ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಕುಟುಂಬದಲ್ಲಿ ಎಲ್ಲವೂ ಸರಿ ಇಲ್ಲ ಅನ್ನೋದು ಮತ್ತೆ ಮತ್ತೆ ಪ್ರೂವ್ ಆಗ್ತಿದೆ. ಆದರೆ ಈ ಬಗ್ಗೆ ಕುಟುಂಬಸ್ಥರು ಮಾತ್ರ ಎಲ್ಲಿಯೂ ಬಾಯಿ ಬಿಡುತ್ತಿಲ್ಲ. ಇದೀಗ ಬಚ್ಚನ್ ಕುಟುಂಬದ ಜೊತೆ ಐಶ್ವರ್ಯಾ ರೈ ಮುನಿಸಿಕೊಂಡಿರೋದು ಮತ್ತೆ ಕಾಣಿಸಿಕೊಂಡಿದೆ.
ರಿಲೈನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಮಗ ಅನಂತ್ ಅಂಬಾನಿ ಹಾಗೂ ಉದ್ಯಮಿಯ ಮಗಳು ರಾಧಿಕಾ ಮರ್ಚೆಂಟ್ ಮದುವೆ ಮುಂಬೈನಲ್ಲಿ ಅದ್ದೂರಿಯಾಗಿ ನೆರವೇರಿದೆ. ಅನೇಕ ಸೆಲೆಬ್ರಿಟಿಗಳು ಈ ಸಮಾರಂಭದಲ್ಲಿ ಭಾಗಿ ಆಗಿದ್ದಾರೆ. ಹಾಲಿವುಡ್ ಬಾಲಿವುಡ್ ನ ಅನೇಕ ಸೆಲೆಬ್ರಿಟಿಗಳು ಮದುವೆಯಲ್ಲಿ ಹಾಜರಿದ್ದರು. ಅಮಿತಾಬ್ ಬಚ್ಚನ್ ಕುಟುಂಬ ಸಮೇತ ಮದುವೆಯಲ್ಲಿ ಭಾಗಿಯಾಗಿದ್ದರು.
ಎಲ್ಲ ಸೆಲೆಬ್ರಿಟಿಗಳು ತಮ್ಮ ಕುಟುಂಬದ ಜೊತೆ ಮದುವೆಗೆ ಹಾಜರಿ ಹಾಕಿದ್ದಾರೆ. ಆದರೆ, ಐಶ್ವರ್ಯಾ ರೈ ಮಾತ್ರ ಬಚ್ಚನ್ ಕುಟುಂಬದಿಂದ ಅಂತರ ಕಾಯ್ದುಕೊಂಡಿದ್ದಾರೆ. ಕಾರ್ಯಕ್ರಮದಲ್ಲಿಅಮಿತಾಭ್ ಬಚ್ಚನ್, ಜಯಾ ಬಚ್ಚನ್, ಅಭಿಷೇಕ್ ಹಾಗೂ ಇತರರು ಒಟ್ಟಾಗಿ ಮದುವೆಗೆ ಆಗಮಿಸಿದ್ದಾರೆ. ಆದರೆ, ಈ ವೇಳೆ ಐಶ್ವರ್ಯಾ ಇರಲಿಲ್ಲ. ಅವರು ಯಾವುದೋ ಕಾರಣಕ್ಕೆ ಮದುವೆಗೆ ಹಾಜರಾಗುತ್ತಿಲ್ಲವೇನೋ ಎಂದು ಕೆಲವರು ಭಾವಿಸಿದರು. ಬಳಿಕ ಮಗಳ ಜೊತೆ ಐಶು ಮದುವೆಗೆ ಹಾಜರಾದರು.
ಐಶ್ವರ್ಯಾ ರೈ ಬಚ್ಚನ್ ಹಾಗೂ ಮಗಳು ಆರಾಧ್ಯಾ ಪ್ರತ್ಯೇಕವಾಗಿ ಮದುವೆಗೆ ಆಗಮಿಸಿದ್ದಾರೆ. ಈ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಐಶ್ವರ್ಯಾ ರೈಗೆ ಬಚ್ಚನ್ ಕುಟುಂಬದ ಜೊತೆ ಕಿರಿಕ್ ಇರೋದು ನಿಜ ಎಂದು ಅನೇಕರು ಮಾತನಾಡಿಕೊಂಡಿದ್ದಾರೆ. ಈ ಬಗ್ಗೆ ಬಚ್ಚನ್ ಕುಟುಂಬದವರು ಮೌನವಹಿಸಿದ್ದಾರೆ.