ನಗರದಲ್ಲಿ 100 ಕಿಮೀ ಸಿಗ್ನಲ್ ಫ್ರೀ ಮಾಡಬೇಕು. ಅದಕ್ಕಾಗಿ 100 ಕಿಮೀ ಫ್ಲೈಓವರ್ 100 ನಿರ್ಮಿಸುವ ಚಿಂತನೆಯಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದರು.
ರಾಗಿಗುಡ್ಡದಲ್ಲಿ ದಕ್ಷಿಣ ಭಾರತದ ಅತಿ ಎತ್ತರದ ರೋಡ್-ಕಮ್-ರೈಲು ಮೇಲ್ಸೇತುವೆ ಲೋಕಾರ್ಪಣೆಗೊಳಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಬುಧವಾರ ಸಿಎಂ ನೇತೃತ್ವದಲ್ಲಿ ಸಭೆ ಮಾಡಿದ್ದೆವು. ಸಾರಿಗೆ ಸಚಿವರೂ ಸಹ ಇದ್ದರು. ಬೆಂಗಳೂರಲ್ಲಿ ಸುಮಾರು 100 ಕಿಮೀ ಫ್ಲೈಓವರ್ ಮಾಡುವ ಚರ್ಚೆ ಮಾಡಿದ್ದೇವೆ ಎಂದು ವಿವರಿಸಿದರು
ಇಂದು ಬೆಂಗಳೂರು ನಗರಕ್ಕೆ ಐತಿಹಾಸಿಕ ದಿನ. ಮನಷ್ಯನ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ. ಹಾಗಾಗಿ ಈ ಹುಟ್ಟು-ಸಾವಿನ ಮಧ್ಯೆ ಏನು ಮಾಡುತ್ತೇವೆ ಅನ್ನೋದು ಮುಖ್ಯ. ನಾನು ಹೇಗೆ ಬೆಂಗಳೂರು ಮಂತ್ರಿಯಾಗಿದ್ದೇನೋ, ರಾಮಲಿಂಗಾ ರೆಡ್ಡಿ ಅವರೂ ಸಹ ಬೆಂಗಳೂರು ಮಂತ್ರಿ ಆಗಿದ್ದವರು. ಅವರೇ ಈ ಡಬಲ್ ಡೆಕ್ಕರ್ ಮಾದರಿಯನ್ನ ತಂದಿದ್ದಾರೆ. ನನಗೆ ಉದ್ಘಾಟನೆ ಮಾಡುವ ಭಾಗ್ಯ ಸಿಕ್ಕಿದೆ. ಮುಂದೆ ಈ ರೀತಿ ಯಾವುದೇ ಡಬಲ್ ಡೆಕ್ಕರ್ ಪ್ಲೈಓವರ್ ಬಂದರೇ, ಅದಕ್ಕೆ ರಾಮಲಿಂಗಾ ರೆಡ್ಡಿ ಮಾಡಲ್ ಅಂತಲೇ ಕರಿಬೇಕು ಎಂದು ತಿಳಿಸಿದರು
ರಾಮಲಿಂಗಾ ರೆಡ್ಡಿ ಅವರು ಮೊದಲಬಾರಿಗೆ ಡಬಲ್ ಡೆಕ್ಕರ್ ಮಾದರಿ ಪರಿಚಯಿಸಿದ್ದಾರೆ. ನಾಗ್ಪುರದಲ್ಲಿಯೂ ಇಂತಹ ಪ್ರಯೋಗ ಮಾಡಿದ್ದಾರೆ. ಇದನ್ನ ನೋಡಿಕೊಂಡು ಮುಂದೆ ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ಮಾಡುತ್ತೇವೆ. ಹಣ ಹೆಚ್ಚಾದರೂ ಪರವಾಗಿಲ್ಲ. ಇದೇ ಮಾದರಿ ಮಾಡಲು ತೀರ್ಮಾನ ಮಾಡಿದ್ದೇವೆ. ಸಿಎಂ ಬಳಿ ನಾನು ಮತ್ತು ನಮ್ಮ ಅಧಿಕಾರಿಗಳೂ ಇದನ್ನ ಪ್ರಸ್ತಾಪಿಸಿದ್ದಾರೆ. ಒಟ್ಟಾರೆ ಈ ಯೋಜನೆಗೆ ಮೂಲ ಕಾರಣವೇ ರಾಮಲಿಂಗಾ ರೆಡ್ಡಿ. ಇದು ರಾಮಲಿಂಗಾ ರೆಡ್ಡಿ ಮಾಡೆಲ್ ಅಂತಾ ಹೇಳಲು ಇಚ್ಛಿಸುತ್ತೇನೆ. ಇದರಿಂದ ಸಾಕಷ್ಟು ಜನರಿಗೆ ಉಪಯೋಗ ಆಗಲಿದೆ. ಮುಂದೆ ಮೆಟ್ರೋ, ಬಿಬಿಎಂಪಿ ಸಹಯೋಗದಲ್ಲಿ