ಅಮೆರಿಕದ ಮಾಜಿ ಅಧ್ಯಕ್ಷ ಹಾಗೂ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರನ್ನು ಹತ್ಯೆ ಮಾಡಲು ಇರಾನ್ ನಡೆಸಿದ ಸಂಚಿನ ಬಗ್ಗೆ ಯುಎಸ್ ಅಧಿಕಾರಿಗಳು ಇತ್ತೀಚಿನ ದಿನಗಳಲ್ಲಿ ಗುಪ್ತಚರ ವರದಿಯನ್ನು ಪಡೆಡಿದ್ದರು ಎಂದು CNN ವರದಿ ಮಾಡಿದೆ.
ಈ ಬೆಳವಣಿಗೆ Secret Service ಟ್ರಂಪ್ ಸುತ್ತ ಭದ್ರತೆಯನ್ನು ಹೆಚ್ಚಿಸಲು ಕಾರಣವಾಗಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಆದಾಗ್ಯೂ, ಜುಲೈ 13 ರಂದು ಪೆನ್ಸಿಲ್ವೇನಿಯಾ ರ್ಯಾಲಿಯಲ್ಲಿ ಟ್ರಂಪ್ ಅವರ ಹತ್ಯೆ ಮಾಡಲು ಯತ್ನಿಸಿದ 20 ವರ್ಷದ ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ಇರಾನಿನ ಸಂಚಿನೊಂದಿಗೆ ಸಂಪರ್ಕ ಹೊಂದಿದ್ದ ಬಗ್ಗೆ ಯಾವುದೇ ಸೂಚನೆ ಇಲ್ಲ ಎಂದು ಸಿಎನ್ಎನ್ ವರದಿಯಲ್ಲಿ ಹೇಳಿದೆ.
ಜುಲೈ 13 ರಂದು ಟ್ರಂಪ್ ಅವರನ್ನು ಹತ್ಯೆ ಮಾಡಲೆಂದು ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ಗುಂಡು ಹಾರಿಸಿದ್ದ. ದಾಳಿಯ ನಂತರ Secret Service ಆತನನ್ನು ಗುಂಡಿಕ್ಕಿ ಹತ್ಯೆಗೈದಿತ್ತು.
ಇರಾನ್ ತನ್ನ ವಿರುದ್ಧದ ಗಂಭೀರ ಆರೋಪಗಳನ್ನು ನಿರಾಕರಿಸಿದ್ದು, ”ಎಲ್ಲವೂ ಆಧಾರರಹಿತ ಮತ್ತು ದುರುದ್ದೇಶಪೂರಿತ” ಎಂದು ಹೇಳಿದೆ.
“ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ನ ದೃಷ್ಟಿಕೋನದಿಂದ, ಟ್ರಂಪ್ ಒಬ್ಬ ಕ್ರಿಮಿನಲ್ ಆಗಿದ್ದು, ಜನರಲ್ ಸೊಲೈಮಾನಿ ಅವರ ಹತ್ಯೆಗೆ ಆದೇಶ ನೀಡಿದ ನ್ಯಾಯಾಲಯದಲ್ಲಿ ಕಾನೂನು ಕ್ರಮ ಜರುಗಿಸಬೇಕು ಮತ್ತು ಶಿಕ್ಷೆಗೆ ಗುರಿಯಾಗಬೇಕು. ಇರಾನ್ ಅವರನ್ನು ನ್ಯಾಯಕ್ಕೆ ತರಲು ಕಾನೂನು ಮಾರ್ಗವನ್ನು ಆರಿಸಿಕೊಂಡಿದೆ” ಎಂದು ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ನ ಶಾಶ್ವತ ಮಿಷನ್ ನ ವಕ್ತಾರರು ವಿಶ್ವಸಂಸ್ಥೆಗೆ ಹೇಳಿಕೆ ನೀಡಿದ್ದಾರೆ ಎಂದು ಸಿಎನ್ಎನ್ಗೆ ತಿಳಿಸಿದೆ.