ಉಡುಪಿ ಜಿಲ್ಲೆಯಾದ್ಯಂತ ಇಂದು ರೆಡ್ ಅಲರ್ಟ್ ಘೋಷಿಸಲಾಗಿದೆ. ಜಿಲ್ಲೆಯಾದ್ಯಂತ ಧಾರಾಕಾರ ಗಾಳಿ ಮಳೆ ಮುಂದುವರಿದಿದ್ದು, ಸುವರ್ಣಾ, ಸೀತಾ ನದಿಗಳು ತುಂಬಿ ಹರಿಯುತ್ತಿವೆ
ಆಗುಂಬೆ, ಚಿಕ್ಕಮಗಳೂರಿನಲ್ಲಿ ಮಳೆಯಾದ ಪರಿಣಾಮ ಕರಾವಳಿಯ ನದಿಗಳು ಭರ್ತಿಯಾಗಿವೆ. ನದಿ, ಹೊಳೆ ಪಾತ್ರದ ಗದ್ದೆಗಳಲ್ಲಿ ನೆರೆಯ ವಾತಾವರಣ ಕಂಡುಬಂದಿದೆ. ನದಿ, ಸಮುದ್ರ ತೀರದ ಜನಕ್ಕೆ ಉಡುಪಿ ಜಿಲ್ಲಾಡಳಿತ ಕಟ್ಟೆಚ್ಚರ ನೀಡಿದ್ದು, ಎರಡು ದಿನ ಸಮುದ್ರ ಮೀನುಗಾರಿಕೆ ನಿಷೇಧಿಸಿದೆ