ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಮಾಲ್ ಗಳಿಗೆ ಎಂಟ್ರಿ ಕೊಡುವ ಮುನ್ನ ಜನರೇ ಎಚ್ಚರ ಎಚ್ಚರ…ಅದರಲ್ಲೂ ಭಾರತೀಯ ಸಂಸ್ಕೃತಿಯ ಉಡುಗೆಯಾದ ಪಂಚೆ ತೊಟ್ಟು ಬರೋರು ಉಷಾರು, ಮಾಲ್ ಗಳಿಗೆ ಎಂಟ್ರಿ ಕೊಡಬೇಕು ಅಂದ್ರೆ ಸ್ಟೈಲ್ ಆಗಿ ಪ್ಯಾಂಟ್, ಶರ್ಟ್ ಸ್ಕರ್ಟ್ ಹಾಕ್ಕೊಂಡು ಬಂದವರಿಗೆ ಮಾತ್ರ ಎಂಟ್ರಿ ಅಂತಿದ್ದಾರೆ ಮಾಲ್ ನವರು ಅರೇ ಇದೇನಪ್ಪ ಹೀಗೆ ಹೇಳ್ತಿದ್ದಾರೆ ಅನ್ಕೊಂಡ್ರಾ… ಅಸಲಿ ವಿಷಯ ತಿಳಿಬೇಕು ಅಂದ್ರೆ ನೀವು ಈ ಸ್ಟೋರಿನ ನೋಡಲೇಬೇಕು….
ಹೌದು,ಮತ್ತೊಮ್ಮೆ ರೈತನಿಗೆ ಅವಮಾನಕರ ಘಟನೆ ನಡೆದಿದೆ..ಮೊನ್ನೆಯಷ್ಟೇ ಮೆಟ್ರೋದಲ್ಲಿ ರೈತನಿಗೆ ಅವಮಾನ ಮಾಡಲಾಗಿತ್ತು ಆ ಘಟನೆ ಮಾಸವಮುನ್ನವೇ ಮತ್ತೊಂದು ಘಟನೆ ನಡೆದಿದೆ… ಪ್ರತಿಷ್ಠಿತ ಮಾಲ್ ಒಂದರಲ್ಲಿ ದೇಶದ ಬೆನ್ನೆಲುಬು ಅನ್ನದಾತನನ್ನು ಮಾಲ್ ಒಳಗೆ ಬಿಡದೆ ಅವಮಾನಿಸಲಾಗಿದೆ….
ನಿನ್ನೆ ಸಂಜೆ ಸಂಜೆ ಜಿಟಿ ವರ್ಲ್ಡ್ ಮಾಲ್ಗೆ ಸಿನಿಮಾ ನೋಡಲು ಪಂಚೆ ಧರಿಸಿಕೊಂಡು ಬಂದ ರೈತನನ್ನು ಒಳಗೆ ಬಿಡದೇ ಅವಮಾನಿಸಿದ ಭದ್ರತಾ ಸಿಬ್ಬಂದಿ ಇಂದು ರೈತನಿಗೆ ಕೈಮುಗಿದು ಕ್ಷಮೆ ಕೇಳಿದ್ದಾನೆ. ಬೆಂಗಳೂರಿನ ಪ್ರತಿಷ್ಠಿತ ಮಾಲ್ಗಳಲ್ಲಿ ಒಂದಾದ ಜಿಟಿ ವರ್ಲ್ಡ್ ಮಾಲ್ನಲ್ಲಿ ರೈತನು ಪಂಚೆ ಹಾಕಿಕೊಂಡು ಬಂದಿದ್ದಾನೆಂದು ಒಳಗೆ ಬಿಡದೇ ಅವಮಾನ ಮಾಡಿದ ಘಟನೆ ನಡೆದಿದೆ. ಈ ಘಟನೆಗೆ ರೈತ ಸಂಘಟನೆಗಳಿಂದ ಭಾರಿ ವಿರೋಧ ವ್ಯಕ್ತವಾದ ಬೆನ್ನಲ್ಲಿಯೇ ಜಿಟಿ ಮಾಲ್ ಸಕ್ಯೂರಿಟಿ ಸಿಬ್ಬಂದಿ ರೈತನಿಗೆ ಕೈ ಮುಗಿದು ಕ್ಷಮೆ ಕೇಳಿದ್ದಾನೆ.
