ಏಲಕ್ಕಿಯ ಸುವಾಸನೆ ನಾವು ಸ್ವಲ್ಪ ದೂರದಲ್ಲಿದ್ದರೂ ನಮ್ಮ ಮೂಗಿಗೆ ಬಡಿಯುತ್ತದೆ. ಅಡುಗೆ ಎಲ್ಲೂ ಕೂಡ ಇದರ ಬಳಕೆಯಿಂದ ಆಹಾರದ ರುಚಿ ಮತ್ತು ಪರಿಮಳ ಹೆಚ್ಚಾಗುತ್ತದೆ. ಇದಕ್ಕೆ ಅನುಗುಣವಾಗಿಯೇ ಏಲಕ್ಕಿಯಲ್ಲಿ ಸಾಕಷ್ಟು ಆರೋಗ್ಯ ಪ್ರಯೋಜನಗಳು ನಮಗೆ ಲಭ್ಯವಿವೆ.
ಏಲಕ್ಕಿಯನ್ನು ನಿಯಮಿತವಾಗಿ ತಿನ್ನುವುದು ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಅದೇ ಸಮಯದಲ್ಲಿ, ಆಂಟಿಮೈಕ್ರೊಬಿಯಲ್ ನಿಂದ ಸಮೃದ್ಧವಾಗಿರುವ ಏಲಕ್ಕಿಯು ಸೋಂಕುಗಳ ವಿರುದ್ಧ ಪರಿಣಾಮಕಾರಿ. ಹೃದಯವನ್ನು ಆರೋಗ್ಯಕರವಾಗಿ ಇರಿಸುತ್ತೆ. ಏಲಕ್ಕಿಯನ್ನು ತಿನ್ನುವುದರಿಂದ ಹೃದಯದ ಆರೋಗ್ಯವೂ ಚೆನ್ನಾಗಿರುತ್ತೆ. ಏಲಕ್ಕಿಯನ್ನು ಉತ್ಕರ್ಷಣ ನಿರೋಧಕ ಅಂಶಗಳ ಅತ್ಯುತ್ತಮ ಮೂಲವೆಂದು ಎನ್ನಲಾಗುತ್ತದೆ. ಹಸಿರು ಏಲಕ್ಕಿಯನ್ನು ಸೇವಿಸುವುದರಿಂದ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಬಹುದು.
ಬಾಯಿಯ ಆರೋಗ್ಯಕ್ಕೆ ಸಹಕಾರಿಯಾಗಿದೆ. ಬಾಯಿಯ ದುರ್ವಾಸನೆ ತೊಡೆದುಹಾಕಲು ಅನೇಕರು ಏಲಕ್ಕಿಯನ್ನು ತಿನ್ನುತ್ತಾರೆ. ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿದಿನ 5 ನಿಮಿಷಗಳ ಕಾಲ ಏಲಕ್ಕಿಯನ್ನು ಅಗಿಯುವುದು ಉತ್ತಮ.
ಕ್ಯಾನ್ಸರ್ ವಿರುದ್ಧ ಹೋರಾಡುವ ಏಲಕ್ಕಿ
ಏಲಕ್ಕಿ ಕ್ಯಾನ್ಸರ್ ವಿರುದ್ಧ ಹೋರಾಡಲು ಸಹ ಉತ್ತಮವಾಗಿದೆ. ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿರುವ ಏಲಕ್ಕಿಯನ್ನು ತಿನ್ನುವುದರಿಂದ ಕ್ಯಾನ್ಸರ್ ಕೋಶಗಳನ್ನು ಕಡಿಮೆ ಮಾಡುತ್ತದೆ. ಏಲಕ್ಕಿಯನ್ನು
ಆಹಾರದಲ್ಲಿ ಸೇರಿಸುವ ಮೂಲಕ, ನೀವು ಕ್ಯಾನ್ಸರ್ ಅನ್ನು ನಿಮ್ಮಿಂದ ದೂರವಿಡಬಹುದು. ಏಲಕ್ಕಿಯಲ್ಲಿರುವ ಅಂಶಗಳು ಯಕೃತ್ತಿನಿಂದ ವಿಷವನ್ನು ತೆಗೆದುಹಾಕುವಲ್ಲಿ ಸಹಕಾರಿಯಾಗಿದೆ. ಇದರಿಂದಾಗಿ ನಿಮ್ಮ ಯಕೃತ್ತಿನ ಸಂಬಂಧಿತ ಕಾಯಿಲೆಗಳ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ನೀವು ಪ್ರತಿದಿನ ಏಲಕ್ಕಿಯನ್ನು ತಿನ್ನುವ ಮೂಲಕ ಲಿವರ್ ಅನ್ನು ಆರೋಗ್ಯವಾಗಿಡಬಹುದು.
ನಿಮಗಿಷ್ಟವಿದ್ದರೆ ಚಹಾಕ್ಕೆ ಏಲಕ್ಕಿಯನ್ನು ಕೂಡ ಸೇರಿಸಬಹುದು. ಏಲಕ್ಕಿಯನ್ನು ಬೆರೆಸುವುದರಿಂದ ಚಹಾ ತುಂಬಾ ರುಚಿಕರವಾಗಿರುತ್ತದೆ. ಅಲ್ಲದೇ ಚಹಾದ ಪರಿಮಳವು ತುಂಬಾ ಆಹ್ಲಾದಕರವಾಗಿರುತ್ತದೆ.