ಗುಜರಾತ್ʼನ ಸಬರಕಾಂತ ಮತ್ತು ಅರಾವಳಿ ಜಿಲ್ಲೆಗಳಲ್ಲಿ ‘ಚಂಡೀಪುರ’ ಹೆಸರಿನ ಸೋಂಕು ಜನರಿಗೆ ಭೀತಿ ಹುಟ್ಟಿಸಿದೆ. ಹೌದು ಚಂಡೀಪುರ ವೈರಸ್ ಸೋಂಕಿಗೆ 5 ಮಕ್ಕಳು ಬಲಿಯಾಗಿದ್ದು, ಇಬ್ಬರು ಹಿಮ್ಮತ್ನಗರ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕೃತವಾಗಿ ತಿಳಿದು ಬಂದಿದೆ.
ರಾಬ್ಡೋವಿರಿಡೆ ಹರಡುವ ಸೋಂಕಾಗಿದೆ. ಈ ಸೋಂಕು ತೀವ್ರವಾದ ಎನ್ಸೆಫಾಲಿಟಿಸ್, ಮೆದುಳಿನ ತೀವ್ರವಾದ ಉರಿಯೂತವನ್ನು ಉಂಟುಮಾಡಬಹುದು. ಮೊದಲಿಗೆ 1965 ರಲ್ಲಿ ಮಹಾರಾಷ್ಟ್ರದಲ್ಲಿ ಈ ಸೋಂಕು ಪತ್ತೆಯಾಗಿತ್ತು.
ದೇಶದಲ್ಲಿ ಎನ್ಸೆಫಾಲಿಟಿಕ್ ಕಾಯಿಲೆಯ ವಿವಿಧ ಸಂಬಂಧವನ್ನು ಹೊಂದಿದೆ ಈ ಸೋಂಕು. ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ 2003ರಲ್ಲಿ ಈ ಸೋಂಕು ಹರಡಿತು. 329 ಮಕ್ಕಳು ಸೋಂಕಿಗೆ ಗುರಿಯಾಗಿದ್ದು, 183 ಸಾವನ್ನಪ್ಪಿದ್ದರು. 2004 ರಲ್ಲಿ ಗುಜರಾತ್ನಲ್ಲಿ ಕೆಲವು ಪ್ರಕರಣ ಪತ್ತೆಯಾಗಿ, ಸಾವು ಸಂಭವಿಸಿತ್ತು.
ಇದೀಗ ಸೋಂಕಿಗೆ ಜುಲೈ 10 ರಂದು ಸಾವುಗಳು ಸಂಭವಿಸಿವೆ, ಮೃತರಲ್ಲಿ ಒಬ್ಬರು ಸಬರಕಾಂತ್ ಜಿಲ್ಲೆಯವರು. ಇನ್ನಿಬ್ಬರು ಅರಾವಳಿ ಜಿಲ್ಲೆಯವರು. ಈ ಸೋಂಕಿಗೆ ಇನ್ನಬ್ಬರು ರಾಜಸ್ಥಾನದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜಸ್ಥಾನದ ಆರೋಗ್ಯ ಅಧಿಕಾರಿಗಳು ಕೂಡ ಈ ಸೋಂಕು ಜೀವ ಹಾನಿಕಾರಕ ಸೋಂಕಾಗಿದೆ ಎಂದು ಎಚ್ಚರಿಸಿದ್ದಾರೆ.