ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹತ್ಯೆಗೆ ಯತ್ನ ನಡೆದಿದ್ದು. ಟ್ರಂಪ್ ಅವರ ಚುನಾವಣಾ ರ್ಯಾಲಿಯ ವೇಳೆ ಗುಂಡಿನ ದಾಳಿ ನಡೆದಿದ್ದು ಘಟನೆಯಿಂದ ಟ್ರಂಫ್ ಮುಖವೆಲ್ಲ ರಕ್ತ ಸಿಕ್ತವಾಗಿದೆ. ಪ್ರತಿಯಾಗಿ ಪೊಲೀಸರು ನಡೆಸಿದ ದಾಳಿಯಲ್ಲಿ ಓರ್ವ ಸಾವನ್ನಪ್ಪಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಗಾಯಗೊಂಡ ಟ್ರಂಪ್ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು. ಘಟನೆಯಿಂದ ಅಮೆರಿಕ ಬೆಚ್ಚಿಬಿದ್ದಿದ್ದು, ಅಧ್ಯಕ್ಷ ಬೈಡನ್ ಪ್ರತಿಕ್ರಿಯಿಸಿದ್ದಾರೆ.
ಘಟನೆ ಕುರಿಂತೆ ಪ್ರತಿಕ್ರಿಯೆ ನೀಡಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್, ಪೆನ್ಸಿಲ್ವೇನಿಯಾದಲ್ಲಿ ಡೊನಾಲ್ಡ್ ಟ್ರಂಪ್ ರ್ಯಾಲಿಯಲ್ಲಿ ಗುಂಡಿನ ದಾಳಿ ನಡೆದಿದೆ. ಟ್ರಂಪ್ ಅವರ ಆರೋಗ್ಯ ಸುಧಾರಿಸಬೇಕು. ಅಲ್ಲದೇ ಅಮೆರಿಕದಲ್ಲಿ ಇಂತಹ ಹಿಂಸೆಗೆ ಜಾಗವಿಲ್ಲ. ಇದನ್ನು ಖಂಡಿಸಲು ನಾವು ರಾಷ್ಟ್ರವಾಗಿ ಒಂದಾಗಬೇಕು ಎಂದು ಬಿಡೆನ್ ಕರೆಕೊಟ್ಟಿದ್ದಾರೆ. ಹೌಸ್ ಸ್ಪೀಕರ್ ಮೈಕ್ ಜಾನ್ಸನ್ ಅವರು ಟ್ರಂಪ್ ಚೇತರಿಸಿಕೊಳ್ಳಲು ಪ್ರಾರ್ಥಿಸುತ್ತಿರುವುದಾಗಿ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಧ್ಯಕ್ಷ ಟ್ರಂಪ್ಗಾಗಿ ಪ್ರಾರ್ಥಿಸುತ್ತಿದ್ದೇನೆ ಎಂದು ಸ್ಪೀಕರ್ ಹೇಳಿದ್ದಾರೆ.
ಏತನ್ಮಧ್ಯೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಟ್ರಂಪ್ ಆರೋಗ್ಯವಾಗಿದ್ದಾರೆ ಎಂದು ಸಿಕ್ರೇಟ್ ಸರ್ವಿಸ್ ತಿಳಿಸಿದೆ. ಬಟ್ಲರ್ ಕೌಂಟಿ ಜಿಲ್ಲಾ ಅಟಾರ್ನಿ ಕಚೇರಿಯು ಸಿಬಿಎಸ್ ಪಿಟ್ಸ್ಬರ್ಗ್ ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದೆ. ಗುಂಡಿನ ದಾಳಿ ನಡೆದಾಗ ಟ್ರಂಪ್ ತಪ್ಪಿಸಿಕೊಳ್ಳಲು ಕೆಳಗೆ ಬಿದ್ದರು. ಕಿವಿಗೆ ಗುಂಡು ತಗುಲಿ ಮುಖದಿಂದ ರಕ್ತ ಹರಿಯುತ್ತಿದ್ದ ಫೋಟೋಗಳು ಎಲ್ಲೆಡೆ ವೈರಲ್ ಆಗಿದೆ.
ಗುಂಡಿನ ದಾಳಿಯ ಬಳಿಕ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್ ಅವರ ವಕ್ತಾರರು, ಅವರು ಆರೋಗ್ಯವಾಗಿದ್ದಾರೆ ಮತ್ತು ಸ್ಥಳೀಯ ವೈದ್ಯಕೀಯ ತಂಡದಿಂದ ಚಿಕಿತ್ಸೆಯನ್ನು ಮುಂದುವರಿಯುತ್ತಿದೆ ಎಂದು ತಿಳಿಸಿದ್ದಾರೆ. ಅವರ ವಕ್ತಾರ ಸ್ಟೀವನ್ ಚೆಯುಂಗ್, ಶೂಟಿಂಗ್ ಸಮಯದಲ್ಲಿ ಅವರ ತ್ವರಿತವಾಗಿ ರಿಯಾಕ್ಟ್ ಮಾಡಿದಕ್ಕೆ ಟ್ರಂಪ್ ಅವರಿಗೆ ಧನ್ಯವಾದ ಹೇಳಿದ್ದಾರೆ. ಸಿಎನ್ಎನ್ ವರದಿಯ ಪ್ರಕಾರ, ಟ್ರಂಪ್ ಪರ ಪ್ರಚಾರ ಮಾಡುವಾಗ ದಾಳಿಕೋರನನ್ನು ಭದ್ರತಾ ಸಿಬ್ಬಂದಿ ಗುಂಡಿಕ್ಕಿ ಕೊಂದಿದ್ದಾರೆ.
ಗುಂಡೇಟಿನ ಶಬ್ದ ಕೇಳಿದಾಗ ಟ್ರಂಪ್ ತಮ್ಮ ಆಡಳಿತದ ಬಗ್ಗೆ ಮಾತನಾಡುತ್ತಿದ್ದರು ಎಂದು ರಹಸ್ಯ ಸೇವಾ ಏಜೆಂಟ್ಗಳು ಬಹಿರಂಗಪಡಿಸಿದ್ದಾರೆ. ನಂತರ ಸಿಕ್ರೇಟ್ ಏಜೆಂಟ್ಗಳು ತಕ್ಷಣ ಅವರನ್ನು ರಕ್ಷಿಸಿ ವಾಹನದಲ್ಲಿ ವೇದಿಕೆಯಿಂದ ಆಸ್ಪತ್ರೆಗೆ ಸಾಗಿಸಿದ್ದಾರೆ. ಟ್ರಂಪ್ ಅವರನ್ನು ವೇದಿಕೆಯಿಂದ ಕೆಳಗಿಳಿಸಿದಾಗ ಮುಷ್ಟಿ ಎತ್ತಿ ಟ್ರಂಪ್ ಘೋಷಣೆ ಕೂಗಿದ್ದರು. ಅವರ ಸುರಕ್ಷತೆಗಾಗಿ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಟ್ರಂಪ್ ವೇದಿಕೆಯಿಂದ ನಿರ್ಗಮಿಸಿದ ತಕ್ಷಣ, ಪೊಲೀಸರು ಮೈದಾನವನ್ನು ತೆರವುಗೊಳಿಸಿದ್ದಾರೆ.