ವಾಷಿಂಗ್ಟನ್: ಮಹಿಳೆಯನ್ನು ಕೊಂದು ಆಕೆಯ ಹೃದಯ ಕತ್ತರಿಸಿ ಹೊರ ತೆಗೆದು ತಿನ್ನುವುದರ ಜೊತೆಗೆ ನಾಲ್ಕು ವರ್ಷದ ಮಗು ಸೇರಿದಂತೆ ಇಬ್ಬರನ್ನು ಕೊಂದಿದ್ದ ವ್ಯಕ್ತಿಗೆ ಅಮೆರಿಕದ ಒಕ್ಲಹೋಮ ರಾಜ್ಯದಲ್ಲಿ ಜಿವಾವಧಿ ಶಿಕ್ಷೆ ವಿಧಿಸಲಾಗಿದೆ.
44 ವರ್ಷದ ಲಾರೆನ್ಸ್ ಪಾಲ್ ಆಂಡರ್ಸನ್ ಜಿವಾವ ಶಿಕ್ಷೆಗೆ ಗುರಿಯಾದ ವ್ಯಕ್ತಿ.
ಈತ 2021 ರಲ್ಲಿ ಕೊಲೆ ಮಾಡಿ ಜೈಲು ಸೇರಿದ್ದ ಅಲ್ಲಿಂದ ಬಿಡುಗಡೆಯಾದ ನಂತರ ಆತ ಆಂಡ್ರಿಯಾ ಎಂಬಾಕೆಯ ಹತ್ಯೆ ಮಾಡಿ ಆಕೆಯ ಹೃದಯ ಹೊರ ತೆಗೆದಿದ್ದ. ನಂತರ ಹೃದಯವನ್ನು ಚಿಕ್ಕಪ್ಪನ ಮನೆಗೆ ತೆಗೆದುಕೊಂಡು ಹೋಗಿ ಅಲೂಗಡ್ಡೆಯೊಂದಿಗೆ ಬೇಯಿಸಿ ತಿಂದಿದ್ದ ಎಂದು ವರದಿಯಾಗಿದೆ.
ನಂತರ 67 ವರ್ಷದ ಲಿಯಾನ್ ಪೈ ಮತ್ತು ಅವರ 4 ವರ್ಷದ ಮೊಮ್ಮಗಳು ಕೆಯೋಸ್ ಯೇಟ್ಸ ಅವರನ್ನು ಇರಿದು ಕೊಂದಿದ್ದು ಸದ್ಯ ಈತನಿಗೆ ಜೀವಾವದಿ ಶಿಕ್ಷೆ ಪ್ರಕಟವಾಗಿದೆ.