ರಾಯಚೂರು ಗುರುವಾರ ತಡರಾತ್ರಿ ಮಣ್ಣು ಕುಸಿದ ಪರಿಣಾಮ ಕಾರ್ಮಿಕ ಲಿಂಗಸುಗೂರು ತಾಲೂಕಿನ ಹಟ್ಟಿ ಪಟ್ಟಣದ ಚಿನ್ನದ ಗಣಿಯಲ್ಲಿ ಮೃತಪಟ್ಟಿದ್ದಾರೆ.
ಕೆಲಸ ಮಾಡುತ್ತಿದ್ದಾಗ ಏಕಾಏಕಿ ಮಣ್ಣು ಕುಸಿದು ಕಾರ್ಮಿಕ ಮೌನೇಶ್ (48) ಸಾವಿಗೀಡಾಗಿದ್ದಾರೆ. ಘಟನೆಯಲ್ಲಿ ಮೂವರು ಕಾರ್ಮಿಕರು ಗಾಯಗೊಂಡಿದ್ದು, ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಕಾರ್ಮಿಕರು ಚಿನ್ನದ ಗಣಿಯ ಲಾಸ್ಟ್ ಲೆವೆಲ್ನಲ್ಲಿ ಕೆಲಸ ಮಾಡುತ್ತಿದ್ದರು.
ಹಟ್ಟಿ ಚಿನ್ನದ ಗಣಿಯ ಅಂಡರ್ಗ್ರೌಂಡ್ನಲ್ಲಿ ಮಣ್ಣು ಕುಸಿದು ದುರಂತ ಸಂಭವಿಸಿದೆ
ವರದಿಗಾರರು ರಂಗನಾಥ್ ಭಂಡಾರಿ