ನವಲಗುಂದ: ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮೊರಬ ಗ್ರಾಮದ ಬಸವೇಶ್ವರ ದೇವಸ್ಥಾನದ ಹತ್ತಿರ ಇರುವ ಕೋಡಿಯಲ್ಲಿ ಎರಡು ಹಾವುಗಳು ಸರಸ ಸಲ್ಲಾಪದಲ್ಲಿ ತೊಡಗಿದ್ದವು. ಹಾವುಗಳ ನಡುವಿನ ಪ್ರೇಮ, ಸರಸ ಸಲ್ಲಾಪ ಜನರನ್ನು ನಿಬ್ಬೆರಗಾಗಿಸಿದೆ.
ಹಾವುಗಳ ನಡುವೆ ಪ್ರೇಮ, ಅದರಲ್ಲೂ ಸರಸ ಸಲ್ಲಾಪ ಇರುವುದು ತೀರಾ ವಿರಳ. ಅಂಥದ್ದೊಂದು ಸಂದರ್ಭ ಬಂದರೆ ಗಂಡು ಹಾವುಗಳು ಘನಘೋರ ಹೋರಾಟವನ್ನೇ ಮಾಡುತ್ತವೆ. ಕೊನೆಗೆ ಹೋರಾಟದಲ್ಲಿ ಗೆಲ್ಲುವ ಹಾವು ಮಾತ್ರ ಹೆಣ್ಣು ಹಾವಿನೊಡನೆ ಸಲ್ಲಾಪದಲ್ಲಿ ತೊಡಗುತ್ತದೆ.
ಎರಡು ಹಾವುಗಳ ಸರಸ ಕಂಡು ಜನ ಇದು ಕಲಿಗಾಲ ಎಂದು ಹುಬ್ಬೇರಿಸಿದ್ದಾರೆ. ಹಾವುಗಳ ಮಿಲನ ಮಹೋತ್ಸವ ನೋಡಿದರೆ ಹಾವಿನ ಶಾಪ ತಟ್ಟುತ್ತದೆ ಎಂಬ ಮೂಢನಂಬಿಕೆ ಗ್ರಾಮೀಣ ಜನರಲ್ಲಿದೆ. ಆದರೆ ಯುವ ಉತ್ಸಾಹಿಗಳು ಆ ದೃಶ್ಯ ಮೊಬೈಲ್ ನಲ್ಲಿ ಸೆರೆ ಹಿಡಿದು ಸಂಭ್ರಮಿಸಿದ್ದಾರೆ. ಕೆಲವರು ಇದು ಶುಭ ಎಂದರೆ ಮತ್ತೆ ಕೆಲವರು ಏನು ಕೇಡು ಕಾದಿದೆಯೋ ಎಂದು ಉದ್ಗಾರ ತೆಗೆದಿದ್ದಾರೆ.