ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ. ಜೈಲಿನಲ್ಲಿ ಕಳೆಯುವ ಒಂದೊಂದು ದಿನವು ದರ್ಶನ್ ಗೆ ನರಕವಾಗಿದೆ. ನಿತ್ಯ ನೋವಿನಲ್ಲೇ ದಿನಗಳನ್ನು ಕಳೆಯುತ್ತಿರುವ ದರ್ಶನ್ ಆ ನೋವನ್ನು ಕಡಿಮೆ ಮಾಡಿಕೊಳ್ಳುವುದಕ್ಕಾಗಿ ಯೋಗ ಹಾಗೂ ಹನುಮಾನ್ ಚಾಲೀಸ್ ಪಠಣಕ್ಕೆ ಮುಂದಾಗಿದ್ದಾರಂತೆ. ನಿತ್ಯವೂ ಈಗ ಜೈಲಿನಲ್ಲಿ ಕೂತು ದರ್ಶನ್ ಹನುಮಾನ್ ಚಾಲೀಸ್ ಪಠಣ ಮಾಡುತ್ತಿದ್ದಾರೆ. ಜೊತೆಗೆ ಜೈಲರ್ ಗೆ ಮನವಿ ಮಾಡಿ ಅಲ್ಲೇ ಸಿಗುವ ಪುಸ್ತಕಗಳನ್ನು ಓದುತ್ತಿದ್ದಾರಂತೆ.
ಹೊರಗೆ ಐಶಾರಾಮಿ ಜೀವನ ನಡೆಸುತ್ತಿದ್ದ ದರ್ಶನ್ಗೆ ಜೈಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಕಷ್ಟವಾಗುತ್ತಿದೆ. ಜೈಲುವಾಸ, ದರ್ಶನ್ ಅವರನ್ನು ದೈಹಿಕ ಹಾಗೂ ತುಸು ಮಾನಸಿಕವಾಗಿಯೂ ಕುಗ್ಗಿಸಿದೆ. ಕೆಲವು ದಿನಗಳ ಹಿಂದಷ್ಟೆ ಜೈಲು ಊಟ ಪಚನವಾಗದೆ ಭೇದಿ ಸಮಸ್ಯೆ ಹಾಗೂ ನಿದ್ರಾಹೀನತೆ ಅನುಭವಿಸಿದ್ದ ದರ್ಶನ್ ತೂಕ ಕಳೆದುಕೊಂಡಿದ್ದರು. ಮಾನಸಿಕವಾಗಿಯೂ ಕುಗ್ಗಿರುವ ದರ್ಶನ್, ಈಗ ಯೋಗದ ಮೊರೆ ಹೋಗಿದ್ದಾರೆ.
ಕಳೆದ ಕೆಲ ದಿನಗಳಿಂದ ಜೈಲಿನಲ್ಲಿರುವ ದರ್ಶನ್ ಮುಂದಿನ ಭವಿಷ್ಯ ಏನಾಗಲಿದೆ ಎಂಬ ಚಿಂತೆ ಶುರುವಾಗಿದೆ. ಜೈಲಿನಲ್ಲಿ ಕಾಡುತ್ತಿರುವ ಒಂಟಿತನ, ಕುಟುಂಬ, ಸ್ನೇಹತರಿಂದ ದೂರಾಗಿ ಒಂಟಿಯಾಗಿ ಬದುಕಬೇಕಾದ ಅನಿವಾರ್ಯತೆ ಎಲ್ಲವುದರಿಂದ ಮಾನಸಿಕವಾಗಿ ಕುಗ್ಗಿರುವ ದರ್ಶನ್, ಮಾನಸಿಕ ಹಾಗೂ ದೈಹಿಕ ಕ್ಷಮತೆ ಕಾಪಾಡಿಕೊಳ್ಳಲು ಜೈಲಿನಲ್ಲಿ ಯೋಗದ ಮೊರೆ ಹೋಗಿದ್ದಾರೆ ಎನ್ನಲಾಗುತ್ತಿದೆ. ಪ್ರತಿದಿನ ಎರಡು ಬಾರಿ ದರ್ಶನ್ ಜೈಲಿನಲ್ಲಿಯೇ ಯೋಗಾಭ್ಯಾಸ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಜೊತೆಗೆ ಹನುಮಾನ್ ಚಾಲೀಸ್ ಪಡೆದ ಓದುತ್ತಿದ್ದಾರಂತೆ.
ದರ್ಶನ್, ಜೈಲಿನಲ್ಲಿ ಬಹುತೇಕ ಒಂಟಿಯಾಗಿಯೇ ಸಮಯ ದೂಡುತ್ತಿದ್ದಾರೆ ಎನ್ನಲಾಗುತ್ತಿದೆ. ಸಹಕೈದಿಗಳ ಸಹವಾಸದಿಂದಲೂ ದೂರವೇ ಇದ್ದಾರೆ. ಒಂಟಿತನ ಕಳೆಯಲು ಕೆಲ ಪುಸ್ತಕಗಳನ್ನು ಜೈಲಿನ ಗ್ರಂಥಾಲಯದಿಂದ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಬಗ್ಗೆ ದರ್ಶನ್ರಿಗೆ ದುಗುಡ ಗಾಡುತ್ತಿದೆ ಎನ್ನಲಾಗುತ್ತಿದ್ದು, ಈ ಪ್ರಕರಣದಲ್ಲಿ ತಮಗೆ ಆಗಬಹುದಾದ ಶಿಕ್ಷೆ ಇನ್ನಿತರೆ ವಿಷಯಗಳ ಬಗ್ಗೆ ಚಿಂತೆ ಶುರುವಾಗಿದೆ.