂದ ರಕ್ಷಿಸಲು ನಮಗಿರುವ ಬದ್ಧತೆಗಾಗಿ ಈ ಪ್ರಶಸ್ತಿ ಲಭಿಸಿದೆ. ಬೆಂಗಳೂರಿನ ಪರವಾಗಿ ಈ ಪ್ರಶಸ್ತಿಯನ್ನು ಸ್ವೀಕರಿಸಲು ಹೆಮ್ಮೆ ಎನಿಸುತ್ತಿದೆ ಎಂದರು.
ಆರೋಗ್ಯಕರ ನಗರ ಪಾಲುದಾರಿಕೆಯಲ್ಲಿ ಪ್ರಶಸ್ತಿ ಪಡೆದಿದ್ದಕ್ಕೆ ನಮ್ಮ ನಗರದ ಬಗ್ಗೆ ಇನ್ನಷ್ಟು ಹೆಮ್ಮೆ ಮೂಡಿದೆ. ಈ ಪ್ರಶಸ್ತಿ ನಮ್ಮ ಬಿಬಿಎಂಪಿ ಆರೋಗ್ಯ ವಿಭಾಗದ ತಂಡ, ನಾಗರಿಕ ಸಮಾಜ ಸಂಸ್ಥೆಗಳು ಮತ್ತು ನಿವಾಸಿಗಳ ಶ್ರಮ ಮತ್ತು ಸಮರ್ಪಣೆಗೆ ಸಾಕ್ಷಿಯಾಗಿದೆ.
ಧೂಮಪಾನ-ಮುಕ್ತ ಬೆಂಗಳೂರಿನ ಕೇಂದ್ರೀಕೃತ ಪ್ರಯತ್ನದ ಫಲವಾಗಿ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನದ ಪ್ರಮಾಣ ಶೇ. 5.2 ರಷ್ಟು ಕಡಿಮೆ ಮಾಡಿದೆ (2017 ರಲ್ಲಿ ಶೇ,18.18, 2021 ರಲ್ಲಿ ಶೇ.13.30 ರಷ್ಟು ಕಡಿಮೆಯಾಗಿತ್ತು) ಇದಷ್ಟೇ ಅಲ್ಲದೆ, ನೋ ಸ್ಮೋಕಿಂಗ್ ಬೋರ್ಡ್ ಪ್ರದರ್ಶನವು ಶೇ. 51.9 ರಷ್ಟು ಹೆಚ್ಚಳವಾಗಿದೆ. (2017 ರಲ್ಲಿ ಶೇ. 23.1 ರಿಂದ ಶೇ. 75, 2021 ರವರೆಗೆ). ನಮ್ಮ ನಗರವು ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುವಲ್ಲಿ ಮತ್ತು ನಮ್ಮ ಸಮುದಾಯದ ಒಟ್ಟಾರೆ ಯೋಗಕ್ಷೇಮವನ್ನು ಸುಧಾರಿಸುವಲ್ಲಿ ಅಗ್ರಸ್ಥಾನದಲ್ಲಿದೆ. ಮುಂದಿನ ದಿನಗಳಲ್ಲೂ ಆರೋಗ್ಯ ಮತ್ತು ಕ್ಷೇಮ ಉಪಕ್ರಮಗಳಿಗೆ ಆದ್ಯತೆ ನೀಡುವುದನ್ನು ಇನ್ನಷ್ಟು ಹೆಚ್ಚಲಿದ್ದೇವೆ ಎಂದು ಹೇಳಿದರು.
ಬಿಬಿಎಂಪಿಯ ಮುಖ್ಯ ಆರೋಗ್ಯಾಧಿಕಾರಿ ಡಾ.ಬಾಲ ಸುಂದರ್ ಎ ಎಸ್ ಅವರು ಮಾತನಾಡಿ, “ಬೆಂಗಳೂರು ಈ ಪ್ರಶಸ್ತಿಯನ್ನು ಪಡೆದಿರುವುದಕ್ಕೆ ನನಗೆ ಸಂತೋಷವಾಗಿದೆ. ಧೂಮಪಾನ ಹೊಗೆ ಮುಕ್ತ ಪರಿಸರವನ್ನು ಉತ್ತೇಜಿಸುವ ಪ್ರಯತ್ನವನ್ನು ಮುಂದುವರಿಸಲು ನಾವು ಬದ್ಧರಾಗಿದ್ದೇವೆ. ಈ ಪ್ರಶಸ್ತಿಯು ಒಂದು ದೊಡ್ಡ ಗೌರವವಾಗಿದೆ. ತಂಬಾಕು ನಿಯಂತ್ರಣ ಕಾನೂನುಗಳನ್ನು ಜಾರಿಗೊಳಿಸುವಲ್ಲಿ ಬೆಂಗಳೂರು ಮತ್ತೊಮ್ಮೆ ನಾಯಕತ್ವದ ಸ್ಥಾನ ಹೊಂದುವ ವಿಶ್ವಾಸವಿದೆ ಎಂದರು.
