ಒಡಿಶ: ಬಲಭದ್ರ ಹಾಗೂ ಸುಭದ್ರ ಪಕ್ಕ ನಿಂತಿರುವ ಜಗನ್ನಾಥನ ಕಣ್ಣುಗಳು ಹಾಗೂ ಆ ಮೂವರ ಕಣ್ಣುಗಳೂ ಸಹ ದೊಡ್ಡದಾಗೇ ಇದೆ. ಇದು ಯಾಕೆ ಹೀಗಿರಬಹುದು ಎಂದು ಹಲವಾರು ಬಾರಿ ನೀವು ಅಂದುಕೊಂಡಿರಬಹುದು. ಕಥೆಯೊಂದರ ಪ್ರಕಾರ 16108 ರ ಪತ್ನಿಯರನ್ನು ಹೊಂದಿದ ಕೃಷ್ಣನ ಬಗ್ಗೆ ಮಾತೆ ರೇವತಿ ಅವನ ಬಾಲ ಲೀಲೆಗಳನ್ನು ಹೇಳುತ್ತಾ ಇರುತ್ತಾಳೆ. ಇದನ್ನು ಆ ಭಗವಂತ ಕೇಳಿಸಿಕೊಳ್ಳಬಾರದು ಎಂದು ಬಾಗಿಲಿನಲ್ಲಿ ಒಬ್ಬರನ್ನು ಕಾವಲಿಡುತ್ತಾಳೆ.
ಆದರೆ ಭಗವಂತನಿಂದ ಏನನ್ನೂ ಮುಚ್ಚಿಡಲು ಸಾಧ್ಯವಿಲ್ಲ. ಅದೇ ಸಂದರ್ಭದಲ್ಲಿ ತನ್ನ ಎಲ್ಲ ಕೆಲಸಗಳನ್ನು ಬಿಟ್ಟು ಕೃಷ್ಣನು ಅತ್ತ ಧಾವಿಸುತ್ತಾನೆ. ಸುಭದ್ರೆ ಕೂಡ ಕೃಷ್ಣನ ಕಥೆಯಲ್ಲಿ ಕಳೆದು ಹೋಗಿರುತ್ತಾಳೆ. ಅವಳಿಗೆ ಇವನು ಮತ್ತು ಅಣ್ಣ ಬಲರಾಮನು ಬಂದಿರೋದು ಗೊತ್ತೇ ಆಗೋದಿಲ್ಲ. ಆಗ ಕೃಷ್ಣ ಎಲ್ಲವನ್ನೂ ಕೇಳಿಸಿಕೊಂಡು ಬಿಡುತ್ತಾನೆ. ಆ ವಿನೋದಗಳನ್ನು ಕೇಳಿದಾಗ ಕೃಷ್ಣ ನಿಯಂತ್ರಣ ತಪ್ಪುತ್ತಾನೆ.
ಮಾತಾ ರೇವತಿಗೆ ಇದು ತಿಳಿದಿತ್ತು ಆ ಕಾರಣದಿಂದಲೇ ಈ ಕಥೆ ಅವನಿಗೆ ಕೇಳಬಾರದು ಎಂದು ಅವಳು ಜಾಗರೂಕತೆ ವಹಿಸಿದ್ದಳು. ಭಗವಂತನ ಅತ್ಯಂತ ಪ್ರೀತಿಯ ಭಕ್ತೆ ಶ್ರೀಮತಿ ರಾಧಾ ರಾಣಿ ಬಗ್ಗೆಯೂ ಅವಳು ಮಾತಾಡುತ್ತಾಳೆ. ಆದ್ದರಿಂದ ಶ್ರೀಕೃಷ್ಣನು ಇದನ್ನೆಲ್ಲ ಕೇಳಲಾಗದೇ ಭಕ್ತರಿಂದ ಅಗಲಿಕೆಯ ನೋವು, ಅವರ ಪ್ರೀತಿಯ ಶ್ರೀಮತಿ ರಾಧಾ ರಾಣಿಯ ನೆನಪು ಎಲ್ಲವೂ ಕೃಷ್ಣನಿಗೆ ಒಂದೇ ಸಾರಿ ಬರುತ್ತದೆ.
ಕಣ್ಣುಗಳು ತಕ್ಷಣವೇ ತೆರೆದುಕೊಂಡು ಅವನ ಕೈಗಳು ಜಡವಾಗುತ್ತದೆ. ಪ್ರಜ್ಞೆಯಿಲ್ಲದೆ ನೆಲದ ಮೇಲೆ ಮೂವರೂ ಬೀಳುತ್ತಾರೆ. ಆಗ ಮಹರ್ಷಿ ನಾರದರು ಬಂದು ನಮ್ಮ ಭಗವಂತನ ಈ ಕರುಣಾಮಯಿ ರೂಪವನ್ನು ನೋಡಿ ಕಲಿಯುಗದಲ್ಲಿ ಭಕ್ತರು ಕೂಡ ನಿನ್ನ ಈ ರೂಪವನ್ನು ನೋಡುವಂತಾಗಲಿ ಎಂದು ಬಯಸುತ್ತಾರೆ. ಹೀಗಾಗಿ ಪುರಿ ಜಗನ್ನಾಥ ಹೀಗಿದ್ದಾನೆ ಎಂದು ಹೇಳಾಗುತ್ತದೆ.
ಇನ್ನೊಂದು ಅರ್ಥದಲ್ಲಿ ಈ ಕಣ್ಣುಗಳನ್ನು ಸೂರ್ಯ ಮತ್ತು ಚಂದ್ರರಿಗೆ ಹೋಲಿಸಲಾಗಿದೆ. ಈ ಎರಡು ಸುತ್ತಿನ ಕಣ್ಣುಗಳು ಸೂರ್ಯ ಮತ್ತು ಚಂದ್ರರನ್ನು ಪ್ರತಿನಿಧಿಸುತ್ತವೆ. ಸೂರ್ಯ ಮತ್ತು ಚಂದ್ರರು ಕತ್ತಲೆಯನ್ನು ಹೋಗಲಾಡಿಸುತ್ತಾರೆ ಮತ್ತು ನಮಗೆ ಬೆಳಕನ್ನು ನೀಡುತ್ತಾರೆ ಹಾಗೇ ಕೃಷ್ಣನೂ ಸಹ ಎಂದು ಹೇಳಲಾಗಿದೆ.