ಯಾದಗಿರಿ:- ಯಾದಗಿರಿ ತಾಲೂಕಿನ ಸೈದಾಪುದ ಬಳಿ ವ್ಯಕ್ತಿಯೋರ್ವ ರಾಜಿ ಪಂಚಾಯಿಗೆ ಬಂದಿದ್ದ ಅತ್ತೆ-ಮಾವನ ಜೊತೆಗೆ ಪತ್ನಿಯನ್ನ ಬರ್ಬರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಜರುಗಿದೆ.
ಪ್ರೀತಿ ಮಾಡಿ ಮದುವೆಯಾಗಿದ್ದ (Love Marriage) ಜೋಡಿ ಮನಸ್ತಾಪದಿಂದ ಬೇರಾಗಿದ್ದರು.
ನಂತರ ಇಬ್ಬರಿಗೂ ರಾಜಿ ಪಂಚಾಯಿತಿ ಮಾಡಿದ ಬಳಿಕ ಒಂದಾಗಿದ್ದರು. ಆದರೆ ಪತ್ನಿಯನ್ನು ಮನೆಗೆ ಬಿಡಲು ಬಂದಿದ್ದ ಅತ್ತೆ-ಮಾವರನ್ನ ಕ್ರೂರಿ ಅಳಿಯ ಕೊಂದೇ ಬಿಟ್ಟಿದ್ದಾರೆ. ಅಲ್ಲದೇ ಇದೆ ವೇಳೆ ಹೆಂಡತಿಯನ್ನು ಕೊಂದಿದ್ದಾನೆ.
ಅನ್ನಪೂರ್ಣ (25) ಕವೀತಾ (45) ಬಸವರಾಜಪ್ಪ (52) ಕೊಲೆಯಾದ ದುರ್ದೈವಿಗಳು ಎಂದು ತಿಳಿದು ಬಂದಿದೆ. ನವೀನ್ (30) ಕೊಲೆ ಮಾಡಿರುವ ಆರೋಪಿ ಎನ್ನಲಾಗಿದೆ. ನವೀನ್ ದಾವಣಗೆರೆ ಮೂಲದ ಅನ್ನಪೂರ್ಣ ಎಂಬಾಕೆಯನ್ನ ಕಳೆದ ನಾಲ್ಕು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಈ ದಂಪತಿಗೆಒಂದು ಹೆಣ್ಣು ಮಗು ಕೂಡ ಇದ ಎಂದು ತಿಳಿದುಬಂದಿದೆ.