ಹೊಗೆ ಮುಕ್ತ ಬೆಂಗಳೂರು ಕುರಿತು:
ಸಾಂಕ್ರಾಮಿಕವಲ್ಲದ ರೋಗಗಳು (ಎನ್ಸಿಡಿ) ಮತ್ತು ಗಾಯಗಳನ್ನು ಕಡಿಮೆ ಮಾಡಲು ಬದ್ಧವಾಗಿರುವ 70 ನಗರಗಳ ಜಾಗತಿಕ ನೆಟ್ವರ್ಕ್ನ ಈ ಪಾಲುದಾರಿಕೆಯ ಭಾಗವಾಗಿರುವ ಬೆಂಗಳೂರು ‘ಸ್ಮೋಕ್-ಫ್ರೀ ಬೆಂಗಳೂರು’ ಎಂಬ ಅಭಿಯಾನವನ್ನು ಪ್ರಾರಂಭಿಸಿದೆ, ಇದು ವಿಶೇಷವಾದ ಹೊಗೆ ಮುಕ್ತ ಕಾನೂನುಗಳ ಅನುಷ್ಠಾನವನ್ನು ಬಲಪಡಿಸಲು ಕೆಲಸ ಮಾಡುತ್ತಿದೆ. ಸೆಕೆಂಡ್ ಹ್ಯಾಂಡ್ ಹೊಗೆಯ ಮೇಲೆ ಕೇಂದ್ರೀಕರಿಸಿ. ಈ ಅಭಿಯಾನವು ಧೂಮಪಾನಿಗಳಲ್ಲದವರನ್ನು ನಿಷ್ಕ್ರಿಯ ಧೂಮಪಾನದ ಹಾನಿಕಾರಕ ಪರಿಣಾಮಗಳಿಂದ ರಕ್ಷಿಸಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ, ಇದರಲ್ಲಿ ಕ್ಯಾನ್ಸರ್ ಮತ್ತು ಹೃದ್ರೋಗದಂತಹ ಎನ್ಸಿಡಿಗಳಿಗೆ ಹೆಚ್ಚಿನ ಅಪಾಯಗಳಿವೆ, ಇದು ಅಕ್ಟೋಬರ್ 2017 ರಲ್ಲಿ ಆಗಿನ ಬೆಂಗಳೂರು ಅಭಿವೃದ್ಧಿ ಸಚಿವರಿಂದ ಪ್ರಾರಂಭಿಸಲ್ಪಟ್ಟಿತು. ಧೂಮಪಾನ-ಮುಕ್ತ ಬೆಂಗಳೂರು ಚಟುವಟಿಕೆಗಳು ಸೆಕೆಂಡ್ಹ್ಯಾಂಡ್ ಧೂಮಪಾನದ ಅಪಾಯಗಳ ಕುರಿತು ಜಾಗೃತಿ ಅಭಿಯಾನಗಳು, ಜಾಹೀರಾತು ಫಲಕಗಳು ಮತ್ತು ಆನ್ಲೈನ್ ಮಾಧ್ಯಮ ಪ್ರಚಾರಗಳನ್ನು ಮತ್ತು ಬೆಂಬಲವನ್ನು ಒಳಗೊಂಡಿವೆ.
ಪುನರಾವರ್ತಿತ ಜಾರಿ ಡ್ರೈವ್ಗಳು. ಫಲಿತಾಂಶವು ಕಾನೂನಿನ ಅನುಸರಣೆಯಲ್ಲಿ ಗಮನಾರ್ಹ ಹೆಚ್ಚಳವಾಗಿದೆ ಮತ್ತು ಆವರಣದೊಳಗೆ ಸಾರ್ವಜನಿಕ ಸ್ಥಳದ ಧೂಮಪಾನವನ್ನು 5.2% ರಷ್ಟು ಕಡಿಮೆಗೊಳಿಸಿದೆ (2017 ರಲ್ಲಿ 18.18% 2021 ರಲ್ಲಿ 13.30% ಕ್ಕೆ ಕಡಿಮೆಯಾಗಿದೆ) ಮತ್ತು ಧೂಮಪಾನ ನಿಷೇಧ ಚಿಹ್ನೆಯ ಪ್ರದರ್ಶನದಲ್ಲಿ 51.9% ಹೆಚ್ಚಳವಾಗಿದೆ ( 2017 ರಲ್ಲಿ 23.1% ರಿಂದ 75% 2021 ವರೆಗೆ).