ಮಧುಮೇಯಿಗಳು ದಿನಕ್ಕೆ ಎಷ್ಟು ಪ್ರೋಟೀನ್ ಸೇವಿಸುತ್ತಾರೆ ಎಂಬುದರ ಮೇಲೆ ಮೊಟ್ಟೆ ಸೇವನೆ ನಿರ್ಧಾರವಾಗಿದೆ ದಿನಕ್ಕೆ ಒಂದಕ್ಕಿಂತ ಕಡಿಮೆ ಅಥವಾ ವಾರದಲ್ಲಿ ಐದಕ್ಕಿಂತ ಹೆಚ್ಚಿಲ್ಲದಂತೆ ಮೊಟ್ಟೆ ಸೇವನೆ ಒಳ್ಳೆಯದು
ಮಧುಮೇಹಿಗಳಲ್ಲಿ ರಕ್ತದ ಕೊಬ್ಬು ಏರಿಳಿತವಾಗದ ರೀತಿ ನೋಡಿಕೊಳ್ಳುವುದು ಮುಖ್ಯವಾಗಿದೆ ಮೊಟ್ಟೆ ಸೇವನೆ ದೇಹದ ಕೊಬ್ಬನ್ನು ಹೆಚ್ಚಿಸುವುದಿಲ್ಲ ಎಂದು ಅನೇಕ ಅಧ್ಯಯನಗಳಲ್ಲಿ ಹೇಳಿವೆವಾರಕ್ಕೆ ಎಷ್ಟು ದಿನ ಮೊಟ್ಟೆ ತಿನ್ನಬಹುದು ಎಂದು ವೈದ್ಯರಮ್ಮ ಕೇಳಿದರೆ ಒಳ್ಳೆಯದು ಹಾಗಾಗಿ ಯಾರು ಮೊಟ್ಟೆಯನ್ನು ತಿನ್ನಬೇಡಿ ವೈದ್ಯರ ಬಳಿ ಹೋಗಿಯೇ ಚೆಕ್ ಮಾಡಿಕೊಂಡು ನಂತರ ಸೇವಿಸಿ
ಮಧುಮೇಹಿಗಳಲ್ಲಿ ಸಾಮಾನ್ಯವಾಗಿ ಆಲಸ್ಯ ಮತ್ತು ಸೋಮಾರಿತನದ ಲಕ್ಷಣಗಳು ಕಾಣುತ್ತದೆ. ಈ ಲಕ್ಷಣಗಳು ಸಮತೋಲಿತ ಆಹಾರದ ಕೊರತೆಯಿಂದಲೂ ಕಾಣಬಹುದಾಗಿದೆ, ಇದೇ ಕಾರಣಕ್ಕೆ ಮಧುಮೇಹಿಗಳು ತಮ್ಮ ಆಹಾರದಲ್ಲಿ ಪ್ರೋಟಿನ್ಗೆ ಒತ್ತು ನೀಡುವುದು ಅವಶ್ಯಕವಾಗಿದೆ. ಹೈದರಾಬಾದ್ನ ಖ್ಯಾತ ಪೌಷ್ಟಿಕಾಂಶತಜ್ಞೆ ಲತಾಶಶಿ ಪ್ರಕಾರ, ಮಧುಮೇಹಿಗಳು ನಿತ್ಯ ಮೊಟ್ಟೆ ಸೇವಿಸುವುದು ಆರೋಗ್ಯ ದೃಷ್ಟಿಯಿಂದ ಉತ್ತಮವಾದ ಕ್ರಮವಾಗಿದೆ. ಆದರೆ, ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶ ಎಂದರೆ, ಇವರು ದಿನಕ್ಕೆ ಎಷ್ಟು ಪ್ರೋಟಿನ್ ಸೇವಿಸುತ್ತಾರೆ ಎಂಬುದರ ಮೇಲೆ ಮೊಟ್ಟೆ ಸೇವನೆ ನಿರ್ಧರಿತವಾಗುತ್ತದೆ.
ಮಧುಮೇಹಿಗಳು ದಿನಕ್ಕೆ ಒಂದಕ್ಕಿಂತ ಕಡಿಮೆ ಮೊಟ್ಟೆ ಸೇವಿಸುವಂತೆ ಅಥವಾ ವಾರದಲ್ಲಿ ಐದಕ್ಕಿಂತ ಹೆಚ್ಚಿಲ್ಲದಂತೆ ಸೇವಿಸುವಂತೆ ಸಲಹೆ ನೀಡಲಾಗುತ್ತದೆ. ಮೊಟ್ಟೆ ಸೇವನೆ ದೇಹದ ಕೊಬ್ಬನ್ನು ಹೆಚ್ಚಿಸುವುದಿಲ್ಲ. ಮಧುಮೇಹಿಗಳಲ್ಲಿ ರಕ್ತದ ಕೊಬ್ಬು ಏರಿಳಿತವಾಗದ ರೀತಿ ನೋಡಿಕೊಳ್ಳುವುದು ಮುಖ್ಯವಾಗಿದೆ. ಅನೇಕ ಅಧ್ಯಯನಗಳು ಹೇಳುವಂತೆ ಮೊಟ್ಟೆಯು ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿಸುವುದಿಲ್ಲ.
ವಾರಕ್ಕೆ ಎಷ್ಟು ಮೊಟ್ಟೆಯನ್ನು ನಿರ್ದಿಷ್ಟವಾಗಿ ತಿನ್ನಬೇಕು ಎಂಬುದಕ್ಕೆ ರಕ್ತದಲ್ಲಿನ ಲಿಪಿಡ್ ಪ್ರೋಫೈಲ್ ಪರೀಕ್ಷೆ ನಡೆಸುವುದು ಉತ್ತಮ ಎನ್ನುತ್ತಾರೆ ಲತಾಶಶಿ. ಈ ಪರೀಕ್ಷೆ ಮೂಲಕ ರಕ್ತದಲ್ಲಿನ ನಿಮ್ಮ ಕೊಲೆಸ್ಟ್ರಾಲ್ ಮಟ್ಟ ತಿಳಿಯಲಿದೆ. ಇದರ ಆಧಾರದ ಮೇಲೆ ಆರೋಗ್ಯ ತಜ್ಞರು ಎಷ್ಟು ಮೊಟ್ಟೆ ಸೇವನೆ ಮಾಡಬೇಕು ಎಂದು ಸಲಹೆ ನೀಡುತ್ತಾರೆ.