ಗದಗ:- ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಗದಗ ಜಿಲ್ಲಾ ಶಾಖೆಯಿಂದ 7 ನೇ ವೇತನ ಆಯೋಗ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮನವಿ ಸಲ್ಲಿಕೆ ಮಾಡಲಾಗಿದೆ.ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರವಿ ಗುಂಜೀಕರ ನೇತೃತ್ವದಲ್ಲಿ ಮನವಿ ಸಲ್ಲಿಕೆ ಮಾಡಲಾಗಿದೆ. ಗದಗ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿಗಳ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಕೆ ಮಾಡಲಾಗಿದೆ. 7 ನೇ ವೇತನ ಆಯೋಗ ಕೂಡಲೇ ಜಾರಿ ಆಗಬೇಕು
, ಓಪಿಎಸ್ ಜಾರಿ, ಆರೋಗ್ಯ ಭಾಗ್ಯ ಯೋಜನೆ ಲೋಕಾರ್ಪಣೆ ಆಗಬೇಕೆಂದು ಮನವಿ ಸಲ್ಲಿಕೆ ಮಾಡಿದ್ದಾರೆ. 7ನೇ ವೇತನ ಆಯೋಗ ರಚನೆ ಆಗಿ 19 ತಿಂಗಳಾದ್ರೂ ಕೂಡಾ ಸರ್ಕಾರ ಮೀನಾಮೇಷ ಎಣಿಸ್ತಿದೆ. ಮೊದಲನೇ ಮತದ ಮನವಿ ನೀಡಿದ್ದೇವೆ. ಸರ್ಕಾರ ಸ್ಪಂದಿಸದಿದ್ದರೆ ಇದೇ ಜಿಲೈ 29 ನೇ ತಾರೀಕಿನಿಂದ ಕೆಲಸಕ್ಕೆ ಗೈರು ಹಾಜರಾಗಿ ಮುಷ್ಕರದ ಎಚ್ಚರಿಕೆ ನೀಡಿದ್ದಾರೆ. ನೂರರು ಜನ ರಾಜ್ಯ ಸರ್ಕಾರಿ ನೌಕರರು ಭಾಗಿಯಾಗಿದರು