ಕೆಆರ್ಎಸ್ (ಕೃಷ್ಣ ರಾಜ ಸಾಗರ) ಡ್ಯಾಂ ಭರ್ತಿಯಾಗುತ್ತದೆ. ಆದರೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ತಗ್ಗಿದ್ದರಿಂದ ಕೆಆರ್ಎಸ್ ಡ್ಯಾಂನ ಒಳಹರಿವು 3,406 ಕ್ಯೂಸೆಕ್ಗೆ ಇಳಿಕೆಯಾಗಿರುವುದು ಕೊಂಚ ಬೇಸರದ ಸಂಗತಿಯಾಗಿದೆ.
ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಸುತ್ತ ಮಳೆ ಕಡಿಮೆಯಾಗಿದ್ದರಿಂದ ಒಳಹರಿವು 3,406 ಕ್ಯೂಸೆಕ್ಗೆ ಇಳಿಕೆ ಆಗಿದೆ. ನಿನ್ನೆ 4,673 ಕ್ಯೂಸೆಕ್ ಇದ್ದ ಒಳಹರಿವು ಇಂದು ಕಡಿಮೆಯಾಗಿದೆ. 124.80 ಅಡಿ ಗರಿಷ್ಠ ಮಟ್ಟದ ಜಲಾಶಯದಲ್ಲಿ 104.60 ಅಡಿ ನೀರು ಸಂಗ್ರಹವಾಗಿದೆ. 49.452 ಟಿಎಂಸಿ ಸಾಮರ್ಥ್ಯದ ಡ್ಯಾಂನಲ್ಲಿ 26.635 ಟಿಎಂಸಿ ನೀರು ಮಾತ್ರ ಶೇಖರಣೆ ಆಗಿದೆ. ಕೆಆರ್ಎಸ್ನಿಂದ 2,257 ಕ್ಯೂಸೆಕ್ ನೀರನ್ನ ನಾಲೆ ಹಾಗೂ ಕುಡಿಯುವ ನೀರಿಗಾಗಿ ಬಿಡಲಾಗಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಮತ್ತಷ್ಟು ಮಳೆಯಾದರೆ ಡ್ಯಾಂನ ನೀರಿನ ಮಟ್ಟ ಹೆಚ್ಚಾಗುವ ನಿರೀಕ್ಷೆಯಿದೆ.
- ಗರಿಷ್ಠ ಮಟ್ಟ- 124.80 ಅಡಿ
- ಇಂದಿನ ಮಟ್ಟ- 104.60 ಅಡಿ
- ಗರಿಷ್ಠ ಸಾಮರ್ಥ್ಯ- 49.452 ಟಿಎಂಸಿ
- ಇಂದಿನ ಸಾಮರ್ಥ್ಯ- 26.635 ಟಿಎಂಸಿ
- ಒಳ ಹರಿವು- 3,406 ಕ್ಯೂಸೆಕ್
- ಹೊರ ಹರಿವು- 2,257 ಕ್ಯೂಸೆಕ್