ಅನಂತ್ ಮತ್ತು ರಾಧಿಕಾ ಮರ್ಚೆಂಟ್ ಮದುವೆ ಅದ್ಧೂರಿಯಾಗಿ ನೆರವೇರಿದೆ. ಮದುವೆಗೆ ಸಂಬಂಧಿಸಿದ ವಿಡಿಯೋಗಳು, ಗೆಸ್ಟ್ ಲಿಸ್ಟ್, ಅದ್ಧೂರಿತನ ನೋಡಿ ಅಭಿಮಾನಿಗಳು ಬೆರಗಾಗಿದ್ದಾರೆ. ಮಗನ ಮದುವೆ ಬೆನ್ನಲ್ಲೇ ನೀತಾ ಅಂಬಾನಿ ಮಾಧ್ಯಮಕ್ಕೆ ಕ್ಷಮೆಯಾಚಿಸಿದ್ದಾರೆ. ಮದುವೆ ಬಂದು ಹಾರೈಸಿದಕ್ಕೆ, ತುಂಬಾ ತಾಳ್ಮೆಯಿಂದ ಕಾರ್ಯಕ್ರಮಕ್ಕೆ ಹಾಜರಿ ಹಾಕಿರುವುದಕ್ಕೆ ಧನ್ಯವಾದ ಎಂದಿದ್ದಾರೆ.
ಈ ಮದುವೆ ಸಂದರ್ಭದಲ್ಲಿ ಏನಾದರೂ, ಯಾರಿಗಾದರೂ ಕಷ್ಟ ಆಗಿದ್ದರೆ ಕ್ಷಮೆ ಕೋರುತ್ತೇನೆ. ಇದು ಮದುವೆ ಮನೆ, ಏನಾದರೂ ತೊಂದರೆ ಆಗಿರಬಹುದು. ಹೀಗೆ ಏನಾದರೂ ಆಗಿದ್ರೆ ಕ್ಷಮಿಸಿಬಿಡಿ ಎಂದು ನೀತಾ ಅಂಬಾನಿ ಹೇಳಿದ್ದಾರೆ. ಈಗಾಗಲೇ ನೀವು ಮದುವೆಗೆ ಬಂದು ಕಳೆ ಹೆಚ್ಚಿಸಿದ್ದೀರಿ.
ವಿವಾಹೋತ್ತರ ಕಾರ್ಯಕ್ರಮಗಳು ಇನ್ನೂ ಜಾರಿಯಲ್ಲಿದೆ. ಅವುಗಳಿಗೂ ನೀವು ಬಂದು ಶುಭಹಾರೈಸಬೇಕು ಎಂದು ನೀತಾ ಅಂಬಾನಿ ಹೇಳಿದ್ದಾರೆ. ಅಂದಹಾಗೆ, ಹಲವು ವರ್ಷಗಳ ಪ್ರೀತಿಗೆ ಅನಂತ್ ಮತ್ತು ರಾಧಿಕಾ ಜು.12ರಂದು ಮದುವೆಯ ಮುದ್ರೆ ಒತ್ತಿದ್ದಾರೆ. ಈ ವಿವಾಹದಲ್ಲಿ ಯಶ್ ದಂಪತಿ, ರಶ್ಮಿಕಾ ಮಂದಣ್ಣ, ದೀಪಿಕಾ ಪಡುಕೋಣೆ ದಂಪತಿ, ರಜನಿಕಾಂತ್, ಬಿಗ್ ಬಿ ಫ್ಯಾಮಿಲಿ, ಶಾರುಖ್ ಖಾನ್, ಸಲ್ಮಾನ್ ಖಾನ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು.