ನಿನ್ನೆ ನಡೆದ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆಗೆ ಬಿಟೌನ್ ನ ಸಾಕಷ್ಟು ಸೆಲೆಬ್ರಿಟಿಗಳು ಹಾಜರಾಗಿದ್ದರು. ಆದರೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಅಕ್ಷಯ್ ಕುಮಾರ್ ಮಾತ್ರ ಎಲ್ಲಿಯೂ ಕಾರಣಿಸಿರಲಿಲ್ಲ. ಇದೀಗ ಅಕ್ಷಯ್ ಕುಮಾರ್ ಗೆ ಕೋವಿಡ್ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಅನಂತ್ ಅಂಬಾನಿ ಮದುವೆಗೆ ಹೋಗಲು ಸಾಧ್ಯವಾಗಲಿಲ್ಲ ಎಂದು ಹೇಳಲಾಗುತ್ತಿದೆ.
ಸದ್ಯ ನಟ ಇತ್ತೀಚಿನ ಬಿಡುಗಡೆಯಾದ ‘ಸರ್ಫಿರಾ’ ಪ್ರಚಾರಕ್ಕಾಗಿ ಪ್ರಯಾಣಿಸುತ್ತಿದ್ದಾರೆ. ಹೀಗಾಗಿ ನಟ ಸ್ವತಃ ಪರೀಕ್ಷೆಗೆ ಒಳಗಾದರು. ಬಳಿಕ ಕೋವಿಡ್ 19 ಸೋಂಕು ಇರುವುದು ಖಚಿತವಾಗಿದೆ. ಇದೀಗ ನಟ ಮನೆಯಲ್ಲಿಯೇ ಕ್ವಾರಂಟೈನ್ನಲ್ಲಿದ್ದಾರೆ. ವೈದ್ಯರಗಳು ಸೂಕ್ತ ಚಿಕಿತ್ಸೆಯೊಂದಿಗೆ ನಿಗಾವಹಿಸಿ ಆರೈಕೆ ಮಾಡುತ್ತಿದ್ದಾರೆ. ವರದಿಯ ಪ್ರಕಾರ, ಜುಲೈ 12ರ ಬೆಳಗ್ಗೆ ಕೋವಿಡ್ ಇರುವುದು ಪತ್ತೆಯಾಗಿದೆ. ಹೀಗಾಗಿ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಸಮಾರಂಭದಲ್ಲಿ ನಟ ಅಕ್ಷಯ್ ಕುಮಾರ್ ಭಾಗಿಯಾಗಲು ಸಾಧ್ಯವಾಗಲಿಲ್ಲ.
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹವು ಮೂರು ದಿನಗಳವರೆಗೆ ಇರುತ್ತದೆ. ಜುಲೈ 12 ರಂದು ‘ಶುಭ ವಿವಾಹ’, ಜುಲೈ 13 ರಂದು ‘ಶುಭ್ ಆಶೀರ್ವಾದ್’ ಮತ್ತು ಜುಲೈ 14 ರಂದು ʻಆರತಕ್ಷತೆ, ನಂತರ ಜುಲೈ 15 ರಂದು ಮತ್ತೊಂದು ಆರತಕ್ಷತೆ ಕಾರ್ಯಕ್ರಮ ನಡೆಯಲಿವೆ.
ಜಾನ್ ಸೆನಾ, ಮೈಕ್ ಟೈಸನ್, ಜೀನ್-ಕ್ಲಾಡ್ ವ್ಯಾನ್ ಡ್ಯಾಮ್ ಮತ್ತು ಜೇ ಶೆಟ್ಟಿ, ಬೋರಿಸ್ ಜಾನ್ಸನ್, ಟೋನಿ ಬ್ಲೇರ್, ಜಾನ್ ಕೆರ್ರಿ ಮತ್ತು ಸ್ಟೀಫನ್ ಹಾರ್ಪರ್ ಅವರಂತಹ ಗಣ್ಯರು ಸೇರಿದಂತೆ ಇತರ ಸೆಲೆಬ್ರಿಟಿಗಳು ಸಮಾರಂಭದಲ್ಲಿ ಹಾಜರಿರಲಿದ್ದಾರೆ.