ಇನ್ನು ಎಲ್ಲಡೆ ಮಾಲ್ ಸಿಬ್ಬಂದಿಯ ನಡೆ ವಿರುದ್ಧ ತೀವ್ರ ಆಕ್ರೋಶ ಕೇಳಿಬಂದ ಕೂಡಲೇ ರೈತ ಫಕೀರಪ್ಪ ಕರೆಸಿ ಸನ್ಮಾನ ಮಾಡಿ ಜಿಟಿ ಮಾಲ್ ಆಡಳಿತ ಮಂಡಳಿ ಕ್ಷಮೆ ಕೇಳಿದೆ.ಪ್ರಜಾ ಟಿವಿ ಮೂಲಕ ರೈತ ಫಕೀರಪ್ಪ ಅವರಿಗೆ ಜಿಟಿ ಮಾಲ್ ಯಶವಂತ್ ಕ್ಷಮಾಪಣೆ ಕೋರಿದ್ದಾರೆ. ನಿನ್ನೆ ಅಚಾತುರ್ಯ ಘಟನೆ ನಡೆದಿದೆ, ನಿನ್ನೆ ಮಧ್ಯಾಹ್ನ ಲುಂಗಿ ಉಟ್ಟವರಿಂದ ಮುಜಗುರದ ಸಂಗತಿ ಜರುಗಿದೆ. ಈ ಕಾರಣಕ್ಕೆ ಸಂಜೆ ಪಂಚೆ ಉಟ್ಟವರನ್ನು ಒಳಬಿಟ್ಟಿಲ್ಲ, ಬೇಕು ಅಂತ ಮಾಡಿಲ್ಲ. ಮ್ಯಾನೇಜ್ ಮೆಂಟ್ ಸೂಚನೆ ಕಾಲಕಾಲಕ್ಕೆ ಬದಲಾಗುತ್ತಿರುವೆ, ನಮ್ಮ ಕರ್ತವ್ಯ ನಾವು ಮಾಡಿದ್ದೇವೆ. ಈ ರೀತಿ ಅವಮಾನ ಮಾಡಿದ ಸೆಕ್ಯುರಟಿ ಅರುಣ್ ಮೇಲೆ ಕ್ರಮ ಕೈಗೊಳ್ತೇವೆ. ಈ ರೀತಿ ರೈತನಿಗೆ ಅವಮಾನ ಆಗಬಾರದಿತ್ತು. ನನ್ನ ಕಡೆಯಿಂದ ನನ್ನ ಸೆಕ್ಯುರಟಿ ತಂಡದ ಪರವಾಗಿ ಕ್ಷಮೆ ಕೇಳ್ತೇನೆ, ದಯಮಾಡಿ ನಮ್ಮನ್ನು ಕ್ಷಮಿಸಿ ಎಂದು ತಿಳಿಸಿದ್ದಾರೆ.
ಇನ್ನು ಮಾಲ್ ಸಿಬ್ಬಂದಿಗಳ ವಿರುದ್ಧ ವಿವಿಧ ರೈತ ಪರ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು ಜಿಟಿ ಮಾಲ್ ಮುಂದೆ ಪ್ರತಿಭಟನೆ ನಡೆಸುವ ಮೂಲಕ ಮಾಲ್ ಸಿಬ್ಬಂದಿಗಳ ವಿರುದ್ಧ ಕಿಡಿ ಕಾರಿದ್ರು.. ಬಳಿಕ ಮಾಲ್ ನ ಇಂಚಾರ್ಜ್ ಆದಂತ ಸುರೇಶ್ ಅವಮಾನಿಸಿದ್ದ ರೈತ ಪಕೀರಪ್ಪನವರಿಗೆ ಶಾಲು ಹಾರ ಹಾಕುವುದರ ಮೂಲಕ ಮಾಲ್ ನ ಒಳಂಗನದಲ್ಲೇ ಬಹಿರಂಗವಾಗಿ ಕ್ಷಮೆ ಯಾಚಿಸಿದ್ದಾರೆ….
ಒಟ್ಟಾರೆಯಾಗಿ, ಬೆಂಗಳೂರಿನಲ್ಲಿ ಪದೇ ಪದೇ ಈ ರೀತಿಯ ಘಟನೆಗಳು ನಡೀತಾನೇ ಇದಾವೆ.. ಇಂತಹ ಘಟನೆ ಗಳು ಮತ್ತೆ ಮತ್ತೆ ನಡೀಬಾರದು ಅಂದ್ರೆ ಕಠಿಣ ಕ್ರಮ ಜರುಗಿಸುವುದು ಅನಿವಾರ್ಯ……