ಬೆಂಗಳೂರು: ವಾಲ್ಮೀಕ ಹಗರಣದ ತನಿಖೆ ದಿನದಿಂದ ದಿನಕ್ಕೆ ತೀವ್ರತೆ ಕಂಡುಕೊಳ್ತಿದೆ. ಇದೇ ಪ್ರಕರಣದಲ್ಲಿ ಒಬ್ಬ ಲಾಕ್ ಆಗಿದ್ರೆ ಮತ್ತೊಬ್ಬನಿಗಾಗಿ ಇಡಿ ಹುಡುಕಾಟ ನಡೆಸಿದೆ. ಅಂದ ಹಾಗೆ ನಾಗೇಂದ್ರ ಬಂಧನದಿಂದ ಮತ್ತಷ್ಟು ವಿಚಾರಗಳು ಹೊರಬರುತ್ತಿದ್ದು ಉಳಿದ ಭ್ರಷ್ಟರಿಗೆ ಎದೆಯಲ್ಲಿ ನಡುಕ ಶುರುವಾಗಿದೆ.
ಅಷ್ಟಕ್ಕು ಇಂದಿನಿ ಇನ್ವೆಷ್ಟಿಗೇಷನ್ ಏನಾಗಿತ್ತು. ಎಲ್ಲಾದರ ಡಿಟೇಲ್ಸ್ ಇಲ್ಲದೆ.
ಯೆಸ್… ಮಾಜಿ ಸಚಿವ ನಾಗೇಂದ್ರರಿಗೆ ಸುಧಾರಿಸಿಕೊಳ್ಳೋಕು ಬಿಡದ ರೀತಿಯಲ್ಲಿ ಇಡಿ ವಿಚಾರಣೆ ನಡೆಸುತ್ತಿದ್ದಾರೆ. ತನಿಖೆ ಮಾಡುವ ವೇಳೆ ವ್ಯಕ್ತಿಯನ್ನ ಒಂದಷ್ಟು ಗೊಂದಲಗೊಳಿಸಿ ಸತ್ಯ ಬಿಚ್ಚಿಡುವ ತಂತ್ರಗಳನ್ನ ಅನುಸರಿಸಲಾಗುತ್ತೆ. ಅವೆಲ್ಲಾಕ್ಕೂ ಜಗ್ಗದ ನಾಗೇಂದ್ರ ತನಗೇನು ಗೊತ್ತಿಲ್ಲ ಎಂಬ ಉತ್ತರಕ್ಕೆ ಸ್ಟಿಕ್ ಆನ್ ಆಗಿದ್ದಾರೆ. ಯಸ್ ನಾಗೇಂದ್ರ ಇಡಿ ತನಿಖೆಗೆ ಅಸಹಕಾರ ತೋರುತ್ತಿದ್ದಾರೆ.
ಹೌದು… ಇಡಿ ಆರೋಪಗಳನ್ನ ಪುಷ್ಟಿಕರಿಸುತ್ತಿವೆ ಹಗರಣದ ಟೈಮ್ ಲೈನ್ ಶುರುವಾಗಿದೆ… ಕಳೆದ ಡಿಸೆಂಬರ್ ನಲ್ಲಿ ಹಣ ವರ್ಗಾವಣೆಗೆ ಮುಹೂರ್ತ.. ಕಳೆದ ಜನವರಿಯಲ್ಲಿ ಯೂನಿಯನ್ ಬ್ಯಾಂಕ್ನ ಹೊಸ ಖಾತೆಗೆ ಹಣ ವರ್ಗಾವಣೆ ಮಾಡಲಾಗಿತ್ತು. ಜನವರಿ ಮತ್ತು ಫೆಬ್ರವರಿಯಲ್ಲಿ ಹೈದರಾಬಾದ್ ಫಸ್ಟ್ ಬ್ಯಾಂಕ್ ನಲ್ಲಿ 18 ನಕಲಿ ಖಾತೆಗಳು ಓಪನ್ ಮಾಡಲಾಗಿತ್ತು. ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ 18 ನಕಲಿ ಖಾತೆಗಳಿಗೆ 89 ಕೋಟಿ ಹಣ ವರ್ಗಾವಣೆಯಾಗಿದೆ.. ಕಳೆದ ಮೇ 7 ರಂದು ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಚುನಾವಣೆ ನಡೆದಿತ್ತು. ಚುನಾವಣೆಗೂ ಒಂದು ದಿನ ಮುಂಚೆ ಅಂದ್ರೆ ಮೇ 6 ರಂದು ಕೂಡ ಒಂದು ನಕಲಿ ಖಾತೆಗೆ 5 ಕೋಟಿ ವರ್ಗಾವಣೆ ಆಗಿತ್ತು. ಒಟ್ಟಾರೆ ಮೇ 7ಕ್ಕಿಂತ ಮುನ್ನ ನಿಗಮದ ಹಣ ಅಕ್ರಮವಾಗಿ ಆರೋಪಿಗಳ ಕೈ ಸೇರಿತ್ತು. ಇದೇ ಹಣದಲ್ಲೇ ನಾಗೇಂದ್ರರಿಂದ 20.19 ಕೋಟಿ ರೂ. ಹಣ ಚುನಾವಣೆಗೆ ಬಳಕೆ ಆರೋಪ ಚುನಾವಣೆಗೂ ಮುನ್ನವೇ ಹಣ ವರ್ಗಾವಣೆ ಆಗಿರೋದು ಇಡಿ ಆರೋಪಕ್ಕೆ ಪುಷ್ಟಿ ನೀಡ್ತಿದೆ.
ಇನ್ನು ನಾಗೇಂದ್ರ ಹಾಗೂ ಅವರ ಕುಟುಂಬ ಸದಸ್ಯರ ಬ್ಯಾಂಕ್ ಖಾತೆಗಳಲ್ಲಿನ ಕಳೆದ ಒಂದು ವರ್ಷದ ಹಣದ ವ್ಯವಹಾರದ ಮಾಹಿತಿ ಪಡೆದಿರುವ ಇ.ಡಿ ಅಧಿಕಾರಿಗಳು, ಅವುಗಳನ್ನ ಮುಂದಿಟ್ಟು ಪ್ರಶ್ನಿಸುತ್ತಿದ್ದಾರೆ. ಆದರೆ ನಾಗೇಂದ್ರ ಮಾತ್ರ ತನಗೇನು ಗೊತ್ತಿಲ್ಲ, ವಕೀಲರೊಂದಿಗೆ ಮಾತನಾಡಬೇಕು’ ಎಂದು ಉತ್ತರಿಸುತ್ತಿದ್ದಾರೆ. ಮತ್ತೊಂದೆಡೆ ನ್ಯಾಯಾಂಗ ಬಂಧನದಲ್ಲಿರುವ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ್ ನನ್ನು ವಿಚಾರಣೆ ನಡೆಸಿರುವ ಇ.ಡಿ ಅಧಿಕಾರಿಗಳು ಆರೋಪಿಗಳಾದ ನೆಕ್ಕುಂಟಿ ನಾಗರಾಜ್, ನಾಗೇಂದ್ರ ಅವರ ಸಂಬಂಧಿ ನಾಗೇಶ್ವರ್ ರಾವ್ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ್ ನಗರದ ಖಾಸಗಿ ಹೋಟೆಲ್ನಲ್ಲಿ ಮಾತುಕತೆ ನಡೆಸಿದ್ದುದರ ಕುರಿತು ವಿಚಾರಣೆ ನಡೆಸಿದ್ದಾರೆ. ಆದ್ರೆ ಯಾವುದಕ್ಕೂ ಸರಿಯಾಗಿ ಉತ್ತರ ಕೊಡದೇ ಹಾರಿಕೆ ಉತ್ತರ ನೀಡ್ತಿದ್ದಾರಂತೆ. ಇದೆ ರೀತಿ ಮುಂದಿನ ತನಿಖೆಯಲ್ಲೂ ಉತ್ತರಗಳನ್ನು ನೀಡಿದ್ರೆ ಮತ್ತಷ್ಟು ಸಂಕಷ್ಟ ಎದುರಿಸುವುದು ಕಟ್ಟಿಟ್ಟಬುತ್ತಿ..