ರಾಜ್ಯದ ಎರಡು ಜಿಲ್ಲೆಗಳಲ್ಲಿ ಮಾತ್ರ ಪ್ರತಿಷ್ಠಾಪನೆಗೊಳ್ಳುವ ಸಸಿ ಡೋಲಿಯನ್ನು ನೋಡಲು ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮಕ್ಕೆ ಜನಸಾಗರವೇ ಹರಿದು ಬಂದಿತ್ತು. ಹತ್ತಿ ಮತ್ತು ಅಳವೆ ಬೀಜಗಳಿಂದ ಈ ಸಸಿ ಡೋಲಿಯನ್ನು ನಿರ್ಮಾಣ ಮಾಡಲಾಗುತ್ತದೆ. ಇದನ್ನು ನಿರ್ಮಾಣ ಮಾಡುವಾಗ ಅದರದ್ದೇ ಆದ ಕೆಲವು ಕಟ್ಟು ಪಾಡುಗಳಿವೆ.
ಹತ್ತಿಯಲ್ಲಿ ಅಳವೆ ಬೀಜಗಳನ್ನು ಹಾಕಿ ಮೊಹರಂ ಕೊನೆಯ ದಿನದವರೆಗೂ ಡೋಲಿಯಲ್ಲಿ ಅಳವೆ ಬೀಜಗಳನ್ನು ಬೆಳೆಸಲಾಗುತ್ತದೆ.
ಈ ರೀತಿ ಡೋಲಿ ನಿರ್ಮಾಣವಾಗೋದು ರಾಜ್ಯದ ಎರಡು ಜಿಲ್ಲೆಗಳಲ್ಲಿ ಮಾತ್ರ. ವಿಜಯಪುರ ಜಿಲ್ಲೆ ಬಿಟ್ಟರೆ ಈ ಡೋಲಿ ನೋಡಲು ಸಿಗೋದು ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ಮಾತ್ರ. ಮೊಹರಂ ಕೊನೆಯ ದಿನವಾದ ಬುಧವಾರ ಉಪ್ಪಿನ ಬೆಟಗೇರಿ ಗ್ರಾಮದ ಅನೇಕ ಗಲ್ಲಿಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಡೋಲಿ ಹಾಗೂ ಪಾಂಜಾಗಳು ಗ್ರಾಮದ ಕೂಟ್ನಲ್ಲಿ ಸಮಾಗಮಗೊಂಡವು. ಇದರಲ್ಲಿ ಪ್ರಮುಖವಾಗಿ ಗಮನಸೆಳೆದಿದ್ದು ಇದೇ ಸಸಿ ಡೋಲಿ.