ಬೆಂಗಳೂರು: ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮೀಸಲಾತಿ ವಿಚಾರ ಬಗ್ಗೆ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.
ಸೋಮವಾರದಿಂದ ನಡೆದ ಕ್ಯಾಬಿನೆಟ್ ಲ್ಲಿ ವಿಧೇಯಕ ತರುವ ಬಗ್ಗೆ ನಿರ್ಧಾರ ಆಗಿದೆ ಕನ್ನಡಿಗರಿಗೆ ಉದ್ಯೋಗ ಕೊಡಬೇಕು ಈ ವಿಧೇಯಕ ತರಬೇಕು ಅಂತಾ ಅದೇ ರೀತಿ ಕಾರ್ಖಾನೆ ಹಾಗೂ ಕಂಪನಿಯವರನ್ನ ಸಹ ಪರಿಗಣಿಸಬೇಕು
ಸ್ಕೀಲ್ ವಿಚಾರದಲ್ಲಿ ಹಸ್ತಕ್ಷೇಪ ಇರಬಾರದು ಎಂದು ಮನವಿ ಮಾಡಿದ್ದಾರೆ ಕೈಗಾರಿಕಾ ಕಾನೂನನ್ನಲ್ಲಿ ಇದೆಲ್ಲಾ ಇದೆ ಕೆಲ ಗೊಂದಲಗಳನ್ನ ಸೃಷ್ಟಿ ಆಗಿದೆ ಅದನ್ನ ಬಗೆಹರಿಸಬೇಕು ಕನ್ನಡಿಗರ ಹಿತರಕ್ಷಣೆ ಮಾಡ್ತೀವಿ ಅದೇ ರೀತಿ ಮಾಲೀಕರು ವ್ಯಕ್ತಪಡಿಸಿರುವ ಆತಂಕವನ್ನ ಸಹ ಬಗೆಹರಿಸಬೇಕಾಗಿದೆ ಅವರ ಹಿತಾಸಕ್ತಿಯನ್ನ ಸಹ ಕಾಪಾಡುವ ಕೆಲಸ ಮಾಡ್ತೀವಿ
ಸ್ಕೀಲ್ ಬೇಕು ಅಂತ ಹೇಳಿದ್ರೆ ನಾವು ಅವರಿಗೆ ಕೌಶಲ್ಯ ಕೊಡುವ ಕೆಲಸ ಮಾಡ್ತೀವಿ ಇದರಿಂದ ಯಾರಿಂದಲೂ ಗಾಬರಿ ಆಗುವುದು ಬೇಡ ಅಗತ್ಯ ಇದ್ರೆ ಕಂಪನಿ ಮಾಲೀಕರ ಜತೆ ಸಭೆ ಮಾಡುತ್ತೇವೆ ಎಂದು ಸಚಿವ ಎಂ ಬಿ ಪಾಟೀಲ್ ಹೇಳಿದರು.