ರಾಯಚೂರು : ಜಿಲ್ಲೆಯಲ್ಲಿ ನಡೆಯುತ್ತಿರುವ ಏಮ್ಸ್ ಹೋರಾಟದ ಸ್ಥಳಕ್ಕೆ ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಸುಭುಧೇಂದ್ರ ಶ್ರೀ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದರು.
ರಾಯಚೂರು ನಗರದ ಮಹಾತ್ಮಗಾಂಧಿ ಪ್ರತಿಮೆ ಮುಂದೆ ನಡೆಯುತ್ತಿರುವ ಪ್ರತಿಭಟನಾ ಧರಣಿ ಸ್ಥಳಕ್ಕೆ ಭೇಟಿ ನೀಡಿದ ಶ್ರೀಗಳು ಬೆಂಬಲ ವ್ಯಕ್ತಪಡಿಸಿದ್ದಾರೆ. ಏಮ್ಸ್ ಹೋರಾಟ ಕಳೆದ 308 ದಿನಗಳಿಂದ ನಡೆಯುತ್ತಿದೆ. ಏಮ್ಸ್ ಗಾಗಿ ಕೇಂದ್ರ ಸರ್ಕಾರಕ್ಕೂ, ಸಿಎಂ ಬೊಮ್ಮಾಯಿಯವರಿಗೂ ಏಮ್ಸ್ ರಾಯಚೂರಿಗೆ ನೀಡುವಂತೆ ತಿಳಿಸಿದ್ದೇವೆ. ಈ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಈ ವೇದಿಕೆ ಯಾವುದೇ ಪಕ್ಷದ ವೇದಿಕೆಯಲ್ಲ. ರಾಯಚೂರು ಜಿಲ್ಲೆ ಚಿನ್ನದ ನಾಡು,ಭತ್ತದ ಕಣಜ, ಎರಡು ನದಿಗಳ ಬೀಡಾಗಿದೆ. ಐಐಟಿ ಸಂಸ್ಥೆ ರಾಯಚೂರಿಗೆ ಬರಬೇಕಿತ್ತು ವಂಚನೆಯಾಗಿದೆ.
ಹಸಿದವರಿಗೆ ಅನ್ನ ಕೊಟ್ರೆ ಅದು ಜೀರ್ಣವಾಗುತ್ತೆ, ಹಸಿದೇ ಇದ್ದವರಿಗೆ ಅನ್ನ ಕೊಟ್ರೆ ಅದು ಅಜೀರ್ಣವಾಗುತ್ತೆ, ಎನ್ನುವ ಮೂಲಕ ಅಭಿವೃದ್ಧಿ ಹೊಂದಿರುವ ಧಾರವಾಡಕ್ಕೆ ಏಮ್ಸ್ ನೀಡಬಾರದೆಂದು ಪರೋಕ್ಷವಾಗಿ ಶ್ರೀಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ತಿಳಿ ಹೇಳಿದರು. ನಮಗೆ ಏಮ್ಸ್ ಬೇಕೇ ವಿನ: ಏಮ್ಸ್ ಮಾದರಿ ಬೇಡ. ಶಾಂತಿಯುತ ಸಂಘಟನಾತ್ಮಕ ಹೋರಾಟ ಮುಂದುವರೆಯಲಿ ನಮಗೆ ಭರವಸೆ ಇದೆ ಏಮ್ಸ್ ಸಿಕ್ಕೇ ಸಿಗುತ್ತದೆ ಎಂದು ಶ್ರೀಗಳು ಅಭಯ ನೀಡಿದರು.