ಬೆಂಗಳೂರು:- ರಾಜಧಾನಿ ಬೆಂಗಳೂರಿಗರಿಗೆ ಆತಂಕ ಹೆಚ್ಚಾಗಿದ್ದು, ಡೆಂಗ್ಯೂ ಜತೆಗೆ ಚಿಕುನ್ ಗುನ್ಯಾ ಕೇಸ್ ಹೆಚ್ಚಳವಾಗಿದೆ.
ಡೆಂಗ್ಯೂ ಹತೋಟಿಗೆ ಬರುತ್ತಿಲ್ಲ. ಇದೆಲ್ಲದರ ಆತಂಕದ ಮಧ್ಯೆ ನಗರದಲ್ಲಿ ಚಿಕುನ್ ಗುನ್ಯಾ ಕೂಡಾ ಹೆಚ್ಚಾಗಲು ಶುರುವಾಗಿದೆ. ಬೆಂಗಳೂರಿನ ಆಸ್ಪತ್ರೆಗಳಲ್ಲಿ ಚಿಕುನ್ ಗುನ್ಯಾ ಪ್ರಕರಣ ಏರಿಕೆಯಾಗುತ್ತಿದೆ.
ಪ್ರಕರಣಗಳು ದಾಖಲಾಗಿದ್ದವು. ಬಿಬಿಎಂಪಿ ವ್ಯಾಪ್ತಿಯಲ್ಲಿ 123 ಕೇಸ್ ದಾಖಲಾಗಿತ್ತು. ಡೆಂಗ್ಯೂ ನಡುವೆ ಇದೀಗ 15 ದಿನಗಳಲ್ಲೇ ಚಿಕುನ್ ಗುನ್ಯಾ ಕೇಸ್ಗಳು ಹೆಚ್ಚಾಗಿವೆ. ಸೋಮವಾರದ ವರೆಗೆ ರಾಜ್ಯದಲ್ಲಿ 810 ಪ್ರಕರಣ ಕಂಡುಬಂದರೆ, ಬಿಬಿಎಂಪಿ ವ್ಯಾಪ್ತಿಯಲ್ಲಿ 176 ಚಿಕುನ್ ಗುನ್ಯಾ ಪಾಸಿಟಿವ್ ಕೇಸ್ಗಳು ಪತ್ತೆಯಾಗಿವೆ. ಇದುವರೆಗೂ ಒಂದು ತಿಂಗಳಲ್ಲಿ 303 ಪ್ರಕರಣ ದಾಖಲಾಗಿದೆ.
ನಗರದ ಜನರು ಎಚ್ಚರಿಕೆ ವಹಿಸಬೇಕಾಗಿದೆ. ಸಂಧಿಗಳಲ್ಲಿ ನೋವು, ಜ್ವರ ಕಂಡು ಬಂದಲ್ಲಿ ವೈದ್ಯರನ್ನ ಸಂಪರ್ಕಿಸಿ ಎಂದು ತಜ್ಞರು ಸಲಹೆ ನೀಡಿದ್ದಾರೆ. ಲಕ್ಷಣಗಳು ಕಂಡುಬಂದಲ್ಲಿ ಚಿಕುನ್ ಗುನ್ಯಾ ಪರೀಕ್ಷೆ ಮಾಡಿಸಿದರೆ ಉತ್ತಮ ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಜುಲೈ 15ರ ಅಂಕಿಅಂಶ ಪ್ರಕಾರ ರಾಜ್ಯದಲ್ಲಿ 937 ಪ್ರಕರಣಗಳು ವರದಿಯಾಗಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 176 ಪ್ರಕರಣಗಳು ಪತ್ತೆಯಾಗಿದ್ದು, ಈವರೆಗಿನ ಒಟ್ಟು ಪ್ರಕರಣಗಳ ಸಂಖ್ಯೆ 1,113 ಆಗಿದೆ.
ಇದರ ಜೊತೆಗೆ ಈಗಾಗಲೇ ನಗರದ ಕೆಸಿ ಜನರಲ್, ವಿಕ್ಟೋರಿಯಾ, ಜಯನಗರ ಜನರಲ್ ಆಸ್ಪತ್ರೆಯಲ್ಲಿ ಡೆಂಗ್ಯೂಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಇದೀಗ ಚಿಕುನ್ ಗುನ್ಯಾದಂತಹ ಪ್ರಕರಣಗಳ ಗುಣಲಕ್ಷಣಗಳು ಕಂಡು ಬಂದಲ್ಲಿ, ಅಂತಹವರನ್ನ ಪರೀಕ್ಷೆಗೆ ಒಳಪಡಿಸಲಾಗ್ತಿದೆ.
ಒಟ್ಟಿನಲ್ಲಿ ನಗರದಲ್ಲಿ ವೈದ್ಯರು ನಡುವೆ ಚಿಕುನ್ ಗುನ್ಯಾ ಕೂಡಾ ಆತಂಕವನ್ನು ಹುಟ್ಟಿಸಿದ್ದು, ಪ್ರಕರಣಗಳು ಇನ್ನಷ್ಟು ಹೆಚ್ಚುವ ಮುನ್ನ ಆರೋಗ್ಯ ಇಲಾಖೆ ಮುಂಜಾಗ್ರತೆ ವಹಿಸಬೇಕಿದೆ.