ಲಂಡನ್: ವಿದೇಶಗಳ ಮೇಲೆ ಚೀನಾ ಬೇಹುಗಾರಿಕೆಯ ಕುತಂತ್ರ ನಡೆಸುತ್ತಿದೆ ಎನ್ನುವ ಆರೋಪಗಳ ನಡುವೆಯೇ ದೇಶದ ಭದ್ರತಾ ಹಿತದೃಷ್ಟಿಯ ಕಾರಣ ನೀಡಿ, ಬ್ರಿಟನ್ ಸರಕಾರವು ಚೀನಾ ಮೂಲದ ಆ್ಯಪ್ ಟಿಕ್-ಟಾಕ್ ಬಳಕೆಯನ್ನು ನಿಷೇಧಿಸಿದೆ.
ಸರಕಾರದ ಫೋನ್ಗಳು, ಸಾಧನಗಳಲ್ಲಿ ಟಿಕ್-ಟಾಕ್ ಆ್ಯಪ್ ಬಳಕೆಯನ್ನು ನಿಷೇಧಿಸಿರುವುದಾಗಿ ಸಂಪುಟ ಸಚಿವ ಒಲಿವರ್ ಡೋವxನ್ ಬ್ರಿಟನ್ ಸಂಸತ್ತಿನಲ್ಲಿ ತಿಳಿಸಿದ್ದಾರೆ.
ಈ ಮೂಲಕ ಟಿಕ್-ಟಾಕ್ ನಿರ್ಬಂಧಿಸಿರುವ ದೇಶವಾದ ಭಾರತ, ಅಮೆರಿಕ, ಐರೋಪ್ಯ ಒಕ್ಕೂಟ, ಕೆನಡಾದ ಸಾಲಿಗೆ ಬ್ರಿಟನ್ ಕೂಡ ಸೇರ್ಪಡೆಗೊಂಡಿದೆ. ಸರಕಾರಿ ಕೆಲಸಗಳಿಗೆ ಸಂವಹನವಾಗಿ ಬಳಸುತ್ತಿರುವ ಸಾಧನಗಳಿಂದ ಸರಕಾರದ ಮಾಹಿತಿಗಳನ್ನು ಆ್ಯಪ್ ಬಳಕೆ ಮಾಡಿಕೊಳ್ಳುವ ಸಾಧ್ಯತೆಗಳ ಹಿನ್ನೆಲೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.