ಬೆಂಗಳೂರು: ನಮ್ಮ ರಾಜ್ಯದ ಎಲ್ಲಾ ಜಲಾಶಯಗಳಲ್ಲಿ 60 ಟಿಎಂಸಿ ನೀರು ಮಾತ್ರ ಇದೆ. ನಮಗೆ ಕುಡಿಯಲು, ಬೇಸಾಯಕ್ಕೆ ನೀರಿನ ಅಗತ್ಯವಿದೆ. ಹೀಗಾಗಿ ಜುಲೈ ವರೆಗೂ ನೀರು (Cauvery Water) ಕೊಡಲು ಸಾಧ್ಯವಿಲ್ಲ ಅಂತ ಹೇಳಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ತಿಳಿಸಿದ್ದಾರೆ.
ಜುಲೈ 31ರ ವರೆಗೆ ತಮಿಳುನಾಡಿಗೆ (Tamil Nadu) ಪ್ರತಿನಿತ್ಯ 1 ಟಿಎಂಸಿ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣಾ ಸಮಿತಿ (CWRC) ಶಿಫಾರಸು ಮಾಡಿದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರಿಂದು ತುರ್ತು ಸಭೆ ನಡೆಸಿದರು. ಜಲ ಸಂಪನ್ಮೂಲ ಇಲಾಖೆಯೊಂದಿಗೆ ಗೃಹಕಚೇರಿ ಕೃಷ್ಣಾದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್, ಇಲಾಖೆಯ ಹಿರಿಯ ಅಧಿಕಾರಿಗಳು, ಕಾವೇರಿ ಕಣಿವೆ ಭಾಗದ ಸಚಿವರು ಭಾಗವಹಿಸಿದ್ದರು. ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಸಿಎಂ ಮಾತನಾಡಿದರು.
ಕಾವೇರಿ ನೀರು ನೀರಾವರಿ ನಿಯಂತ್ರಣಾ ಸಮಿತಿ ನಿತ್ಯ 1 ಟಿಎಂಸಿ ನೀರು ತಮಿಳುನಾಡಿಗೆ ಬಿಡಲು ಸೂಚನೆ ನೀಡಿದೆ. ಆದ್ರೆ ಇಂದಿನ ಸಭೆಯಲ್ಲಿ ನಾವು ಪರಿಸ್ಥಿತಿ ವಿವರಿಸಿದ್ದೇವೆ. ಆದರೂ ಸಹ, ಮಳೆಯಿದ್ದರೂ ಈವರೆಗೆಗೆ 28% ನೀರು ಕೊರತೆ ನಮಗೆ ಇದೆ.ಇದನ್ನ ನಾವು ಸಭೆಯಲ್ಲಿ ಬಹಳ ಸ್ಪಷ್ಟವಾಗಿ ಹೇಳಿದ್ದೇವೆ. ನಮ್ಮ ನಿಲುವನ್ನೂ ಹೇಳಿದ್ದೇವೆ. ಯಾವುದೇ ತೀರ್ಮಾನ ಮಾಡಬಾರದು ಅಂತ ಮನವಿ ಮಾಡಿದ್ದೇವೆ. ಜುಲೈ ಕೊನೆವರೆಗೂ ಪರಿಸ್ಥಿತಿ ನೋಡಿಕೊಳ್ಳಬೇಕು ಅಂತ ಮನವಿ ಮಾಡಿದ್ದೇವೆ. ಇದರ ಹೊರತಾಗಿಯೂ ಸಿಡಬ್ಲ್ಯೂಆರ್ಸಿ ನಿ