ಮಕ್ಕಳನ್ನು ಬೆಳೆಸುವುದು ಎಂದರೆ ಅಷ್ಟು ಸುಲಭದ ಮಾತಲ್ಲ. ಮಗುವನ್ನು ದೈಹಿಕ, ಮಾನಸಿಕ ಹಾಗೂ ಆರೋಗ್ಯಯುತವಾಗಿ ಬೆಳೆಸುವಲ್ಲಿ ಪೋಷಕರ ಪಾತ್ರ ಬಹುದೊಡ್ಡದು ಅದಲ್ಲದೇ ಮಕ್ಕಳೊಂದಿಗೆ ಈ ರೀತಿ ನಡೆದುಕೊಳ್ಳುವ ಪೋಷಕರು ಸಾವಿರ ಸಲ ಯೋಚಿಸಬೇಕು.
ತಮ್ಮ ಮಕ್ಕಳಿಗೆ ಯಾವುದರಲ್ಲಿ ಕೊರತೆಯಾಗಬಾರದು ಎನ್ನುವ ಕಾರಣಕ್ಕೆ ಮಕ್ಕಳು ಏನು ಕೇಳಿದರೂ ಕೊಡಿಸುತ್ತಾರೆ.
ಮಕ್ಕಳಿಗೆ ಹಣ ಬೆಲೆ ಹಾಗೂ ಬಡತನದ ಬಗ್ಗೆ ಸ್ವಲ್ಪವಾದರೂ ಅನುಭವಿರಬೇಕು. ಕೇಳಿದ್ದನ್ನೆಲ್ಲ ಕೊಡಿಸುವುದರಿಂದ ಎಲ್ಲಾ ವಸ್ತುಗಳು ಮಕ್ಕಳ ಕೈ ಸೇರುತ್ತದೆ. ಮಕ್ಕಳಿಗೆ ತಮ್ಮ ಭಾವನೆಗಳನ್ನು ನಿಯಂತ್ರಿಸುವುದನ್ನು ಕಲಿಸಿಕೊಡದಿದ್ದರೆ ಮಕ್ಕಳು ಹಾದಿ ತಪ್ಪುವುದರಲ್ಲಿ ಸಂದೇಹವಿಲ್ಲ.
ಮಗು ಸಣ್ಣ ಪುಟ್ಟ ತಪ್ಪು ಮಾಡಿದ ಕೂಡಲೇ ಪೋಷಕರು ಬೈಯಲು ಪ್ರಾರಂಭಿಸುವುದು. ಹೆತ್ತವರು ತಾಳ್ಮೆಯಿಂದಲೇ ತಪ್ಪನ್ನು ತಿದ್ದಿ ಹೇಳುವುದು ಒಳ್ಳೆಯದು. ಮಕ್ಕಳಿಗೆ ಹೀಗೆ ಬೈದರೆ ಮಕ್ಕಳು ಹಾಳಾಗಲು ಹೆತ್ತವರೇ ಕಾರಣವಾಗುತ್ತಾರೆ. ತಂದೆ ತಾಯಿ ಬೈಯುತ್ತಾರೆ ಎನ್ನುವ ಕಾರಣ ಏನಾದರೂ ತಪ್ಪು ಮಾಡಿದರೆ ಮುಚ್ಚಿಡುವ ಸಾಧ್ಯತೆಯಿರುತ್ತದೆ. ಇದು ಮಕ್ಕಳ ಹಾದಿ ತಪ್ಪಲು ಮುಖ್ಯ ಕಾರಣವಾಗುತ್ತದೆ
ಪೋಷಕರು ಮಕ್ಕಳನ್ನು ಆಡಲು ಹೊರಗಡೆ ಬಿಡುವುದಿಲ್ಲ. ನಾಲ್ಕು ಗೋಡೆಗಳಲ್ಲಿ ನಡುವೆ ಮೊಬೈಲ್ ಕೊಟ್ಟು ಬಿಡುತ್ತಾರೆ. ಮಕ್ಕಳು ಹೆಚ್ಚು ಮೊಬೈಲ್ ಬಳಕೆ ಮಾಡುವುದರಿಂದ ಅವರ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅದಲ್ಲದೇ ಮಕ್ಕಳು ಮನೆಯಲ್ಲಿರುವಾಗ ಹೆತ್ತವರು ಕೂಡ ಮೊಬೈಲ್ ನಲ್ಲೇ ಮುಳುಗಿರುತ್ತಾರೆ. ಪೋಷಕರ ಈ ಅಭ್ಯಾಸವು ಮಕ್ಕಳು ಮೊಬೈಲ್ ಬಳಸುವುದಕ್ಕೆ ಪ್ರೇರೇಪಿಸುತ್ತದೆ.