2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗಾಗಿ ಭಾರತ ಕ್ರಿಕೆಟ್ ತಂಡವು ಪಾಕಿಸ್ತಾನಕ್ಕೆ ಬರುವುದಿಲ್ಲ ಎಂದು ಹೇಳಿದೆ. ಭಾರತ ಸರ್ಕಾರ ಭದ್ರತಾ ಕಾರಣಗಳಿಗಾಗಿ ಭಾರತ ತಂಡವನ್ನು ಕಳುಹಿಸಲು ಅನುಮತಿ ನಿರಾಕರಿಸಿದ್ದರೆ.
ಬಿಸಿಸಿಐ ಲಿಖಿತ ರೂಪದಲ್ಲಿ ಬರೆದುಕೊಡಬೇಕು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಒತ್ತಾಯಿಸಿದೆ.
ಭಾರತ ಕ್ರಿಕೆಟ್ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸಲು ಭಾರತ ಸರ್ಕಾರ ಅನುಮತಿ ನಿರಾಕರಿಸಿದರೆ, ಅದನ್ನು ಲಿಖಿತ ರೂಪದಲ್ಲಿ ಬರೆದುಕೊಡಬೇಕು. ಜೊತೆಗೆ ಆ ಪತ್ರವನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ (ಐಸಿಸಿ) ಸಲ್ಲಿಸಬೇಕು. ಈಗಾಗಲೇ ಕರಡು ವೇಳಾಪಟ್ಟಿ ಸಿದ್ಧಗೊಂಡಿರುವುದರಿಂದ ಟೂರ್ನಿ ಪ್ರಾರಂಭವಾಗುವ 5-6 ತಿಂಗಳಿಗೆ ಮುಂಚಿತವಾಗಿಯೇ ಐಸಿಸಿಗೆ ತಿಳಿಸಬೇಕು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೇಳಿದೆ.
2025ರ ಫೆಬ್ರವರಿ 19ರಿಂದ ಮಾರ್ಚ್ 9ರ ವರೆಗೆ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಾಕ್ ಆತಿಥ್ಯದಲ್ಲಿ ನಡೆಯಲಿದೆ. ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಯಾದ್ರೆ ಮಾರ್ಚ್ 10 ರಂದು ಮೀಸಲು ದಿನ ಇರಲಿದೆ. ಪಾಕಿಸ್ತಾನದ ಕರಾಚಿ, ಲಾಹೋರ್, ಮುಲ್ತಾನ್ ಮತ್ತು ರಾವಲ್ಪಿಂಡಿ ಕ್ರೀಡಾಂಗಣಗಳು
ಆತಿಥ್ಯ ವಹಿಸಲಿವೆ.
ಈಗಾಗಲೇ ಪಿಸಿಬಿ ತನ್ನ ಕರಡು ವೇಳಾಪಟ್ಟಿಯನ್ನ ಐಸಿಸಿಗೆ ಸಲ್ಲಿಸಿದೆ. ಸಂಭವನೀಯ ಸೆಮಿಫೈನಲ್ ಮತ್ತು ಫೈನಲ್ ಪಂದ್ಯ ಸೇರಿದಂತೆ ಭಾರತದ ಎಲ್ಲಾ ಪಂದ್ಯಗಳನ್ನು ಲಾಹೋರ್ನಲ್ಲಿ ನಿಗದಿಪಡಿಸಲಾಗಿದೆ. ಪಾಕಿಸ್ತಾನದ ಹೊರಗೆ ಕೆಲವು ಪಂದ್ಯಗಳನ್ನು ಆಡುವ ಅಗತ್ಯವಿದ್ದಲ್ಲಿ ಐಸಿಸಿ ಮ್ಯಾನೇಜ್ಮೆಂಟ್ ಹೆಚ್ಚುವರಿ ವೆಚ್ಚವನ್ನು ಶಿಫಾರಸು ಮಾಡಲಿದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.