ಟಾಲಿವುಡ್ ಬ್ಯೂಟಿ ಸಮಂತಾ ಸದ್ಯ ಮತ್ತೆ ಚಿತ್ರರಂಗದಲ್ಲಿ ಆಕ್ಟೀವ್ ಆಗಿದ್ದಾರೆ. ಮಯೋಸಿಟಿಸ್ ಕಾಯಿಲೆಯಿಂದ ಬಳಲುತ್ತಿದ್ದ ನಟಿ ಸದ್ಯ ಚೇತರಿಸಿಕೊಂಡಿದ್ದಾರೆ.ಈ ಬೆನ್ನಲ್ಲೇ ನಟಿ ಸಿನಿಮಾದ ಕೆಲಸಗಳಲ್ಲಿ ಆಕ್ಟೀವ್ ಆಗಿದ್ದಾರೆ. ಸದ್ಯ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ಸಮಂತಾ ಡಿವೋರ್ಸ್ ಹಾಗೂ ಆರೋಗ್ಯದ ಸ್ಥಿತಿ ಬಗ್ಗೆ ಮಾತನಾಡಿದ್ದಾರೆ.
ನಮ್ಮ ಜೀವನದ ಬಗ್ಗೆ ನಾವು ಕೆಲವು ವಿಷಯಗಳನ್ನು ಬದಲಾಯಿಸಬಹುದೆಂದು ನಾವೆಲ್ಲರೂ ಬಯಸುತ್ತೇವೆ. ಆದರೆ ನನ್ನಲ್ಲಿರುವ ವಿಷಯಗಳನ್ನು ನಾನು ಅನುಭವಿಸಬೇಕೇ ಎಂದು ನಾನು ಕೆಲವೊಮ್ಮೆ ಆಶ್ಚರ್ಯ ಪಡುತ್ತೇನೆ. ಆದರೆ ಹಿಂತಿರುಗಿ ನೋಡಿದಾಗ ನನಗೆ ಬೇರೆ ದಾರಿ ಇಲ್ಲ ಎಂಬ ಭಾವನೆ ಮೂಡುತ್ತದೆ ಎಂದಿದ್ದಾರೆ ಸಮಂತಾ. ಯಾವುದೇ ಸಮಸ್ಯೆಯಿಂದ ಹೊರಗೆ ಬರುವ ತನಕ ಹೋರಾಡಬೇಕು. ಇಂತಹ ಸಮಯದಲ್ಲಿಯೂ ನಾನು ಎಂದಿಗಿಂತಲೂ ಬಲಶಾಲಿಯಾಗಿರಬೇಕೆಂದು ಭಾವಿಸುತ್ತೇನೆ. ನಾನು ಬೆಂಕಿಯ ಹಾದಿಯಲ್ಲಿ ಸಾಗಿದ್ದೇನೆ ಎಂದು ಡಿವೋರ್ಸ್ ಕುರಿತು ಪರೋಕ್ಷವಾಗಿ ಮಾತನಾಡಿದ್ದಾರೆ.
ನನ್ನ ವೈಯಕ್ತಿಕ ಬೆಳವಣಿಗೆಗೆ ಅಧ್ಯಾತ್ಮ ಅವಿಭಾಜ್ಯ ಅಂಶವಾಗಿದೆ. ಇದು ನನ್ನ ಜೀವನದಲ್ಲಿ ನೆರವಾಗಿದೆ. ಅಧ್ಯಾತ್ಮವು ಉತ್ತಮ ಸ್ನೇಹಿತ ಮತ್ತು ಶಕ್ತಿಯ ಮೂಲವಾಗಿದೆ ಎಂದು ನಂಬುತ್ತೇನೆ ಎಂದು ಸಮಂತಾ ಹೇಳಿದ್ದಾರೆ.
ಅಂದಹಾಗೆ, ನಟ ನಾಗಚೈತನ್ಯ ಜೊತೆಗಿನ ದಾಂಪತ್ಯಕ್ಕೆ 2021ರಲ್ಲಿ ಸಮಂತಾ ಅಂತ್ಯ ಹಾಡಿದರು. 2022ರಲ್ಲಿ ಮಯೋಸಿಟಿಸ್ ಕಾಯಿಲೆಗೆ ತುತ್ತಾದ ಬಳಿಕ ನಟನೆಯಿಂದ ಬ್ರೇಕ್ ಪಡೆದರು. ಸದ್ಯ ಮತ್ತೆ ಸಿನಿಮಾಗಳ ಕೆಲಸಗಳಲ್ಲಿ ಸಮಂತಾ ಬ್ಯುಸಿಯಾಗಿದ್ದಾರೆ.