ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ ನಡೆಸಿದ ಘಟನೆಯಿಂದಾಗಿ ಅಮೆರಿಕದಲ್ಲಿ ರಾಜಕೀಯ ಸಂಚಲನ ಉಂಟಾಗಿದೆ. ಡೊನಾಲ್ಡ್ ಟ್ರಂಪ್ ಮೇಲೆ ಮಾರಣಾಂತಿಕ ದಾಳಿ ನಡೆಸಿದ ವ್ಯಕ್ತಿಯನ್ನು ಅದೇ ಕ್ಷಣದಲ್ಲಿ ಪೊಲೀಸರು ಹತ್ಯೆ ಮಾಡಿದ್ದಾರೆ. ಟ್ರಂಪ್ ಮೇಲೆ ಮಾರಣಾಂತಿಕ ದಾಳಿ ನಡೆಸಿದ ಶಂಕಿತ ಶೂಟರ್ ಅನ್ನು 20 ವರ್ಷದ ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ಎಂದು ಗುರುತಿಸಲಾಗಿದೆ.
ಇದೀಗ ಮೃತ ದಾಳಿಕೋರದ ಹಿನ್ನೆಲೆ ಬಯಲಾಗಿದೆ. ದಾಳಿಕೋರ ಕ್ರೂಕ್ಸ್ ಪೆನ್ಸಿಲ್ವೇನಿಯಾ ನಿವಾಸಿ. ಪೆನ್ಸಿಲ್ವೇನಿಯಾ ರ್ಯಾಲಿಯಲ್ಲಿ ಡೊನಾಲ್ಡ್ ಟ್ರಂಪ್ಗೆ ಗುಂಡು ಹಾರಿಸಿದ ದಾಳಿಕೋರ ಕ್ರೂಕ್ಸ್ ತನ್ನ ಶಾಲಾ ದಿನಗಳಲ್ಲಿ ಸಾಕಷ್ಟು ಶಾಂತ ಬಾಲಕನಾಗಿದ್ದ. ಏಕಾಂಗಿಯಾಗಿ ವಾಸಿಸುತ್ತಿದ್ದ ಈತ ಸಾಕಷ್ಟು ಕಿರುಕುಳ ಅನುಭವಿಸುತ್ತಿದ್ದ ಎಂದು ಹೇಳಲಾಗಿದೆ.
ಎಬಿಸಿ ನ್ಯೂಸ್ ವರದಿಯ ಪ್ರಕಾರ, ದಾಳಿಕೋರ ಕ್ರೂಕ್ಸ್ನ ಸಹಪಾಠಿಗಳು ಅವನ ಸಂಪೂರ್ಣ ಮಾಹಿತಿಯನ್ನು ನೀಡಿದ್ದಾರೆ. ದಾಳಿಕೋರ ಕ್ರೂಕ್ಸ್ನೊಂದಿಗೆ ಅಧ್ಯಯನ ಮಾಡಿದ ಸಹಪಾಠಿಗಳು ಅವನು ತುಂಬಾ ಶಾಂತ ಮತ್ತು ಸಾಮಾಜಿಕವಾಗಿ ಪ್ರತ್ಯೇಕವಾದ ವಿದ್ಯಾರ್ಥಿ ಎಂದು ಹೇಳಿದ್ದಾರೆ. ಅವನು ಆಗಾಗ್ಗೆ ಒಬ್ಬಂಟಿಯಾಗಿರುತ್ತಿದ್ದನು ಎಂದಿದ್ದಾರೆ.
ಆತ ಶಾಲೆಯಲ್ಲಿ ಸಾಕಷ್ಟು ಹಿಂಸೆಗೆ ಒಳಗಾಗಿದ್ದ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆತನ ಶಾಲಾ ದಿನಗಳಲ್ಲಿ, ಬಟ್ಟೆ ಮತ್ತು ಉಡುಪಿನ ಬಗ್ಗೆ ಬೆದರಿಸುತ್ತಿದ್ದರು. ಆತನಿಗೆ ಕಿರುಕುಳ ನೀಡಲಾಗಿತ್ತು ಎಂಬ ವಿಚಾರವೂ ಬಯಲಾಗಿದೆ. ತನಿಖಾಧಿಕಾರಿಗಳು ತನಿಖೆಯ ವೇಳೆ ಕ್ರೂಕ್ಸ್ ಕಾರಿನಲ್ಲಿ ಅನುಮಾನಾಸ್ಪದ ಸಾಧನವನ್ನು ಪತ್ತೆ ಹಚ್ಚಿದ್ದಾರೆ. ಇದನ್ನು ಬಾಂಬ್ ತಂತ್ರಜ್ಞರು ವಿಶ್ಲೇಷಿಸುತ್ತಿದ್ದಾರೆ. ಶೂಟಿಂಗ್ನಲ್ಲಿ ಬಳಸಲಾದ ಗನ್ ಎಆರ್-ಶೈಲಿಯ ಅರೆ-ಸ್ವಯಂಚಾಲಿತ ರೈಫಲ್ ಆಗಿದ್ದು, ಅದನ್ನು ಕಾನೂನುಬದ್ಧವಾಗಿ ಖರೀದಿಸಲಾಗಿದೆ. ಕ್ರೂಕ್ಸ್ ತಂದೆ ಬಹುಶಃ ಈ ಗನ್ ಖರೀದಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ದಾಳಿಕೋರನು ಮಾನಸಿಕ ಅಸ್ವಸ್ಥನಾಗಿದ್ದಾನೆ ಅಥವಾ ಯಾವುದೇ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದಾನೆ ಎಂಬುದಕ್ಕೆ ಯಾವುದೇ ಸಾಕ್ಷಿ ಇಲ್ಲ ಎಂದು ಹೇಳಿದರು. ಅವರ ಯಾವುದೇ ಮಿಲಿಟರಿ ಸಂಪರ್ಕವೂ ಬೆಳಕಿಗೆ ಬಂದಿಲ್ಲ. ಘಟನೆಯನ್ನು ಕೊಲೆ ಯತ್ನ ಮತ್ತು ದೇಶೀಯ ಭಯೋತ್ಪಾದನೆಯ ಸಂಭವನೀಯ ಕೃತ್ಯವೆಂದು ತನಿಖೆ ನಡೆಸಲಾಗುತ್ತಿದೆ ಎಂದು ಎಫ್ಬಿಐನ ಪಿಟ್ಸ್ಬರ್ಗ್ ಫೀಲ್ಡ್ ಆಫೀಸ್ನ ವಿಶೇಷ ಏಜೆಂಟ್ ಕೆವಿನ್ ರೋಜೆಕ್ ಹೇಳಿದ್ದಾರೆ.