ಬಾಗಲಕೋಟೆ:– ಮುಧೋಳ ಠಾಣೆಯ ಪೊಲೀಸರು ತನಿಖೆ ಚುರುಕುಗೊಳಿಸಿ ಸ್ಪಾ’ ಹೆಸರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ 11 ಆರೋಪಿಗಳ ವಿರುದ್ಧ FIR ದಾಖಲಿಸಿದ್ದಾರೆ.
ಜಿಲ್ಲೆಯ ಮುಧೋಳ ನಗರದ ಓಂಕಾರ, ಸಪ್ತಗಿರಿ, ಶಿವದುರ್ಗಾ ಹಾಗೂ ಸುರಭಿ ಹೆಸರಿನ ನಾಲ್ಕು ಲಾಡ್ಜ್ಗಳ ಜಮಖಂಡಿ ಡಿವೈಎಸ್ಪಿ ಶಾಂತವೀರ ನೇತೃತ್ವದಲ್ಲಿ ಮೇಲೆ ದಾಳಿ ನಡೆದಿತ್ತು.
ಈ ವೇಳೆ ಹತ್ತು ಜನ ಯುವತಿಯರನ್ನು ರಕ್ಷಣೆ ಮಾಡಲಾಗಿತ್ತು.
ದಾಳಿ ವೇಳೆ ರಕ್ಷಿಸಿದ ಯುವತಿಯರೆಲ್ಲರೂ ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಅಸ್ಸಾಂ, ಮುಂಬೈ ಮೂಲದರಾಗಿದ್ದಾರೆ. ಇನ್ನು ಸುರಭಿ ಲಾಡ್ಜ್ನ ಶಿವಕುಮಾರ್ ಈಳಗಾರ, ನಿರಂಜನ್ ಪೂಜಾರಿ, ಶ್ರೀಕಾಂತ್ ಕಲಾಲ್, ಶಿವದುರ್ಗಾ ಲಾಡ್ಜ್ ಮ್ಯಾನೇಜರ್ ಚಂದು ಕಲಾಲ, ಓಂಕಾರ ಲಾಡ್ಜ್ ಮಾಲೀಕ ಹಣಮಂತ ಮಾರುತಿ ಭಜಂತ್ರಿ, ಓಂಕಾರ ಲಾಡ್ಜ್ ಮ್ಯಾನೇಜರ್ ಲವಿತ್ ಮೇತ್ರಿ, ಸಪ್ತಗಿರಿ ಲಾಡ್ಜ್ ಮ್ಯಾನೇಜರ್ ಆನಂದ್ ಮಾಂಗ್, ಮಾಲೀಕ ಸೇರಿ ಒಟ್ಟು 11 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.