ನಮ್ಮ ಮೆಟ್ರೋ ಬಳಿಕ ಬೆಂಗಳೂರಿನ ಖಾಸಗಿ ಮಾಲ್ನಲ್ಲಿ ರೈತನಿಗೆ ಅವಮಾನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ರೈತರೊಬ್ಬರು ಪಂಚೆ ಧರಿಸಿ ಬಂದಿದ್ದಕ್ಕೆ ಒಳಗೆ ಬಿಡದೇ ಅವಮಾನ ಮಾಡಿರುವ ಘಟನೆ ಬೆಂಗಳೂರು ಮಾಗಡಿ ರಸ್ತೆಯಲ್ಲಿರುವ ಜಿ.ಟಿ ಮಾಲ್ನಲ್ಲಿ ನಡೆದಿದೆ.
ಮಾಲ್ ಆಡಳಿತ ಮಂಡಳಿಯ ವರ್ತನೆಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.
ಜಿಟಿ ಮಾಲ್ ನ ಸೆಕ್ಯುರಿಟಿ ಯನ್ನ ಕೆಲಸದಿಂದ ವಜಾ ಮಾಡಲಾಗಿದ್ದು ರೈತನ ಪ್ರವೇಶಕ್ಕೆ ನಿರ್ಬಂಧ ಮಾಡಿದ್ದ ಸೆಕ್ಯುರಿಟಿ ಇದನ್ನ ಖಂಡಿಸಿ ಇಂದು ಪ್ರತಿಭಟನೆ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದರು.
ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ಮಾಡಿ ಜಿಟಿ ಮಾಲ್ ವಿರುದ್ಧ ಕೆಂಡಮಂಡಲವಾಗಿದ್ದು ಇದರ ಬೆನ್ನಲ್ಲೆ ರೈತನನ್ನ ನಿರಾಕರಿಸಿದ ಸೆಕ್ಯುರಿಟಿ ಕೆಲಸದಿಂದ ವಜಾ ಮಾಡಲಾಗಿದೆ.
ಹಾವೇರಿ ಮೂಲದ ನಾಗರಾಜ್ ಎಂಬುವವರು ತಮ್ಮ ತಂದೆ – ತಾಯಿಯನ್ನು ಜಿ.ಟಿ ಮಾಲ್ಗೆ ಕರೆದುಕೊಂಡು ಬಂದಿದ್ದರು. ತಂದೆ-ತಾಯಿಗೆ ಸಿನಿಮಾ ತೋರಿಸಲು ಮಾಲ್ಗೆ ಕರೆದುಕೊಂಡು ಬಂದಿದ್ದರು. ಆದ್ರೆ ತಮ್ಮ ತಂದೆ ಪಂಚೆ ಧರಿಸಿದ್ದಾರೆ ಅನ್ನೋ ಕಾರಣಕ್ಕೆ ಮಾಲ್ ಸಿಬ್ಬಂದಿ ಪ್ರವೇಶ ನಿರಾಕರಿಸಿದ್ದಾರೆ. ಪಂಚೆ ಧರಿಸಿದರಿಗೆ ಮಾಲ್ ಒಳಗೆ ಬಿಡುವುದಿಲ್ಲ, ನಮ್ಮ ಮಾಲ್ನಲ್ಲಿ ಈ ರೀತಿ ರೂಲ್ಸ್ ಇದೆ ಅಂತ ಸಿಬ್ಬಂದಿ ಹೇಳಿರುವುದಾಗಿ ನಾಗರಾಜ್ ಆರೋಪಿಸಿದ್ದಾರೆ.