ಬೆಂಗಳೂರು: ಕ್ಯಾನ್ಸರ್ ಹೆಸರು ಕೇಳಿದ್ರೆ ಸಾಕು ಜನರು ಬೆಚ್ಚಿ ಬಿಳುತ್ತಿದ್ದಾರೆ. ಸದ್ದಿಲ್ಲದೆ ದೇಹ ಹೊಕ್ಕೋ ಈ ಕಾಯಿಲೆ, ಗಮನಕ್ಕೆ ಬರುವುದರೊಳಗೆ ಉಸಿರನ್ನೇ ನಿಲ್ಲಿಸಿ ಬಿಡುತ್ತೆ. ಇಂಥಾ ಮಾರಕ ಕಾಯಿಲೆ ಇದೀಗ ಕನ್ನಡದ ಖ್ಯಾತ ನಿರೂಪಕಿ ಅಪರ್ಣಾರನ್ನು ಬಲಿ ತೆಗೆದುಕೊಂಡಿದೆ. ಇದರ ಬೆನ್ನಲ್ಲೇ ಜನರಲ್ಲಿ ಆತಂಕ ಹೆಚ್ಚುತ್ತಿದೆ. ಈ ಕ್ಯಾನ್ಸರ್ ಬಗ್ಗೆ ಗೂಗಲ್ ನಲ್ಲಿ ಜಾಲಾಡ್ತಿದ್ದಾರೆ.
ಖ್ಯಾತ ನಿರೂಪಕಿ, ನಟಿ ಅಪರ್ಣಾ ಶ್ವಾಸಕೋಶ ಕ್ಯಾನ್ಸರ್ನಿಂದ 2 ವರ್ಷ ಕ್ಯಾನ್ಸರ್ ಜೊತೆ ಹೋರಾಡಿದ್ರು. ಡಾಕ್ಟರ್ 6 ತಿಂಗಳು ಟೈಮ್ ಕೊಟ್ರೆ ಅಪರ್ಣಾ ನಾನಾ.. ನೀನಾ..? ಅಂತ ಹೋರಾಡಿ 2 ವರ್ಷ ಬದುಕಿದ್ರು. ಆದ್ರೆ ಶ್ವಾಸಕೋಶ ಕೊಟ್ಟ ನಿರಂತರ ಬಾದೆಯಿಂದ ಹೋರಾಟದಲ್ಲಿ ಸೋತ ಅಪರ್ಣಾ ಮೊನ್ನೆ ಕೊನೆಯುಸಿರೆಳೆದಿದ್ರು. ಇದರ ಬೆನ್ನಲ್ಲೇ ಇಂಥಾ ಮಾರಕ ರೋಗದ ಬಗ್ಗೆ ತಿಳ್ಕೊಳ್ಳೋಕೆ ಹೆಚ್ಚಿನ ಮಂದಿ ಗೂಗಲ್ ಮೊರೆ ಹೋಗ್ತಿದ್ದಾರೆ. ಪಾಶ್ಚಿಮಾತ್ಯ ದೇಶಗಳಲ್ಲಿ ಶ್ವಾಸಕೋಶ ಕ್ಯಾನ್ಸರ್ ಪ್ರಮಾಣ ಕಡಿಮೆಯಾಗುತ್ತಿದ್ದು, ಭಾರತದಲ್ಲಿ ಇದರ ಪ್ರಮಾಣ ಏರಿಕೆಯಾಗುತ್ತಿದೆ. ಈ ಹಿಂದೆ 70 % ಜನರಲ್ಲಿ ಧೂಮಪಾನ ಮಾಡೋದ್ರಿಂದ ಈ ಶ್ವಾಸಕೋಶ ಕ್ಯಾನ್ಸರ್ ಬರುತ್ತೆ ಎನ್ನಲಾಗ್ತಿತ್ತು. ಆದ್ರೀಗ ಟಾಟಾ ಮೆಡಿಕಲ್ ಸೆಂಟರ್ನ ರಿಸರ್ಚ್ ಪ್ರಕಾರ ಶ್ವಾಸಕೋಶದ ಕ್ಯಾನ್ಸರ್ಗೆ ಒಳಗಾದ ಶೇ.50 ರಷ್ಟು ಮಂದಿ ಧೂಮಪಾನಿಗಳಲ್ಲ ಅನ್ನೋ ಮಾಹಿತಿ ಲಭ್ಯವಾಗಿದೆ.
ಶಾಕಿಂಗ್ ಎನಿಸಿದರು ಇದು ನಿಜ. ಧೂಮಪಾನ ಮಾಡೋರಂತೆಯೇ ಧೂಮಪಾನ ಮಾಡದೇ ಇರೋರಲ್ಲೂ ಈ ಶ್ವಾಸಕೋಶ ಕ್ಯಾನ್ಸರ್ ಕಂಡು ಬಂದಿದೆ. ಇದಕ್ಕೆ ಕಾರಣ ವಾಯುಮಾಲಿನ್ಯ ಅಂತ ಹೇಳಲಾಗ್ತಿದೆ. ಅಷ್ಟೇ ಅಲ್ಲ ಕಾರ್ಖಾನೆಯಿಂದ ಹೊರ ಬರುವ ಕೆಮಿಕಲ್ ಮಿಶ್ರಿತ ಹೊಗೆ, ವೆಹಿಕಲ್ನಿಂದ ಬರುವ ಹೊಗೆ ಗಾಳಿಯಲ್ಲಿ ಸೇರಿಕೊಂಡು ಅಶುದ್ಧವಾಗ್ತಿದೆ. ಈ ಗಾಳಿಯನ್ನ ಸೇವಿಸುವುದರಿಂದ ಶ್ವಾಸಕೋಶಕ್ಕೆ ಹಾನಿಯಾಗ್ತಿದ್ದು, ಇದ್ರಿಂದಾಗಿ ಕ್ಯಾನ್ಸರ್ ಬರುತ್ತೆ ಎನ್ನಲಾಗ್ತಿದೆ. ಅಷ್ಟೇ ಅಲ್ಲ ಸ್ಮೋಕ್ ಮಾಡುವವರ ಪಕ್ಕ ಇರೋದು ಜೊತೆಗೆ ಹೆಚ್ಚು ಮೇಕಪ್ ಮಾಡಿಕೊಳ್ಳುವವರಿಗೂ ಈ ಕ್ಯಾನ್ಸರ್ ಹೆಚ್ಚಾಗಿ ಕಂಡು ಬರ್ತಿದೆ.