ಟೀಮ್ ಇಂಡಿಯಾದ ಮುಂದಿನ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಅಧಿಕಾರ ಸ್ವೀಕರಿಸಿದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕೆಲ ದಿನಗಳ ಹಿಂದಷ್ಟೇ ಘೋಷಣೆ ಮಾಡಿತ್ತು. ಕೋಚ್ ಆಗಿ ನೇಮಕಗೊಂಡ ಬೆನ್ನಲ್ಲೇ ಗೌತಮ್ ಗಂಭೀರ್, ತಮ್ಮ ಕೋಚಿಂಗ್ ಬಳಗಕ್ಕೆ ಹೊಸಬರನ್ನು ತೆಗೆದುಕೊಳ್ಳಲು ಮುಂದಾಗಿದ್ದಾರೆ.
ಬಿಸಿಸಿಐ ಮಾಜಿ ಕೋಚ್ ರಾಹುಲ್ ದ್ರಾವಿಡ್ ಮತ್ತು ಕೋಚಿಂಗ್ ಬಳಗದವರಿಗೆ ಧನ್ಯವಾದ ಹೇಳಿದೆ. ಆದರೆ, ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಅವರನ್ನು ಉಳಿಸಿಕೊಳ್ಳುವುದು ಬಿಸಿಸಿಐ ಬಯಕೆಯಾಗಿದೆ. ಸಾಮಾನ್ಯವಾಗಿ ಹೊಸ ಕೋಚ್ಗೆ ತಮ್ಮ ಆಯ್ಕೆಯ ಕೋಚಿಂಗ್ ಬಳಗವನ್ನು ಕಟ್ಟಿಕೊಳ್ಳಲು ಬಿಸಿಸಿಐ ಅನುವು ಮಾಡಿಕೊಡುತ್ತದೆ. ಆದರೆ, ಬೌಲಿಂಗ್ ಮತ್ತು ಫೀಲ್ಡಿಂಗ್ ಕೋಚ್ಗಳ ಆಯ್ಕೆ ಸಲುವಾಗಿ ಗೌತಮ್ ಗಂಭೀರ್ ಇಟ್ಟಿದ್ದ ಎರಡು ಹೆಸರುಗಳನ್ನು ಬಿಸಿಸಿಐ ಇದೀಗ ತಿರಸ್ಕರಿಸಿದೆ ಎಂಬುದು ಬೆಳಕಿಗೆ ಬಂದಿದೆ.
ಇನ್ನು ಫೀಲ್ಡಿಂಗ್ ಕೋಚ್ ಸ್ಥಾನಕ್ಕೆ ದಕ್ಷಿಣ ಆಫ್ರಿಕಾದ ದಿಗ್ಗಜ ಜಾಂಟಿ ರೋಡ್ಸ್ ಅವರನ್ನು ಆಯ್ಕೆ ಮಾಡಬೇಕು ಎಂಬುದು ಗಂಭೀರ್ ಇಟ್ಟ ಎರಡನೇ ಬೇಡಿಕೆ ಆಗಿತ್ತು. ಇಂಡಿಯನ್ ಪ್ರೀಮಿಯರ್ ಲೀಗ್ ಅಖಾಡದಲ್ಲಿ ವಿವಿಧ ಫ್ರಾಂಚೈಸಿಗಳ ಜೊತೆಗೆ ಕೆಲಸ ಮಾಡಿದ ಅನುಭವ ಜಾಂಟಿ ರೋಡ್ಸ್ ಅವರಲ್ಲಿದೆ. ಲಖನೌ ಸೂಪರ್ ಜಯಂಟ್ಸ್ ತಂಡದಲ್ಲಿ ಗೌತಮ್ ಗಂಭೀರ್ ಮೆಂಟರ್ ಆಗಿದ್ದ ಸಂದರ್ಭದಲ್ಲಿ ರೋಡ್ಸ್ ಆ ತಂಡದ ಫೀಲ್ಡಿಂಗ್ ಕೋಚ್ ಆಗಿದ್ದರು.